ಕರ್ನಾಟಕ 50; ನಾಗರೀಕ ಸನ್ಮಾನ


ಅಂಕೋಲಾ : ನಾಗರಿಕ ಸನ್ಮಾನ ಸಮಿತಿ ಅಂಕೋಲಾ ಹಾಗೂ ಸಂಗಾತಿ ರಂಗಭೂಮಿ ಅಂಕೋಲಾ ಇವರ ಆಶ್ರಯದಲ್ಲಿ ದಿನಾಂಕ 5 ನವೆಂಬರ್ 2023 ರಂದು ಭಾನುವಾರ ಸಂಜೆ 4 ಗಂಟೆಗೆ ಪಟ್ಟಣದ ಸ್ವಾತಂತ್ರ್ಯ ಸಂಗ್ರಾಮ ಭವನದಲ್ಲಿ ಕರ್ನಾಟಕ 50 ನಾಗರಿಕ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ನಾಗರಿಕ ಸನ್ಮಾನ ಸಮಿತಿಯ ಅಧ್ಯಕ್ಷರಾದ ಮಹೇಶ ಬಿ ನಾಯಕ ಹೇಳಿದರು. ಪಟ್ಟಣದ ಖಾಸಗಿ ಹೋಟೆಲಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು. ಅಂದು ನಡೆಯುವ ಕಾರ್ಯಕ್ರಮವನ್ನು ಸೇಂಟ್ ಮಿಲಗ್ರಿಸ್ ಸೌಹಾರ್ದ ಸಹಕಾರಿ ನಿಯಮಿತ ಕಾರವಾರ ಇದರ ವ್ಯವಸ್ಥಾಪಕ ನಿರ್ದೇಶಕರಾದ ಜಾರ್ಜ್ ಫರ್ನಾಂಡಿಸ್ ಅವರು ಉದ್ಘಾಟಿಸಲಿದ್ದಾರೆ. ಹೊಸದಿಗಂತ ದಿನಪತ್ರಿಕೆ ಹುಬ್ಬಳ್ಳಿ ಆವೃತ್ತಿಯ ಮುಖ್ಯಸ್ಥರಾದ ವಿಠ್ಠಲದಾಸ್ ಕಾಮತ್ ಗೌರವ ಪುರಸ್ಕಾರವನ್ನು ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ನಿಸರ್ಗ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷರಾದ ಸತ್ಯಾನಂದ ವಿ ನಾಯಕ, ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ನಾಟೀ ವೈದ್ಯ ಹನುಮಂತ ಬಿ ಗೌಡ, ದಿನಕರ ವೇದಿಕೆಯ ಅಧ್ಯಕ್ಷರಾದ ರವೀಂದ್ರ ಕೇಣಿ, ಜಿ. ಪಂ. ಮಾಜಿ ಸದಸ್ಯರಾದ ಜಗದೀಶ್ ಜಿ ನಾಯಕ ಮೊಗಟಾ ಉಪಸ್ಥಿತರಿರಲಿದ್ದು ನಾಗರಿಕ ಸನ್ಮಾನ ಸಮಿತಿಯ ಅಧ್ಯಕ್ಷರಾದ ಮಹೇಶ್ ಬಿ ನಾಯಕ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸಾಧಕರಿಗೆ ಕರ್ನಾಟಕ 50 ಗೌರವ ಪುರಸ್ಕಾರವನ್ನು ನೀಡಲಾಗುತ್ತಿದ್ದು ರಾಷ್ಟ್ರಪತಿ ಬಂಗಾರದ ಪದಕ ಪುರಸ್ಕೃತ ಸಿಐಡಿ ವಿಭಾಗದ ಡಿವೈಎಸ್ಪಿ ಅಂಜುಮಾಲಾ ನಾಯಕ, ಕಾರವಾರ ಸದಾಶಿವಗಡದ ಬಿಜಿವಿಎಸ್ ಕಾಲೇಜಿನ ವಿಶ್ರಾಂತ ಪ್ರಾಚಾರ್ಯ ಮಹೇಶ ಜಿ ಗೋಳಿಕಟ್ಟೆ, ಶಿರಸಿಯ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕ ನಾರಾಯಣ ಭಾಗವತ, ಗೋದಾವರಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತದ ಅಧ್ಯಕ್ಷರಾದ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ರಾಘವೇಂದ್ರ ಡಿ ನಾಯಕ ದೇವರಬಾವಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕಿ ಅಕ್ಷತಾ ಕೃಷ್ಣಮೂರ್ತಿ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಹೊನ್ನಾವರದ ಎಂ ಡಿ ಹರಿಕಾಂತ, ರಾಜ್ಯ ಪ್ರಶಸ್ತಿ ಪುರಸ್ಕೃತ ಶಿಕ್ಷಕ ಕುಮಟಾದ ಪ್ರಕಾಶ್ ಡಿ ನಾಯ್ಕ ಬಿಜಿವಿಎಸ್ ಸದಾಶಿವಗಡ ಕಾರವಾರದ ವಿಶ್ರಾಂತ ಅಧ್ಯಾಪಕರಾದ ಶ್ರೀಧರ ನಾಯಕ,  ವಿಶ್ವೇಶ್ವರಯ್ಯ ರಾಜ್ಯ ಪ್ರಶಸ್ತಿ ಪುರಸ್ಕೃತ ರಾಜು ನಾಯಕ ಸಗಡಗೇರಿ, ಪರಿಸರ ಹೋರಾಟಗಾರ ರವೀಂದ್ರ ಶೆಟ್ಟಿ, ಅತ್ಯುತ್ತಮ ಪ್ರಶಸ್ತಿ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಬೆಳಂಬಾರದ ಮಹದೇವ ಗೌಡ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು. ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅರುಣ್ ಶೆಟ್ಟಿ ಅವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿದರು.  ಸುದ್ದಿಗೋಷ್ಠಿಯಲ್ಲಿ ಕಾರ್ಯನಿರತ ಪತ್ರಕರ್ತರ ಸಂಘದ ಗೌರವಾಧ್ಯಕ್ಷ ರಾಘು ಕಾಕರಮಠ, ತಿಮ್ಮಣ್ಣ ಭಟ್ಟ ಮತ್ತು ಮುರಳಿಧರ ಬಂಟ ಇದ್ದರು. ನಾಗರಿಕ ಸನ್ಮಾನ ಸಮಿತಿಯ ಪ್ರಧಾನ ಸಂಚಾಲಕ ಕೆ ರಮೇಶ ಸ್ವಾಗತಿಸಿ ಸರ್ವರೂ ಬಂದು ಸಹಕರಿಸಲು ಕೋರಿದರು. ಪ್ರಧಾನ ಕಾರ್ಯದರ್ಶಿ ವಸಂತ ಕೆ ನಾಯ್ಕ ವಂದಿಸಿದರು.