ನವೆಂಬರ್ 5ರಂದು ಅಂಕೋಲಾದಲ್ಲಿ ಜಿಲ್ಲಾ ಕಿರಿಯರ ಅಥ್ಲೆಟಿಕ್ಸ್ ಕ್ರೀಡಾಕೂಟ


ಅಂಕೋಲಾ : ಅಂಕೋಲಾ ಸ್ಪೋರ್ಟ್ಸ್ ಮತ್ತು ಸೋಶಿಯಲ್ ಎಕ್ಟಿವಿಟಿಸ್ ಅಸೋಶಿಯೇಶನ್ (ರಿ) ಅಂಕೋಲಾ ಇವರ ಸಹಯೋಗದಲ್ಲಿ ಉತ್ತರ ಕನ್ನಡ ಜಿಲ್ಲಾ ಅಥ್ಲೆಟಿಕ್ಸ್ ಕ್ರೀಡಾಕೂಟ 2023 ಹಾಗೂ ರಾಷ್ಟ್ರೀಯ ಅಂತರ ಜಿಲ್ಲಾ ಕಿರಿಯರ್ ಕ್ರೀಡಾಕೂಟ 2023 ಅನ್ನು ಅಂಕೋಲಾ ಜೈಹಿಂದ್ ಹೈಸ್ಕೂಲ್ ಮೈದಾನದಲ್ಲಿ 5 ನವೆಂಬರ್ 2023ರಂದು ನಡೆಸಲು ತೀರ್ಮಾನಿಸಲಾಗಿದೆ.
ಸಂಸ್ಥೆಯು ಅನೇಕ ಕ್ರೀಡಾಕೂಟಗಳನ್ನು ನಡೆಸುತ್ತಾ ಬಂದಿದ್ದು, ಈ ವರ್ಷ ಜಿಲ್ಲೆಯ ಅಥ್ಲೆಟಿಕ್ಸ್ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಸಲುವಾಗಿ ಡಿಸ್ಟ್ರಿಕ್ ಅಥ್ಲೆಟಿಕ್ಸ್ ಅಸೋಸಿಯೇಷನ್ ಉತ್ತರ ಕನ್ನಡ ಇವರ ಸಹಯೋಗದೊಂದಿಗೆ ಈ ಕ್ರೀಡಾಕೂಟವನ್ನು ನಡೆಸಲಿದ್ದು, ಈಗಾಗಲೇ ಪೂರ್ವಭಾವಿ ಸಭೆಯನ್ನು ನಡೆಸಲಾಗಿದೆ. ಈ ಕ್ರೀಡಾಕೂಟದ ಯಶಸ್ಸಿಗೆ ಅಂಕೋಲಾದ ಸಾರ್ವಜನಿಕರು, ಕ್ರೀಡಾಭಿಮಾನಿಗಳು, ಕ್ರೀಡಾ ಪೋಷಕರು, ಕ್ರೀಡಾ ಸಂಸ್ಥೆಗಳು ಸಹಕರಿಸುವಂತೆ ಸಂಸ್ಥೆಯ ಅಧ್ಯಕ್ಷರಾದ ವಿ.ಟಿ. ನಾಯಕ ಕಣಗಿಲ್, ಉಪಾಧ್ಯಕ್ಷ ಮಂಜುನಾಥ ಎಮ್. ಕಳಸ ಹಾಗೂ ಕಾರ್ಯದರ್ಶಿ ಎನ್.ಎಮ್. ನಾಯಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.