ಉಡುಪಿಯಲ್ಲಿ ನಡೆದ 14 ವರ್ಷದೊಳಗಿನ ಬಾಲಕಿಯರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಕುಮಾರಿ ಕೀರ್ತಿ ಮಂಜುನಾಥ ಗೌಡ ತೃತೀಯ

ಸಿದ್ದಾಪುರ : ಮಹಾತ್ಮ ಗಾಂಧೀಜಿ ಜಿಲ್ಲಾ ಕ್ರೀಡಾಂಗಣ ಉಡುಪಿಯಲ್ಲಿ ನಡೆದ 14 ವರ್ಷದೊಳಗಿನ ಬಾಲಕಿಯರ ಎತ್ತರ ಜಿಗಿತ ಸ್ಪರ್ಧೆಯಲ್ಲಿ ಹುಲ್ಕುತ್ರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಕುಮಾರಿ ಕೀರ್ತಿ ಮಂಜುನಾಥ ಗೌಡ ತೃತೀಯ ಸ್ಥಾನವನ್ನು ಪಡೆದು ನಮ್ಮ ತಾಲೂಕಿಗೆ ಕೀರ್ತಿಯನ್ನು ತಂದಿದ್ದಾಳೆ .
99 ಜನ ಸ್ಪರ್ಧಾಳುಗಳಲ್ಲಿ ತೀವ್ರ ಪೈಪೋಟಿ ನಡುವೆ ಈ ವಿದ್ಯಾರ್ಥಿನಿಯು ತೃತೀಯ ಸ್ಥಾನ ಪಡೆದು ಹುಲ್ಕುತ್ರಿ ಶಾಲೆಯ ಪರವಾಗಿ ಐತಿಹಾಸಿಕ ಸಾಧನೆ ಮಾಡಿದ್ದಾಳೆ. ಈ ವಿದ್ಯಾರ್ಥಿನಿಯ ಕ್ರೀಡಾ ಸಾಧನೆಯನ್ನು ಮೆಚ್ಚಿ ಶಾಲಾ ಶಿಕ್ಷಕ ವೃಂದ, ಎಸ್.ಡಿ.ಎಂ.ಸಿ. ಪಾಲಕ ಪೋಷಕರು ಹಾಗೂ ಸಮಸ್ತ ಹಾವಿನಬೀಳು ನಾಗರಿಕರು ಅಭಿನಂದಿಸಿರುತ್ತಾರೆ. ಯಾವುದೇ ದೈಹಿಕ ಶಿಕ್ಷಕರಿಲ್ಲದೆ ಶಾಲೆಯಲ್ಲಿರುವ ಶಿಕ್ಷಕರ ಮಾರ್ಗದರ್ಶನದಿಂದ ಗ್ರಾಮೀಣ ಪ್ರತಿಭೆಯೊಂದು ಈ ಸಾಧನೆಯನ್ನು ಮಾಡಿರುವುದು ಹೆಮ್ಮೆಯ ವಿಷಯವಾಗಿದೆ