ಉತ್ತರ ಕನ್ನಡ ಜಿಲ್ಲಾ ಬಂಟ ಸೇವಾ ಸಂಘದ ಉಧ್ಘಾಟನೆ.


ಅಂಕೋಲಾ : ಉತ್ತರ ಕನ್ನಡ ಜಿಲ್ಲಾ ಬಂಟ ಸೇವಾ ಸಂಘದ ಉದ್ಘಾಟನಾ ಕಾರ್ಯಕ್ರಮ ಶನಿವಾರ ಕೇಣಿಯ ವಿವೇಕಾನಂದ ವೇದಿಕೆಯಲ್ಲಿ ಜರುಗಿತು.
ಕಾರ್ಯಕ್ರಮ ವನ್ನು ಸಮಾಜದ ಹಿರಿಯರಾದ ನಿವೃತ್ತ ಆದಾಯ ತೆರಿಗೆ ಅಧಿಕಾರಿ ವಿನಾಯಕ ಜಿ ಕೇಣಿ ಉಧ್ಘಾಟಿಸಿ ಮಾತನಾಡಿ ಬಂಟ ಸಮಾಜ ಎಲ್ಲ ಹಂತಗಳಲ್ಲಿ ಒಗ್ಗಟ್ಟಾಗಿರಬೇಕು ಮತ್ತು ಪರಸ್ಪರ ಸಹಕಾರ ನೀಡಿ ಸಮಾಜದ ಪ್ರತಿಯೊಬ್ಬರ ಏಳ್ಗೆಗೆ ಕಾರಣರಾಗಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮ ದಲ್ಲಿ ಬಂಟ ಸಮಾಜ ಲಾಂಛನವನ್ನು ನಿವೃತ್ತ ಖಜಾನೆ ಅಧಿಕಾರಿ ರಾಜಕುಮಾರ ಬಂಟ ಕಾರವಾರ ಇವರು ಬಿಡುಗಡೆ ಗೊಳಿಸಿದರು. ವೇದಿಕೆಯಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅದ್ಯಕ್ಷ ರವೀಂದ್ರ ವಿ ಕೇಣಿ,ಸಮಾಜ ಎಲ್ಲರೂ ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಂಘವನ್ನು ಹುಟ್ಟು ಹಾಕಿದ್ದು ಬಂಟ ಸಮಾಜದ ಅನೇಕ ಹಿರಿಯರು ತಮ್ಮ ಸಹಕಾರ, ಬೆಂಬಲ ನೀಡಿ ಸಂಘವನ್ನು ಉತ್ತಮವಾಗಿ ಸಂಘಟಿಸುವಲ್ಲಿ ಸಹಕರಿಸಬೇಕಾಗಿ ಕೋರಿದರು. BSNL ನಿವೃತ್ತ ಹಿರಿಯ ಅಧಿಕಾರಿ ಗಣಪತಿ ಆರ್ ಬಂಟ, ಬಂಟ ಸಮಾಜದ ಬುದವಂತರಾದ ರವೀಂದ್ರ ಎಲ್ ಬಂಟ ಇದ್ದರು.ನ್ಯಾಯವಾದಿ ನಾಗಾನಂದ ಬಂಟ ಪ್ರಾರ್ಥನೆ ಹಾಡಿದರು. ತುಕರಾಮ ಎಲ್ ಬಂಟ ಬಂಟ ಸಮಾಜದ ಸ್ವ ರಚಿತ ಆಶಯ ಗೀತೆಯನ್ನು ಹಾಡಿದರು. ನಂದಾ ಜಿ ಬಂಟ ಸ್ವಾಗತಿಸಿದರು. ಪ್ರಭಾಕರ ಬಂಟ ಪ್ರಾಸ್ತಾವಿಕ ಮಾತನ್ನಾಡಿದರು. ಕಾರ್ಯದರ್ಶಿ ಮಿಥುನ ಬಂಟ, ಪ್ರಸನ್ಮ ಬಂಟ ಸಂತೋಷ ಬಂಟ ರಾಜು ಬಂಟ, ಉಮೇಶ್ ಬಂಟ ಸಹಕರಿಸಿದರು. ಮಹೇಶ್ ಡಿ ಬಂಟ ನಿರ್ವಹಿಸಿದರು.ರಾಜೇಶ್ ಬಂಟ ವಂದಿಸಿದರು.