ಪರಿಶ್ರಮದ ಜತೆಗೆ ಕಲಾಭಿಮಾನಿಗಳ ಪ್ರೋತ್ಸಾಹ, ಪ್ರೀತಿಯಿಂದ ಮಾತ್ರ ಕಲಾವಿದರು ಬೆಳೆಯಲು ಸಾಧ್ಯ-ನರಸಿಂಹ ಚಿಟ್ಟಾಣಿ

ಯಲ್ಲಾಪುರ: ಪರಿಶ್ರಮದ ಜತೆಗೆ ಕಲಾಭಿಮಾನಿಗಳ ಪ್ರೋತ್ಸಾಹ, ಪ್ರೀತಿಯಿಂದ ಮಾತ್ರ ಕಲಾವಿದರು ಬೆಳೆಯಲು ಸಾಧ್ಯ ಎಂದು ಯಕ್ಷಗಾನ ಕಲಾವಿದ ನರಸಿಂಹ ಚಿಟ್ಟಾಣಿ ಹೇಳಿದರು.
ತಾಲೂಕಿನ ಬಾಸಲದಲ್ಲಿ ದುರ್ಗಾದೇವಿ ಗೆಳೆಯರ ಬಳಗ ಆಯೋಜಿಸಿದ್ದ 12 ನೇ ವರ್ಷದ ಶಾರದಾ ಉತ್ಸವದಲ್ಲಿ ಸಂಘಟಕರು ನೀಡಿದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಮಾವಿನಮನೆ ಸೇವಾ ಸಹಕಾರಿ ಸಂಘದ ನಿವೃತ್ತ ಮುಖ್ಯ ಕಾರ್ಯನಿರ್ವಾಹಕ ಎಸ್.ಎನ್.ಭಟ್ಟ ಬಾಸಲ ಅವರನ್ನು ಸನ್ಮಾನಿಸಲಾಯಿತು. ವೇ. ಜಿ.ವಿ.ಭಟ್ಟ ಬಾಸಲ ಅಧ್ಯಕ್ಷತೆ ವಹಿಸಿದ್ದರು.
ಸಹಕಾರಿ ಸಂಘದ ಅಧ್ಯಕ್ಷ ಸುಬ್ಬಣ್ಣ ಬೋಳ್ಮನೆ, ಮಾಜಿ ಅಧ್ಯಕ್ಷ ಗಜಾನನ ಗಾಂವ್ಕರ ಬಾರೆ, ಗ್ರಾ.ಪಂ ಅಧ್ಯಕ್ಷ ಸುಬ್ಬಣ್ಣ ಕುಂಟೆಗುಳಿ, ಸದಸ್ಯರಾದ ಪಾರ್ವತಿ ಭಟ್ಟ, ಮಾಚಣ್ಣ ಹಲಗುಮನೆ, ರಂಜನಾ ಹುಲಸ್ವಾರ, ಎಸ್.ಡಿ.ಎಂ.ಸಿ ಅಧ್ಯಕ್ಷ ಮಂಜುನಾಥ ಮರಾಠಿ, ಪ್ರಮುಖರಾದ ವಿಶ್ವನಾಥ ಭಟ್ಟ, ವಿನಾಯಕ ಹುಲಸ್ವಾರ, ಗೋಪಾಲ ಹೆಗಡೆ, ಮೋಹನ ಮಡಿವಾಳ, ಜಿ.ಆರ್.ಗಾಂವ್ಕರ, ಸದಾನಂದ ಭಟ್ಟ, ಪ್ರಸನ್ನ ಗಾಂವ್ಕರ ವಾಗಳ್ಳಿ, ಮಂಜುನಾಥ ತಳೆಕರ್ ಇತರರಿದ್ದರು. ದತ್ತಾತ್ರೇಯ ನೆಲೆಪಾಲ, ರೋಹಿತ ನಿರ್ವಹಿಸಿದರು.
ನಂತರ ಪ್ರಸಿದ್ಧ ಕಲಾವಿದರಿಂದ ಸುದರ್ಶನ ವಿಜಯ ಯಕ್ಷಗಾನ ಪ್ರದರ್ಶನಗೊಂಡಿತು. ಶಂಕರ ಭಟ್ಟ ಬ್ರಹ್ಮೂರು, ನರಸಿಂಹ ಭಟ್ಟ ಹಂಡ್ರಮನೆ, ಪ್ರಮೋದ ಹೆಗಡೆ ಕಬ್ಬಿನಗದ್ದೆ ಹಿಮ್ಮೇಳದಲ್ಲಿ ಭಾಗವಹಿಸಿದ್ದರು. ನರಸಿಂಹ ಚಿಟ್ಟಾಣಿ, ವಿನಯ ಬೇರೊಳ್ಳಿ, ಮಂಜುನಾಥ ಗಾಂವ್ಕರ ಮೂಲೆಮನೆ, ನಾಗರಾಜ ಭಟ್ಟ ಕುಂಕಿಪಾಲ, ಸನ್ಮಯ ಭಟ್ಟ ಮಲವಳ್ಳಿ ಪಾತ್ರ ನಿರ್ವಹಿಸಿದರು.