ಕವಿವಿ ಘಟಿಕೋತ್ಸವ: ಪೂರ್ವಿ ಹಳ್ಗೇಕರಗೆ ಐದು ಚಿನ್ನದ ಪದಕ


ಅಂಕೋಲಾ: ಕೆ.ಎಲ್.ಇ. ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯದ ವಿದ್ಯಾರ್ಥಿನಿ ಪೂರ್ವಿ ದಿನೇಶ ಹಳ್ಗೇಕರ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ ಬಿ.ಇಡಿ.ಯಲ್ಲಿ ಐದು ಚಿನ್ನದ ಪದಕದೊಂದಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಸೋಮವಾರ ನಡೆದ ಕರ್ನಾಟಕ ವಿಶ್ವ ವಿದ್ಯಾಲಯದ 73ನೇ ವಾರ್ಷಿಕ ಘಟಿಕೋತ್ಸವದಲ್ಲಿ ಕರ್ನಾಟಕದ ರಾಜ್ಯಪಾಲರಾದ ಥಾವರಚಂದ ಗೆಹ್ಲೋಟ ಪದಕ ಪ್ರಧಾನ ಮಾಡಿದರು.


ಪೂರ್ವಿ ದಿನೇಶ ಹಳ್ಗೇಕರ ಅವರು ದಿನೇಶ ಹಳ್ಗೇಕರ ಹಾಗೂ ಶಿಲ್ಪಾ ಹಳ್ಗೇಕರ ಅವರ ಪುತ್ರಿಯಾಗಿದ್ದು ಬಿ.ಎಸ್.ಸಿ, ಎಮ್.ಎಸ್.ಸಿ.ಯಲ್ಲಿಯೂ ಸಹ ವಿಶ್ವವಿದ್ಯಾಲಯದ ರ‍್ಯಾಂಕಗಳಿಸಿದ ಪ್ರತಿಭಾವಂತೆ ಆಗಿದ್ದು ಸದ್ಯ ಕೆ.ಎಲ್.ಇ. ಸಂಸ್ಥೆಯ ಶಿಕ್ಷಣ ಮಹಾವಿದ್ಯಾಲಯದಲ್ಲಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಪೂರ್ವಿಯ ಸಾಧನೆಗೆ ಕೆ.ಎಲ್.ಇ. ಸಂಸ್ಥೆ ಬೆಳಗಾವಿಯ ಕಾರ್ಯಾಧ್ಯಕ್ಷರಾದ ಡಾ.ಪ್ರಭಾಕರ ಕೋರೆ, ಬಿ.ಇಡಿ. ವಿಭಾಗದ ಅದ್ಯಕ್ಷರಾದ ಜಯಾನಂದ ಮುನವಳ್ಳಿ, ಸದಸ್ಯ ಕಾರ್ಯದರ್ಶಿಗಳಾದ ಮಹಾದೇವ ಬಳಿಗಾರ, ಪ್ರಾಚಾರ್ಯ ವಿನಾಯಕ ಹೆಗಡೆ, ಹಿರಿಯ ಉಪನ್ಯಾಸಕ ಮಂಜುನಾಥ್ ಇಟಗಿ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.