ಬಿಜೆಪಿ-ಜೆಡಿಎಸ್ ಸೇರಿಕೊಂಡ್ರೂ ಏನು ಮಾಡಲು ಸಾಧ್ಯವಿಲ್ಲ –ಮಂಕಾಳ ವೈದ್

ಹೊನ್ನಾವರ: ಬಿಜೆಪಿ-ಜೆಡಿಎಸ್ ಪಕ್ಷದಲ್ಲಿ ಯಾರಿಗೆ ಕಷ್ಟ ಆಗಿ ಮೈತ್ರಿ ಮಾಡಿಕೊಂಡರು ತಿಳಿಯದು.ಇಲ್ಲವೆ ರಾಜ್ಯದಲ್ಲಿ ಕಾಂಗ್ರೆಸ್ ಭದ್ರಕೋಟೆ ಆಯಿತು ಅಂತಾ ಭಯದಲ್ಲಿ ಮೈತ್ರಿಮಾಡಿಕೊಂಡರೊ ತಿಳಿಯಬೇಕಿದೆ.ಬಿಜೆಪಿ-ಜೆಡಿಎಸ್ ಸೇರಿಕೊಂಡರು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನ ಎನು ಮಾಡಲು ಆಗುವುದಿಲ್ಲ.ಪಕ್ಷ ಎಲ್ಲಾ ಕ್ಷೇತ್ರದಲ್ಲಿ ಗೆಲ್ಲುವು ಸಾಧಿಸಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ವಿಶ್ವಾಸ ವ್ಯಕ್ತಪಡಿಸಿದರು.ಪಟ್ಟಣದ ಸಚಿವರ ಕಾರ್ಯಾಲಯದಲ್ಲಿ ನಡೆದ ಜನಸ್ಪಂದನಾ ಅಹವಾಲು ಸ್ವೀಕಾರ ಕಾರ್ಯಕ್ರಮದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಜನರ ಕಷ್ಟಕ್ಕೆ ಸ್ಪಂದಿಸುವುದೇ ನನ್ನ ಕೆಲಸ.ಬೆಂಗಳೂರು,ಕಾರವಾರ, ಹೊನ್ನಾವರ, ಭಟ್ಕಳ ನಾಲ್ಕು ಕಡೆಯ ಕಚೇರಿ ದೂರವಾಣಿ ಸಂಖ್ಯೆ ಕೊಟ್ಟಿದ್ದೇನೆ.ಆದರೆ ಕೆಲವರು ರಾತ್ರಿ ವೇಳೆ ಕರೆ ಮಾಡಿ ಬೇಡಲ್ಲದ ವಿಷಯ ಮಾತನಾಡುತ್ತಾರೆ.ಅಂತಹದನ್ನು ಬಂದ್ ಮಾಡುವ ಕೆಲಸ ಮಾಡುತ್ತೇನೆ.ಆಗದಿರುವದನ್ನು ಆಗುದಿಲ್ಲ ಅಂತಾ ನೆರವಾಗಿಯೆ ಹೇಳುತ್ತೇನೆ.ಆಗುವ ಕೆಲಸ ಖಂಡಿತಾ ಮಾಡಿಕೊಡುತ್ತೇನೆ ಎಂದರು. 2005ರ ಪೂರ್ವದ ಅರಣ್ಯ ವಾಸಿಗಳ ಮೇಲೆ ಅರಣ್ಯ ಇಲಾಖಾ ಅಧಿಕಾರಿಗಳಿಂದ ಕಿರುಕುಳ ಆರೋಪದ ಬಗ್ಗೆ ಪ್ರತಿಕ್ರಿಯಿಸಿ 2013ರಲ್ಲಿ 25000 ಜನರಿಗೆ ಜಿಪಿಎಸ್ ಆಗಿ,ಕೆಲವರಿಗೆ ಹಕ್ಕುಪತ್ರ ಕೊಟ್ಟು ನ್ಯಾಯ ಕೊಡಿಸಿದ್ದೆ.ಅಂಗನವಾಡಿ,ಶಾಲೆ,ಆಸ್ಪತ್ರೆ ,ರುದ್ರಭೂಮಿ,ಕ್ರೀಡಾಂಗಣ ಎಲ್ಲದಕ್ಕು ಮಂಜೂರು ಮಾಡಿಸಿಕೊಟ್ಟಿದ್ದೆ.ನನ್ನ ಅಧಿಕಾರವಧಿ ನಂತರದಲ್ಲಿ ಎನಾಯ್ತು ಗೊತ್ತಿಲ್ಲ.ಆದರೆ ಈಗ ನಾನು ಅಧಿಕಾರಿಗಳಿಗೆ ಜಿಪಿಎಸ್ ಆದವರಿಗೆ ತೊಂದರೆ ಕೊಡಬೇಡಿ ಎಂದಿದ್ದೇನೆ.ಬದುಕುವದಕ್ಕೊಸ್ಕರ ಮನೆಕಟ್ಟಿಕೊಂಡಿದ್ದಾರೆ.ನಾನು ಎಂದಿಗು ಬಡವರ ಪರವಾಗಿರುತ್ತೇನೆ.ವ್ಯತ್ಯಾಸ ಆಗದಂತೆ ನೋಡಿಕೊಳ್ಳುತ್ತೇನೆ.2018ರ ನಂತರ ಒಂದೇ ಒಂದು ಹಕ್ಕುಪತ್ರ ಆಗಿಲ್ಲ.ಈಗ ಎನಾದರು ರಾಜಕಾರಣ ಶುರು ಮಾಡಿದ್ರು‌ ಮಾಡಬಹುದು ಎಂದು ವಿರೋಧಿಗಳನ್ನು ಕುಠುಕಿದರು‌.
ಯಾವುದೇ ಹೊಸ ಅಭಿವೃದ್ಧಿ ಕಾಮಗಾರಿಗಳು ಆರಂಭವಾಗದಿರುವ ಬಗ್ಗೆ ಕ್ಷೇತ್ರದ ಜನತೆ ಆರೋಪಿಸುತ್ತಿದ್ದಾರೆ ಎಂದು ಪತ್ರಕರ್ತರು ಪ್ರಶ್ನಿಸಿದಾಗ ಉತ್ತರಿಸಿದ ಸಚಿವರು
ಅಭಿವೃದ್ದಿ ಕಾಮಗಾರಿ ಆರಂಭ ಆಗದಿದ್ದರು,ಜನಸಾಮಾನ್ಯರ, ಬಡವರ ತಲುಪುವ ಕೆಲಸ ಆಗಿದೆ. ಪ್ರತಿ ತಾಲೂಕಿನಲ್ಲಿ ತಿಂಗಳಿಗೆ ವಿವಿಧ ಗ್ಯಾರಂಟಿ ಯೋಜನೆಗಳ ಮೂಲಕ ಬಡವರಿಗೆ 25 ಕೋಟಿ ರೂಪಾಯಿ ನೀಡುತ್ತಿದ್ದೇವೆ.ನಾವು ಹಣ ಕೊಡುತ್ತೇವೆ ಅಕ್ಕಿ ಕೊಡಿ ಎಂದರು ಬಿಜೆಪಿಗರು ಇರುವ ರಾಜ್ಯದಿಂದ ಅಕ್ಕಿ ಕೊಟ್ಟಿಲ್ಲ.ಬಿಜೆಪಿಗರು ಮಾಡಿದ ಸಾಲವನ್ನು ತೀರಿಸುತ್ತಿದ್ದೇವೆ ಎಂದರು.

