ಮಂಕಿ ದೇವರಗೆದ್ದೆ ಸ. ಹಿ .ಪ್ರಾ ಶಾಲೆಯಲ್ಲಿ 31 ವರ್ಷ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ಹೊಂದುತ್ತಿರುವ ಷಣ್ಮುಖ ವೆಂಕಟ ನಾಯ್ಕ

ಹೊನ್ನಾವರ ತಾಲೂಕಿನ ಮಂಕಿ ದೇವರಗೆದ್ದೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸತತ 31 ವರ್ಷ ಸೇವೆ ಸಲ್ಲಿಸಿ ಸೇವಾ ನಿವೃತಿ ಹೊಂದುತ್ತಿರುವ ಷಣ್ಮುಖ ವೆಂಕಟ ನಾಯ್ಕ ಅವರಿಗೆ ಬಿಳ್ಕೋಡುಗೆ ಹಾಗೂ ಅಭಿನಂದನಾ ಸಮಾರಂಭ ಶಾಲಾ ಆವರಣದಲ್ಲಿ ನಡೆಯಿತು.

ಮಂಕಿ ದೇವರಗೆದ್ದೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಎಸ್ ಡಿ ಎಮ್ ಸಿ ಅಧ್ಯಕ್ಷರು, ಸದಸ್ಯರು, ಪಾಲಕರು, ಹಳೆ ವಿದ್ಯಾರ್ಥಿಗಳ ಸಂಯುಕ್ತ ಆಶ್ರಯದಲ್ಲಿ ಶಾಲೆಯಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮಕ್ಕೆ ಆಗಮಿಸಿದ ಕ್ಷೇತ್ರ ಶಿಕ್ಷಣಾದಿಕಾರಿ ಜಿ.ಎಸ್ ನಾಯ್ಕ, ಮತ್ತು ಸೇವಾ ನಿವೃತಿ ಹೊಂದಿದ ಷಣ್ಮುಖ ವೆಂಕಟ ನಾಯ್ಕ, ಸೇರಿದಂತೆಗಣ್ಯರನ್ನು ಚಂಡೆ ವಾದನದೊಂದಿಗೆ ಕರೆತಂದರು. ನಂತರ ವೇದಿಕೆಯಲ್ಲಿ ನಿವೃತಿ ಹೊಂದುತ್ತಿರುವ ಷಣ್ಮುಖ ವೆಂಕಟ ನಾಯ್ಕ ಅವರಿಗೆ ಬಿಳ್ಕೋಡುಗೆ ಹಾಗೂ ಅಭಿನಂದನಾ ಸಮಾರಂಭ ನಡೆಸಿದರು.
ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷರು, ಸದಸ್ಯರು, ಪಾಲಕರು, ಹಳೆ ವಿದ್ಯಾರ್ಥಿಗಳು ಹಾಜರಿದ್ದರು.