ಹೊನ್ನಾವರ: ಕನ್ನಡ ರಾಜ್ಯೋತ್ಸವ ನಿಮಿತ್ತ ರಾಜ್ಯ ಸರ್ಕಾರದ ಆದೇಶದಂತೆ ಬುಧವಾರ ಸಂಜೆ ಪಟ್ಟಣ ಪಂಚಾಯತ್ ಹೊನ್ನಾವರ ಕಾರ್ಯಾಲಯದ ಆವರಣದಲ್ಲಿ ಪಟ್ಟಣ ಪಂಚಾಯತ್ ಸಿಬ್ಬಂದಿಗಳೆಲ್ಲರು ಸೇರಿ ಕನ್ನಡ ದೀಪ ಬೆಳಗಿಸಿದರು.
ಪಟ್ಟಣ ಪಂಚಾಯತ ಆವಾರದಲ್ಲಿ ‘ಕರ್ನಾಟಕ ಸಂಭ್ರಮ-50’ಎಂದು ಕೆಂಪು,ಹಳದಿ ವರ್ಣದಲ್ಲಿ ಬರೆದು ಸುತ್ತಲು ದೀಪ ಬೆಳಗಿಸಿದರು. ದೀಪಲಂಕೃತಗೊಂಡ ಪಟ್ಟಣ ಪಂಚಾಯತ ಕಣ್ಮನ ಸೆಳೆಯುತ್ತಿತ್ತು.ಕನ್ನಡ ಭಾಷಿಕರು, ಪ್ರದೇಶ ಏಕೀಕರಣವಾದ ರಾಜ್ಯೋತ್ಸವ ಸಡಗರ ಹಾಗೂ ಕರ್ನಾಟಕ ಎಂಬ ಮರು ನಾಮಕರಣವಾಗಿ 50ನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸುವರ್ಣ ಸಂಭ್ರಮ ಈ ಬಾರಿ ಮೇಳೈಸಿವೆ.ಕನ್ನಡ ನಾಡು, ನುಡಿ, ಪರಂಪರೆ, ಸಂಸ್ಕೃತಿಯ ಹಿರಿಮೆ-ಗರಿಮೆ ಉಲ್ಲಾಸದಲ್ಲಿ ಜನರ ಮಿಂದೇಳುವ ಈ ಸುಸಂದರ್ಭವನ್ನು ಸರ್ಕಾರ ಅರ್ಥಪೂರ್ಣವಾಗಿ ಆಚರಿಸುತ್ತಿದ್ದು,ಸಂಘ-ಸಂಸ್ಥೆಗಳು ಅಷ್ಟೇ ಉತ್ಸಾಹದಿಂದ ಸನ್ನದ್ಧವಾಗಿರುವುದು ಕಂಡು ಬಂತು.‘ಕರ್ನಾಟಕ ಸುವರ್ಣ ಸಂಭ್ರಮ’ ವರ್ಷಪೂರ್ತಿ ನಡೆಯಲಿದೆ.