ಹೊನ್ನಾವರದ ತಾಲೂಕಾಸ್ಪತ್ರೆಯಲ್ಲಿ ಸರ್ಕಾರದ ಆದೇಶದಂತೆ ಪ.ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..
ಹೊನ್ನಾವರದ ತಾಲೂಕಾಸ್ಪತ್ರೆಯಲ್ಲಿ ಸರ್ಕಾರದ ಆದೇಶದಂತೆ ಪ.ಪಂಚಾಯತ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ‘ಸ್ವಚ್ಛತಾ ಹೀ ಸೇವಾ’ದಡಿ ‘ಏಕ್ ತಾರೀಖ್’, ‘ಏಕ್ ಘಂಟಾ’, ‘ಏಕ್ ದಿವಸ್’ ಶಿರ್ಶಿಕೆಯಡಿ ಸ್ವಚ್ಚತಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು..
ನಾಗರಿಕರು ತಮ್ಮ ಬೀದಿಗಳು, ನೆರೆಹೊರೆ, ಉದ್ಯಾನವನ, ನದಿ ಅಥವಾ ಸರೋವರ ಮತ್ತು ಇತರ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಚಗೊಳಿಸುವುದರ ಮೂಲಕ ಈ ಅಭಿಯಾನಕ್ಕೆ ಕೈ ಜೋಡಿಸುವಂತೆ ಪ್ರಧಾನಿ ಮೋದಿ ಸಲಹೆ ನೀಡಿದ್ರು. ಸರ್ಕಾರದ ಆದೇಶದಂತೆ ಭಾನುವಾರ ಪಟ್ಟಣದ ತಾಲೂಕಾ ಆಸ್ಪತ್ರೆಯ ಹಿಂದೆ ಇರುವ ಮೆಟ್ಟಿಲುಗಳನ್ನು ಸ್ವಚ್ಚಗೊಳಿಸಲಾಯ್ತು.
ಈ ವೇಳೆ ತಾಲೂಕಾಸ್ಪತ್ರೆಯ ಆಡಳಿತಾಧಿಕಾರಿ ಡಾ. ರಾಜೇಶ ಕಿಣಿ, ಸ್ವಚ್ಛತಾ ರಾಯಭಾರಿ ಡಾ ಜಿ.ಪಿ ಪಾಠಣಕರ, ಪ.ಪಂಚಾಯತ್ ಮುಖ್ಯಾಧಿಕಾರಿ ಪ್ರವೀಣಕುಮಾರ ನಾಯಕ, ಸದಸ್ಯೆ ನಿಶಾ ಶೇಟ್, ವಿವಿಧ ಸ್ವ ಸಹಾಯ ಸಂಘದ ಸದಸ್ಯರು, ಪಟ್ಟಣ ಪಂಚಾಯತದ ಅಧಿಕಾರಿಗಳು, ಸಿಬ್ಬಂದಿಗಳು ಸೇರಿದಂತೆ ಇತರರು ಸ್ವಚ್ಚತಾ ಅಭಿಯಾನದಲ್ಲಿ ಭಾಗಿಯಾಗಿದ್ರು..