ಸಿದ್ದಾಪುರ : ಕುಮಟಾದಿಂದ ಸಿದ್ದಾಪುರ ಮಾರ್ಗವಾಗಿ ಬೆಂಗಳೂರಿಗೆ ಬಿಡುತ್ತಿರುವ ಬಸ್ಸನ್ನು ಪುನರ್ ಆರಂಭಿಸುವಂತೆ ಸಿದ್ದಾಪುರದ ನಾಗಚೌಡೇಶ್ವರಿ ಯುವ ಗೆಳೆಯರ ಬಳಗದವರು ಒತ್ತಾಯ ಮಾಡಿದ್ದಾರೆ…
ಕುಮಟಾದಿಂದ ವಂದಾನೆ, ಲಂಬಾಪುರ, ಹಲಗೇರಿ ಸಿದ್ದಾಪುರ ಮಾರ್ಗವಾಗಿ ಬೆಂಗಳೂರಿಗೆ ಬಿಡುತ್ತಿರುವ ಬಸ್ಸನ್ನು ಪುನರ್ ಆರಂಭಿಸುವಂತೆ ಸಿದ್ದಾಪುರದ ನಾಗಚೌಡೇಶ್ವರಿ ಯುವ ಗೆಳೆಯರ ಬಳಗದವರು ಒತ್ತಾಯ ಮಾಡಿದ್ದಾರೆ. ಮೊದಲು ಡಾಂಬರೀಕರಣ ಇಲ್ಲದಂತಹ ವೇಳೆಯಲ್ಲಿ ಈ ಮಾರ್ಗದಲ್ಲಿ ಬಸ್ಸು ಸಂಚರಿಸಿ ಸಂಸ್ಥೆ ಗೆ ಆದಾಯ ತಂದುಕೊಡುವುದರ ಜೊತೆಗೆ ಜನರಿಗೆ ಅನುಕೂಲ ಉಂಟುಮಾಡಿತ್ತು. ಮತ್ತೆ ಬಸ್ನ್ನು ಪುನರ್ ಆರಂಭಿಸುವುದರಿಂದ ಇಲ್ಲಿನ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಹಾಗಾಗಿ ನಾವು ಈ ಮೂಲಕ ಒತ್ತಾಯವನ್ನ ಮಾಡುತ್ತಿದ್ದೇವೆ ಎಂದು ಸಂಘದ ಅಧ್ಯಕ್ಷ ಸುನೀಲ್ ನಾಯ್ಕ್ ಮನವಿ ಮಾಡಿದ್ರು.
ಈಗಾಗಲೇ ನವ ಜಾಗೃತ ವೇದಿಕೆ ವತಿಯಿಂದ ಕುಮಟಾ ಡಿಪೋಕ್ಕೆ ಮನವಿಯನ್ನ ಮಾಡಲಾಗಿದ್ದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಶಾಸಕರು ಸಚಿವರು ಈ ಬಗ್ಗೆ ಗಮನಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯ ಮಾಡಿದ್ರು.