ಭಾಷಾವಾರು ಪ್ರಾಂತ್ಯ ರಚನೆ ಆಗಲು ಮುಖ್ಯ ಕಾರಣ ನಮ್ಮ ಅಸ್ಮಿತೆ ಉಳಿಸಿಕೊಳ್ಳುವದಕ್ಕಾಗಿ-ಡಾ|| ಕೃಷ್ಣಾ ಜಿ

ಹೊನ್ನಾವರ:“ಭಾಷಾವಾರು ಪ್ರಾಂತ್ಯ ರಚನೆ ಆಗಲು ಮುಖ್ಯ ಕಾರಣ ನಮ್ಮ ಅಸ್ಮಿತೆ ಉಳಿಸಿಕೊಳ್ಳುವದಕ್ಕಾಗಿ. ನಮ್ಮ ಬಾಷೆ,ನಮ್ಮ ನೆಲ, ನಮ್ಮ ಜಲ,ಇವುಗಳ ಬಗ್ಗೆ ನಮಗೆ ಆತ್ಮಾಭಿಮಾನವಿರಬೇಕು ಎಂದು ತಾಲೂಕ ಆಸ್ಪತ್ರೆಯ ಸ್ತ್ರೀ ರೋಗ ತಜ್ಞರಾದ ಡಾ|| ಕೃಷ್ಣಾ ಜಿ ಹೇಳಿದರು.

ಅವರು ತಾಲೂಕ ಆಸ್ಪತ್ರೆ ಹೊನ್ನಾವರದಲ್ಲಿ ಏರ್ಪಡಿಸಿದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕನ್ನಡಾಂಬೆಗೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.ಪರಭಾಷಾ ಸಂಸ್ಕೃತಿ ಹೇರಿಕೆಯ ವಿರುದ್ಧ ನಾವು ಜಾಗೃತರಾಗಿರಬೇಕು.ನಮ್ಮ ಕನ್ನಡಾಭಿಮಾನ ಕೇವಲ ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವಾಗಿರಬಾರದು. ಕನ್ನಡದ ಅಸ್ಮಿತೆ ಉಳಿಸಿ ಬೆಳಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿರಬೇಕು”ಎಂದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ ಆಡಳಿತ ವೈದ್ಯಾಧಿಕಾರಿ ಡಾ ರಾಜೇಶ ಕಿಣಿ ಮಾತನಾಡಿ “ದಿನ ನಿತ್ಯದ ಬಳಕೆಯಲ್ಲಿ ಕನ್ನಡವನ್ನು ಹೆಚ್ಚು ಬಳಸಬೇಕು. ಕನ್ನಡ ಹೆಚ್ಚು ಹೆಚ್ಚು ಬಳಸಿದರೆ ಕನ್ನಡ ಉಳಿಯಲು ಸಾದ್ಯ” ಎಂದರು.
ಸಹಾಯಕ ಆಡಳಿತಾಧಿಕಾರಿ ಶಶಿಕಲಾ ನಾಯ್ಕ ಪ್ರಾಸ್ತವಿಕ ಮಾತುಗಳನ್ನಾಡಿರು. ವೆಂಕಟೇಶ ಜೆ ನೇತೃತ್ವದ ಆಸ್ಪತ್ರೆಯ ಸಿಬ್ಬಂದಿಗಳ ತಂಡ ನಾಡ ಗೀತೆ ಸೇರಿದಂತೆ ಐದು ಕನ್ನಡ ಗೀತೆಗಳನ್ನು ಹಾಡಿ ಗಮನ ಸೆಳೆದರು.ತಾಲೂಕ ಆರೋಗ್ಯಾಧಿಕಾರಿಗಳಾದ ಡಾ||ಉಷಾ ಹಾಸ್ಯಗಾರ,ರಾಜ್ಯ ಸರಕಾರಿ ನೌಕರರ ಸಂಘದ ತಾಲೂಕಾ ಉಪಾಧ್ಯಕ್ಷರಾದ ಚಂದ್ರಶೇಖರ ಕಳಸ,ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿವರ್ಗ ಕಾರ್ಯಕ್ರಮದಲ್ಲಿ ಹಾಜರಿದ್ದರು.