ಹೊನ್ನಾವರ: ಕರ್ನಾಟಕ ರಕ್ಷಣಾ ವೇದಿಕೆ ಹೊನ್ನಾವರ ಘಟಕದ ವತಿಯಿಂದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ವಿವಿಧ ಕಾರ್ಯಕ್ರಮ ನಡೆಸಿದರು.
ಪಟ್ಣದ ಶರಾವತಿ ವೃತ್ತದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.ಯುವತಿಯರಿಗೆ ಉದ್ಯೋಗಕ್ಕೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹೊಲಿಗೆ ಯಂತ್ರ ವಿತರಣೆ ಮತ್ತು ಜನಪದ ಕಲಾವಿದರಿಗೆ ಹಾಗೂ ಜೀವ ರಕ್ಷಕ ಆಂಬ್ಯುಲೆನ್ಸ್ ಚಾಲಕರಿಗೆ ಸನ್ಮಾನಿಸಿ ಗೌರವಿಸುವಿದರು. ನಂತರ ಪಟ್ಟಣದ ಶರಾವತಿ ಸರ್ಕಲ್ ನಿಂದ ಗೇರುಸೊಪ್ಪ ಸರ್ಕಲ್ ವರೆಗೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಾಗಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಾಯಿ ಭುವನೇಶ್ವರಿಯ ಅದ್ದೂರಿ ಮೆರವಣಿಗೆ ನೆರವೇರಿಸಿದರು. ಅಂಬಾರಿಯ ಸ್ತಬ್ಧ ಚಿತ್ರ ಮತ್ತು ಡೊಳ್ಳು ಕುಣಿತ, ಅದ್ದೂರಿ ಡಿಜೆ ಸೌಂಡ್ ನೊಂದಿಗೆ ಮೆರವಣಿಗೆ ಸಾಗಿತು. ಪುನಃ ಶರಾವತಿ ವೃತ್ತಕ್ಕೆ ಬಂದು ಮೆರವಣಿಗೆಯನ್ನು ಅಂತ್ಯಗೊಳಿಸಿದರು.