ನಾಡಿಗೆ ಬಂದ ಉಡವನ್ನು ಕಾಡಿಗೆ ಸೇರಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳು


ಅಂಕೋಲಾ : ಪಟ್ಟಣದ ಹೆಸ್ಕಾಂ ಇಲಾಖೆ ಸಮೀಪದ ಮನೆಯೊಂದರಲ್ಲಿ ಸೇರಿಕೊಂಡು ಮನೆಯಲ್ಲಿರುವವರಿಗೆ ತೊಂದರೆ ನೀಡುತ್ತಿದ್ದ ಉಡವನ್ನು ಅರಣ್ಯ ಇಲಾಖೆ ಸಿಬ್ಬಂದಿಯವರು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.
ಜನ ವಸತಿ ಪ್ರದೇಶದಲ್ಲಿ ಅಪರೂಪ ಎನ್ನುವಂತೆ ಈ ಉಡವು ಕಳೆದ ಐದಾರು ದಿನಗಳಿಂದ ಮನೆಯಲ್ಲಿ ಸೇರಿಕೊಂಡಿತ್ತು. ಬಳಿಕ ಆ ಮನೆಯವರೇ ಹಿಡಿಯಲು ಅನೇಕ ಬಾರಿ ಪ್ರಯತ್ನಿಸಿದ್ದರು. ಆದರೂ ಅವರ ಕೈಗೆ ಸಿಗದ ಉಡ ಅಲ್ಲಲ್ಲಿ ಅವಿತು ಕೊಂಡಿರುತ್ತಿತ್ತು. ಬಳಿಕ ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಸ್ಥಳಕ್ಕೆ ಆಗಮಿಸಿ ವನ್ಯಜೀವಿ ಸಂರಕ್ಷಕ ಶ್ಯಾಮ್ಯೂಲ್ ಅವರನ್ನು ಸ್ಥಳಕ್ಕೆ ಕರೆತಂದು ಉಡವನ್ನು ಹಿಡಿದಿರುತ್ತಾರೆ. ಹಿಡಿದ ಉಡವನ್ನ ಅರಣ್ಯ ಇಲಾಖೆ ಸಿಬ್ಬಂದಿಗಳು ಕಾಡಿಗೆ ಬಿಟ್ಟಿದ್ದಾರೆ.


ಈ ಸಂದರ್ಭದಲ್ಲಿ ಉಪವಲಯ ಅರಣ್ಯ ಅಧಿಕಾರಿ ಪ್ರಮೋದ ಪಟಗಾರ, ಗಸ್ತು ಅರಣ್ಯ ರಕ್ಷಕ ಲಿಂಗಣ್ಣ, ಅರಣ್ಯ ವೀಕ್ಷಕರದ ಸುಧಾಕರ ಗಾಂವಕರ, ಚೇತನ ನಾಯ್ಕ, ವಿಶ್ವನಾಥ ನಾಯ್ಕ, ಸುಧಾಕರ ನಾಯ್ಕ ಮುಂತಾದವರು ಇದ್ದರು.