ಹೊನ್ನಾವರ: ಇಲ್ಲಿನ ಕರಾವಳಿ ಕಾವಲು ಪೊಲೀಸ್ ಠಾಣೆ ವ್ಯಾಪ್ತಿಯ ಹಿರೇಮಠ ಮೀನು ಮಾರುಕಟ್ಟೆ ಹತ್ತಿರ ಅಕ್ರಮವಾಗಿ ಸಾರಾಯಿ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಲಾಗಿದ್ದು, ಆರೋಪಿ ಪರಾರಿಯಾಗಿದ್ದು, ಸಾರಾಯಿ ವಶಕ್ಕೆ ಪಡೆಯಲಾಗಿದೆ.
ದಾಳಿಯ ವೇಳೆ ಕಾಸರಗೋಡ ಹಿರೇಮಠದ ಆಗ್ನೆಲ್ ಫರ್ನಾಂಡಿಸ್ ಪರಾರಿಯಾಗಿದ್ದು,ಅರೋಪಿ ಪತ್ತೆ ಕಾರ್ಯ ಮುಂದುವರೆದಿದೆ.
ಇನ್ ಸ್ಪೆಕ್ಟರ್ ಮುರುಗೇಶ ಅವರ ಮಾರ್ಗದರ್ಶನದಲ್ಲಿ ಪಿಎಸ್‌ಐ ವಿಠಲ ವಡವಾಣಿ ಸಿಬ್ಬಂದಿ ಮಹಿಳಾ ಎಚ್ ಸಿ ಲಕ್ಷ್ಮಿ ಗುನಗಾ, ಅನಿತಾ ಮಡಿವಾಳ, ಜೀಪ್ ಚಾಲಕ ಕೃಷ್ಣಾ ನಾಯ್ಕ, ಪೊಲೀಸ್ ಕಾನ್ ಸ್ಟೆಬಲ್ ಗಳಾದ ಶರತ್ ನಾಯ್ಕ, ಗೌರೀಶ ಗಾಡಿಗಾ, ನಾರಾಯಣ ಗೌಡ ಕಾರ್ಯಾಚರಣೆಯಲ್ಲಿ ಇದ್ದರು. ಈ ಕುರಿತು ಕರಾವಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆ ಕಾರ್ಯ ಮುಂದುವರೆದಿದೆ.