ಟನಲ್ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ,ಎಮ್ ಎಲ್ ಸಿ ಗಣಪತಿ ಉಳ್ವೇಕರ್ ರಸ್ತೆಯಲ್ಲಿ ಕುಳಿತು ಪ್ರತಿಭಟನೆ ಮಾಡಿದ್ದಾರೆ. ಕಾರವಾರದಿಂದ ಭಟ್ಕಳ ವರೆಗೆ ಇನ್ನು ಚತುಷ್ಪಥ ರಸ್ತೆ ಪೂರ್ಣಗೊಂಡಿಲ್ಲ. ಅವರದೆ ಪಕ್ಷದ ಕೇಂದ್ರ ಸಚಿವ ಐಆರ್ ಬಿ ಕಂಪನಿ ಮುಖ್ಯಸ್ಥರಾಗಿದ್ದಾರೆ.ಎಷ್ಟು ದಿನದೊಳಗೆ ಕಾಮಗಾರಿ ಮುಗಿಸಿಕೊಡ್ತಿರಿ ಎಂದು ಅವರನ್ನೇ ಪ್ರಶ್ನೆ ಮಾಡಿದ್ದೇನೆ.ಅದಕ್ಕೆ ಉತ್ತರ ಇಲ್ಲ.ನಮಗೆ ಉತ್ತರ ಕೊಡಿ ಎಂದು ಸವಾಲ್ ಎಸೆದರು.

ಈ ವೇಳೆ ಮಂಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ, ಪಕ್ಷದ ಮುಖಂಡರಾದ ಚಂದ್ರಕಾಂತ ಕೊಚರೇಕರ, ಕೃಷ್ಣ ಗೌಡ,ಅಣ್ಣಪ್ಪ ನಾಯ್ಕ,ಬಾಲಚಂದ್ರ ಗೌಡ,ಮಂಜುನಾಥ ಗೌಡ,ರಾಜು ತಾಂಡೇಲ್ ಸೇರಿದಂತೆ ಅನೇಕ ಕಾರ್ಯಕರ್ತರು ಹಾಜರಿದ್ದರು.