ದಾಂಡೇಲಿಯ ಕರ್ನಾಟಕ ಒನ್ ಕೇಂದ್ರದಲ್ಲಿ ಜನರ ನೂಕು ನುಗ್ಗಲು

ದಾಂಡೇಲಿ ದಾಂಡೇಲಿಯ ಕರ್ನಾಟಕ ಒನ್‌ ಕೇಂದ್ರದಲ್ಲಿ ಪಡಿತರ ತಿದ್ದುಪಡಿ ಮತ್ತು ಹೆಸರು ಸೇರ್ಪಡೆಗೆ ಅ 8 ರಿಂದ ಅಕ್ಟೋಬರ್ 10 ರವರೆಗೆ ದಿನ ನಿಗದಿಪಡಿಸಿದ್ದು, ಕೊನೆಯ ದಿನವಾದ ಇಂದು ಸರ್ವರ್‌ ಸಮಸ್ಯೆಯಿಂದ ನೂಕುನುಗ್ಗಲು ಉಂಟಾಗಿ ಸಾರ್ವಜನಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಕಳೆದ 3 ದಿನಗಳಿಂದಲೂ ಸರ್ವರ್ ಸಮಸ್ಯೆಯಿಂದಾಗಿ ಸಾರ್ವಜನಿಕರು ಇದೇ ಪರಿಸ್ಥಿತಿ ಎದುರಿಸುತ್ತಿದ್ದು, ಇನ್ನೂ ಕರ್ನಾಟಕ ಒನ್ ಕೇಂದ್ರ ಜನರಿಂದ ತುಂಬಿ ತುಳುಕುತ್ತಿದೆ. ಪಡಿತರ ತಿದ್ದುಪಡಿ ಹಾಗೂ ಹೆಸರು ಸೇರ್ಪಡೆಗೆ ನೂಕುನುಗ್ಗಲು ಉಂಟಾಗಿದೆ. ವಯಸ್ಸಾದವರು ಹಾಗೂ ಸಣ್ಣ ಸಣ್ಣ ಮಕ್ಕಳ‌ ಜೊತೆ ಬಂದ ಮಹಿಳೆಯರು ಬೆಳಿಗ್ಗೆಯಿಂದ ಜಾತಕ ಪಕ್ಷಿಯಂತೆ ಕಾಯುವಂತಾಗಿದೆ. ಇಂದು ಕೊನೆಯ ದಿನವಾದ್ದರಿಂದ ಒಂದು ಕಡೆ ಸರ್ವರ್ ಸಮಸ್ಯೆಯಿಂದ ಸಾರ್ವಜನಿಕರು ಸಾಕಪ್ಪಾ ಸಾಕು ಎನ್ನುವಂತಾಗಿತ್ತು..

ಸರ್ವರ್ ಸಮಸ್ಯೆ ಹಿನ್ನೆಲೆಯಲ್ಲಿ ಪಡಿತರ ತಿದ್ದುಪಡಿ ಮತ್ತು ಹೆಸರು ಸೇರ್ಪಡೆಯ ಅವಧಿಯನ್ನು ಅಕ್ಟೋಬರ್ 20 ರವರೆಗೆ ವಿಸ್ತರಿಸಬೇಕೆಂಬ ಆಗ್ರಹ ಸಾರ್ವಜನಿಕರಿಂದ ವ್ಯಕ್ತವಾಗಿದ್ದು ಈ ಸಮಸ್ಯೆಗೆ ಸರ್ಕಾರ ಏನಾದ್ರು ಪರ್ಯಾಯ ವ್ಯವಸ್ಥೆ ಮಾಡ್ತಾರಾ ಅನ್ನೋದನ್ನು ಕಾದು ನೋಡ ಬೇಕಿದೆ..

ಸಂದೇಶ್‌ ಜೈನ್‌, ನುಡಿಸಿರಿ ನ್ಯೂಸ್‌, ದಾಂಡೇಲಿ