ಹೊನ್ನಾವರ ತಾಲೂಕಿನ ಬಾಳೆಗದ್ದೆಯ ವೆಂಕಟರಮಣ ಸಭಾಭವನದಲ್ಲಿ ಶ್ರೀನಿಧಿ ಸೇವಾ ವಾಹಿನಿ ವತಿಯಿಂದ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯ್ತು…
ಹೊನ್ನಾವರ ತಾಲೂಕಿನ ಬಾಳೆಗದ್ದೆಯ ವೆಂಕಟ್ರಮಣ ಸಭಾಭವನದಲ್ಲಿ ಶ್ರೀನಿಧಿ ಸೇವಾ ವಾಹಿನಿ ವತಿಯಿಂದ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ನೀಡುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಬಿ.ಆರ್.ಪಿ ನಾಗರಾಜ್ ಶೆಟ್ಟಿ ಚಾಲನೆ ನೀಡಿದ್ರು. ಬಳಿಕ ಮಾತನಾಡಿದ ಅವರು, ಸಮಾಜದ ವಿದ್ಯಾರ್ಥಿಗಳ ಪ್ರತಿಭೆ ಗುರುತಿಸಿ ಪೊತ್ಸಾಹಿಸುತ್ತಾ ಬಂದಿರುವ ಶ್ರೀನಿಧಿ ಸಂಘಟನೆಯ ಕಾರ್ಯ ಶ್ಲಾಘನೀಯವಾದುದು ಎಂದು ಹೇಳಿದ್ರು.
ಸೋಲನ್ನು ಸವಾಲಾಗಿ ಸ್ವೀಕರಿಸಿ ಆತ್ಮವಿಶ್ವಾಸದಿಂದ ಮುನ್ನಡೆಯಿರಿ. ಶಿಕ್ಷಣದ ಜೊತೆಗೆ ಮಾನವೀಯತೆ ಮತ್ತು ಕೌಶಲ್ಯತೆಯ ಮೂಲಕ ವಿದ್ಯಾರ್ಥಿಗಳು ಸಾಧನೆ ಮಾಡಬೇಕು. ಮುಂದಿನ ದಿನದಲ್ಲಿ ಸಮಾಜದ ಅಭ್ಯುದಯಕ್ಕೆ ಪ್ರತಿಯೊರ್ವರು ಶ್ರಮಿಸೋಣ ಎಂದು ಶಿಕ್ಷಕಿ ಅರ್ಚನಾ ಶೆಟ್ಟಿ ಹೇಳಿದ್ರು.
ಬಳಿಕ ಮಾತನಾಡಿದ ವಿದ್ಯುತ್ ಗುತ್ತಿಗೆದಾರ ಸಂಘದ ಮಾಜಿ ಉಪಾಧ್ಯಕ್ಷ ಎಸ್.ಕೆ.ಶೆಟ್ಟಿ, ಕಳೆದ 24ವರ್ಷದಿಂದ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ನೋಟಬುಕ್ ವಿತರಣೆಯಂತಹ ಹಲವು ಕಾರ್ಯ ಮಾಡುತ್ತಾ ಬಂದಿದ್ದು, ಎಲ್ಲರ ಸಹಕಾರ ಅಗತ್ಯವಿದೆ. ಸೌಲಭ್ಯ ಪಡೆದು ನೌಕರಿ ದೊರೆತ ಬಳಿಕ ಇಂತಹ ಕಾರ್ಯಕ್ಕೆ ನೆರವಾದ್ರೆ, ಇನ್ನಷ್ಟು ವಿದ್ಯಾರ್ಥಿಗಳಿಗೆ ಸಹಾಯ ಮಾಡಬಹುದು ಎಂದರು.
ಕಾರ್ಯಕ್ರಮದಲ್ಲಿ. ಎಸ್.ಎಸ್.ಎಲ್.ಸಿ ಹಾಗೂ ಪಿಯು.ಸಿಯಲ್ಲಿ 85% ಅಧಿಕ ಅಂಕಗಳಿಸಿದ ತಾಲೂಕಿನ ಗಾಣಿಗ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರದ ಮೂಲಕ ಗೌರವಿಸಲಾಯ್ತು. ಕಾರ್ಯಕ್ರಮದ ಪೂರ್ವದಲ್ಲಿ ಇತ್ತೀಚಿಗೆ ನಿಧನರಾದ ಶಿಕ್ಷಕ ಸೀತಾರಾಮ ಬಲೀಮನೆಯವರಿಗೆ ಒಂದು ನಿಮಿಷ ಮೌನಾಚರಣೆ ಮೂಲಕ ಗೌರವಿಸಿ, ಮಂಜುನಾಥ ಶೆಟ್ಟಿ, ಗಜಾನನ ಶೆಟ್ಟಿ ನುಡಿನಮನ ಸಲ್ಲಿಸಿದ್ರು..
ಕಾರ್ಯಕ್ರಮದಲ್ಲಿ, ಸಂಘಟನೆಯ ಅಧ್ಯಕ್ಷರಾದ ಕೇಶವ ಶೆಟ್ಟಿ, ಸಮಾಜ ಸೇವಕಿ ಜಯಾ ಶೆಟ್ಟಿ, ನಿವೃತ್ತ ಕೆ.ಎಸ್.ಆರ್.ಟಿ.ಸಿ ಚಾಲಕ ಗಣಪಯ್ಯ ಶೆಟ್ಟಿ, ಪ್ರಕಾಶ ಶೆಟ್ಟಿ ಉಪಸ್ಥಿತರಿದ್ರು..