ಅರಣ್ಯ ನೌಕರ ಸಿದ್ದರಾಮಪ್ಪ ಪಾವನೆ ನಿಧನ

ಜೋಯಿಡಾ : ಕಳೆದ 30 ವರ್ಷಗಳಿಂದ ಜೋಯಿಡಾ ತಾಲೂಕಿನ ಅಣಶಿ ಮತ್ತು ಕುಂಬಾರವಾಡದಲ್ಲಿ ಅರಣ್ಯ ಇಲಾಖೆಯ ನೌಕರರಾಗಿ ಸೇವೆಯನ್ನು ಸಲ್ಲಿಸುತ್ತಿದ್ದ ಸಿದ್ದರಾಮಪ್ಪ ಪಾವನೆಯವರು ಇಂದು ಭಾನುವಾರ ಬೆಳಿಗ್ಗೆ ಜೋಯಿಡಾ ತಾಲೂಕು ಆಸ್ಪತ್ರೆಯಲ್ಲಿ ವಿಧಿವಶರಾದರು. ಮೃತರಿಗೆ 58 ವರ್ಷ ವಯಸ್ಸಾಗಿತ್ತು.

ಕುಂಬಾರವಾಡದಲ್ಲಿ ವಾಸವಿದ್ದ ಸಿದ್ದರಾಮಪ್ಪ‌ ಪಾವನೆಯವರಿಗೆ ನಿನ್ನೆ ರಾತ್ರಿ ಆರೋಗ್ಯದಲ್ಲಿ ಏರುಪೇರಾಗಿತ್ತು. ತಕ್ಷಣವೇ ಅವರನ್ನು ಜೋಯಿಡಾ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಆದರೆ ಇಂದು ಭಾನುವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮೃತರು ಮೂಲತಃ ಹಳಿಯಾಳ ತಾಲೂಕಿನ ತಟ್ಟಿ ಹಳ್ಳ ಗ್ರಾಮದ ನಿವಾಸಿಯಾಗಿದ್ದಾರೆ. ಮೃತರ ಪಾರ್ಥಿವ ಶರೀರಕ್ಕೆ ಕುಂಬಾರವಾಡ ವಲಯರಣ್ಯಾಧಿಕಾರಿಯವರ ಕಾರ್ಯಾಲಯದ ಮುಂಭಾಗದಲ್ಲಿ ಗೌರವ ನಮನವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ವಲಯಾರಣ್ಯಾಧಿಕಾರಿ ಶಶಿಧರ ಗೌಡ ಪಾಟೀಲ್ ಅವರು ಅರಣ್ಯ ಇಲಾಖೆಯ ವತಿಯಿಂದ ಮೃತರ ಅಂತ್ಯಸಂಸ್ಕಾರಕ್ಕೆ ರೂ:5,000/- ಧನ ಸಹಾಯವನ್ನು ಮೃತರ ಕುಟುಂಬಸ್ಥರಿಗೆ ನೀಡಿದರು.

ಈ ಸಂದರ್ಭದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಅಮರಾಕ್ಷರ, ಕುಂಬಾರವಾಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ದತ್ತ ನಾಯ್ಕ, ಊರಿನ‌ ಪ್ರಮುಖರಾದ ಮಂಗೇಶ್ ಕಾಮತ್, ಸುರೇಶ್ ಬಂಗಾರೆ, ಸಂದೀಪ್ ನಾಯ್ಕ, ವಿಜಯ್ ನಾಯ್ಕ ಹಾಗೂ ಅರಣ್ಯ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು