ಅಕ್ರಮ ಮರಳು ಸಾಗಾಟ ಮಾಡಿ ರಸ್ತೆ ಹಾಳಾಗುತ್ತಿದೆ ಎಂದು ಪ್ರಶ್ನಿಸಿದಕ್ಕೆ ದಂಪತಿಗಳಿರ್ವರ ಮೇಲೆ ಮಾರಣಾಂತಿಕ ಹಲ್ಲೆ ಪ್ರಕರಣ

ಹೊನ್ನಾವರ:- ತಾ. ಮಾವಿನಕುರ್ವಾ ಹೊಸಮೊಟೆಯಲ್ಲಿ ಅಕ್ರಮ ಮರಳು ಸಾಗಾಟ ಮಾಡಿ ಮಾಡಿ ರಸ್ತೆಯಲ್ಲಾ ಹಾಳಾಗ್ತಿದೆ ಎಂದು ಪ್ರಶ್ನಿಸಿದ ಕ್ಷುಲ್ಲಕ ಕಾರಣಕ್ಕೆ ದಂಪತಿಗಳಿಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದು, ಈ ಕುರಿತು ಆರೋಪಿಗಳಿಬ್ಬರ ಮೇಲೆ ದೂರ ದಾಖಲಾದ ಘಟನೆ ನಡೆದಿದೆ…

ಮಾವಿನಕುರ್ವಾದ ಹೊಸಮೋಟೆ ನಿವಾಸಿಗಳ ರಾಘವೇಂದ್ರ ಸೋಮಯ್ಯ ಗೌಡ,ಮಹೇಶ ಸೋಮಯ್ಯ ಗೌಡ ಹಲ್ಲೆ ಮಾಡಿದ ಆರೋಪಿಗಳಾಗಿದ್ದು, ಘಟನೆ ಹಿನ್ನಲೆ ಹೊಸಮೋಟೆಗೆ ಹೋಗುವ ಮಾರ್ಗಕ್ಕೆ ಮಾವಿನಕುರ್ವಾ ಗ್ರಾ.ಪಂಚಾಯತ್‌ನಿಂದ ಕಚ್ಚಾ ರಸ್ತೆ ನಿರ್ಮಿಸಿದ್ರು. ತೋಟದ ಮಧ್ಯದಲ್ಲಿ ಹಾದು ಹೋಗಿರುವ ಈ ರಸ್ತೆಯಲ್ಲಿ ಪ್ರತಿ ನಿತ್ಯ ಟಿಪ್ಪರ್ ಹಾಗೂ ಬುಲೇರೋ ವಾಹನದಲ್ಲಿ ಮರಳು ತುಂಬಿಕೊಂಡು ಪದೇ ಪದೇ ಇದೇ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಇದ್ರಿಂದ ರಸ್ತೆ ಹೊಂಡ ಬಿದ್ದು ಹಾಳಾಗುತ್ತಿದೆ ಜೊತೆಗೆ ರಸ್ತೆ ಬದಿಯಲ್ಲಿರೋ ತೆಂಗಿನ ಮರದ ಬುಡಕ್ಕೆ ತೊಂದರೆಯಾಗ್ತಿದೆ ಎಂದು ಜಾಗದ ಮಾಲೀಕರಾದ ತಿಮ್ಮಪ್ಪ ಗೌಡ ಇಬ್ಬರನ್ನು ಪ್ರಶ್ನಿಸಿದ್ದರು..

ಇದಾದ ಬಳಿಕ ದಂಪತಿಗಳು ಮನೆಯ ಹಿತ್ತಲಿನಲ್ಲಿ ಕೆಲಸ ಮಾಡ್ತಿದ್ದಾಗ, ಅಲ್ಲಿಗೆ ಬಂದ ಇಬ್ಬರು ಒಮ್ಮೆಲೆ ಸಿಟ್ಟಿನಿಂದ ಅವಾಚ್ಯವಾಗಿ ಬೈದು,ಇದು ಗ್ರಾಮ ಪಂಚಾಯತ ರಸ್ತೆ, ನಾವ್ಯಾಕೆ ರಿಪೇರಿ ಮಾಡಿಸಬೇಕು ಅಂತ ಹೇಳಿದ್ದಾರೆ ಎನ್ನಲಾಗಿದೆ. ಅಲ್ಲದೇ ಕೈಯಿಂದ ತಿಮ್ಮಪ್ಪ ಅವರಿಗೆ ಕೆನ್ನೆ, ಮೇಲೆ ಮೈಮೇಲೆ ಹೊಡೆದಿದ್ದಾರೆ. ಆರೋಪಿ ರಾಘವೇಂದ್ರ ಅಲ್ಲೆ ಇದ್ದ ಬೇಲಿ ಗೂಟವನ್ನು ತೆಗೆದು ಮೈಮೇಲೆ ಹೊಡೆದಿದ್ದ, ಆಗ ನಾನು ತಪ್ಪಿಸಿಕೊಳ್ಳಲು ಯತ್ನಿಸಿದಾಗ ಎಡಗೈ ಮೊಣಗಂಟಿಗೆ ಗೂಟದಿಂದ ಹೊಡೆದು ಗಾಯಗೊಳಿಸಿದ್ದಾರೆಂದು ತಿಮ್ಮಪ್ಪ ದೂರಿನಲ್ಲಿ ತಿಳಿಸಿದ್ದಾರೆ.

ಪತಿಯ ಮೇಲಿನ ಹಲ್ಲೆ ಬಿಡಿಸಲು ಬಂದ ಪತ್ನಿ ಸುಮಿತ್ರಾ ಮೇಲೆ ಹಲ್ಲೆ ಮಾಡಿದ್ದರಿಂದ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ. ಘಟನೆ ನಡೆದು ತಿಂಗಳು ಕಳೆದ್ರೂ ಪೋಲಿಸರು ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸುವ ಕಾರ್ಯ ನಡೆಸಿಲ್ಲ ಎಂದು ನೊಂದ ಮಹಿಳೆ ಸುಮಿತ್ರಾ ಗೌಡ ನುಡಿಸಿರಿ ವಾಹಿನಿಯೊಂದಿಗೆ ತಮ್ಮ ಅಳಲು ತೊಡಿಕೊಂಡಿದ್ದಾಳೆ‌.

ಒಟ್ನಲ್ಲಿ ತಾಲೂಕಿನಲ್ಲಿ ಅಕ್ರಮ ಮರಳು ಮಾಫಿಯಾ ಎಗ್ಗಿಲ್ಲದೇ ನಡೆಯುತ್ತಿದ್ದು, ನಿಯಂತ್ರಿಸಬೇಕಾ ಪೋಲಿಸ್‌ ಇಲಾಖೆ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸವೇ ಸರಿ. ಇಂತಹ ಪ್ರಕರಣಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ತಾರಾ ಅನ್ನೋದನ್ನ ಕಾದು ನೋಡಬೇಕಿದೆ…
ಪ್ಲೋ..ಎಂಡ್…

ನಾಗರಾಜ ನಾಯ್ಕ ನುಡಿಸಿರಿ, ನ್ಯೂಸ್‌, ಹೊನ್ನಾವರ