ಯುವಕನೊಬ್ಬನಿಗೆ ಚಾಕು ಇರಿದು ಕೊಲೆಗೆ ಯತ್ನಸಿದ ಧುರುಳರು

ಹೊನ್ನಾವರ ತಾಲೂಕಿನ ಬೈಲಾರಕೇರಿಯಲ್ಲಿ ಅಕ್ರಮ ಮರಳು ತುಂಬಿಸಿದ್ದ ಗಾಡಿ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿ ಹಿಡಿಸಿಕೊಟ್ಟಿದ್ದಾರೆ ಎಂದು ಆರೋಪಿಸಿ ಯುವನೊಬ್ಬನಿಗೆ ಚಾಕು ಇರಿದು ಕೊಲೆಗೆ ಯತ್ನ ನಡೆಸಿದ ಘಟನೆ ನಡೆದಿದೆ.. ಹೊನ್ನಾವರ ತಾಲೂಕಿನ ಬೈಲಾರಕೇರಿಯಲ್ಲಿ ಅಕ್ರಮ ಮರಳು ತುಂಬಿಸಿದ್ದ ಗಾಡಿ ಬಗ್ಗೆ ಪೋಲಿಸರಿಗೆ ಮಾಹಿತಿ ನೀಡಿ ಹಿಡಿಸಿಕೊಟ್ಟಿದ್ದಾರೆ ಎಂದು ಆರೋಪಿಸಿ ಯುವನೊಬ್ಬನಿಗೆ ಚಾಕು ಇರಿದು ಕೊಲೆಗೆ ಯತ್ನ ನಡೆಸಿದ ಘಟನೆ ನಡೆದಿದೆ..

ತಾಲೂಕಿನ ಮಂಕಿ ಪೋಲಿಸ್ ಠಾಣಾ ವ್ಯಾಪ್ತಿಯ ಇಡಗುಂಜಿ, ಬೈಲಾರಕೇರಿಯಲ್ಲಿ ಘಟನೆ ನಡೆದಿದೆ. ತಾಲೂಕಿನ ಬೇರಂಕಿಯ ಯಶ್ವಂತ ಉತ್ತಮ ನಾಯ್ಕ ಎಂಬಾತ ಹಲ್ಲೆಗೊಳಾದ ಯುವಕ.ಮೋಳ್ಕೊಡದ ನಿವಾಸಿ ನರಸಿಂಹಮೂರ್ತಿ ಶ್ರೀಧರ ನಾಯ್ಕ, ಗುಣವಂತೆ ಹೆಬ್ಬಾರಹಿತ್ಲಿನ ಬಾಲಚಂದ್ರ ನಾಯ್ಕ, ಅಬಿಗದ್ದೆ ಹಾಮಕ್ಕಿಯ ಗಣೇಶ ಅಂಬಿಗ, ಬಳ್ಕೂರ, ಮೇಲಿನ ಶಾಲೆಯ ಸಂತೋಷ ಮದನ ನಾಯ್ಕ, ಮಹೇಶ ಮದನ ನಾಯ್ಕ, ಮೊಳ್ಕೊಡದ ಮಾಬಲೇಶ್ವರ ಶ್ರೀಧರ ನಾಯ್ಕ, ಯಶೋಧರ ಪಾಂಡುರಂಗ ನಾಯ್ಕ, ಹಿನ್ನೂರಿನ ವಿಜೇತ ಎಮ್. ನಾಯ್ಕ, ಗುಣವಂತೆಯ ಜಗದೀಶ ನಾಯ್ಕ ಇವರ ಆರೋಪಿತರಾಗಿದ್ದಾರೆ.ಕುಮಟಾ ಪೊಲೀಸರಿಗೆ ಮರಳು ತುಂಬಿದ ಗಾಡಿಯನ್ನು ಹಿಡಿಸಿಕೊಟ್ಟಿದ್ದಾರೆ ಎಂದು ಆರೋಪಿಸಿ ತಾಲೂಕಿನ ಮೋಳ್ಕೋಡ ನಿವಾಸಿ ನರಸಿಂಹಮೂರ್ತಿ ಶ್ರೀಧರ ನಾಯ್ಕ ಯಶ್ವಂತನಿಗೆ ಕರೆ ಮಾಡಿ “ನಿನಗೆ ಹಾಗೂ ಉದಯ ನಾಯ್ಕನಿಗೆ ಬಿಡುವುದಿಲ್ಲ,ಒಂದು ಗತಿ ಕಾಣಿಸುತ್ತೇವೆ” ಎಂದು ಬೆದರಿಸಿದ್ದ. ಸೆಪ್ಟೆಂಬರ್ 27ರ ಮಧ್ಯಾಹ್ನ 3:30ರ ವೇಳೆಗೆ ಮೇಲಿನ ಇಡಗುಂಜಿಯ ರಾಜೇಶ್ ನಾಯ್ಕ ಅವರ ಮನೆಗೆ ಯಶ್ವಂತನನ್ನು ಕೊಲೆ ಮಾಡುವ ಉದ್ದೇಶದಿಂದ ನರಸಿಂಹಮೂರ್ತಿ ಎಂಬಾತ ಉಳಿದವರೊಂದಿಗೆ ದೂರುದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿದ್ದ ಎನ್ನಲಾಗಿದೆ.ಮನೆಯ ಜಗುಲಿಯ ಮೇಲೆ ಕುಳಿತು ಮಾತನಾಡುತ್ತಾ ಕುಳಿತ ಯಶ್ವಂತ ನಾಯ್ಕನ ಉದ್ದೇಶಿಸಿ ಅವಾಚ್ಯವಾಗಿ ಬೈದ ನರಸಿಂಹಮೂರ್ತಿ ತನ್ನ ಕೈಯಲ್ಲಿದ್ದ ಚಾಕುವಿನಿಂದ ಯಶ್ವಂತನ ತಲೆಗೆ ಚುಚ್ಚಿದ್ದಾನೆ.ಅಲ್ಲಿದ್ದ ಮನೆಯ ಸದಸ್ಯರು ಯಶ್ವಂತನನ್ನು ತಪ್ಪಿಸಿ ಅಡುಗೆಕೋಣೆಯಲ್ಲಿ ಬಾಗಿಲು ಹಾಕಿ ಕೂಡಿ ಹಾಕಿದಾಗ ಆರೋಪಿತರು ಬಾಗಿಲು ಮುರಿದಿದ್ದಾರೆ. ಅಲ್ಲಿದ್ದ ಬಾಲಚಂದ್ರ ನಾಯ್ಕ ಎಂಬಾತ ಕತ್ತಿಯಿಂದ ಯಶ್ವಂತನಿಗೆ ಗಾಯಗೊಳಿಸಿದ್ದಾನೆ. ಉಳಿದ ಆರೋಪಿಗಳು ಯಶವಂತನ ಕೊಲೆ ಮಾಡುವ ಉದ್ದೇಶದಿಂದ ಕಟ್ಟಿಗೆ ತುಂಡಿನಿಂದ ಹೊಡೆದಿದ್ದಾರೆ. ತಪ್ಪಿಸಲು ಹೋದ ರಾಜೇಶ್ ನಾಯ್ಕ ಅವರ ತಂದೆ ಮತ್ತು ತಾಯಿಗೂ ಕೂಡ ಹಲ್ಲೆ ಮಾಡಿದ್ದಾರೆ ಎಂದು ರಾಜೇಶ ನಾಯ್ಕ ಅವರು ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ದೂರು ದಾಖಲಿಸಿ ಕೊಂಡಿರುವ ಪೋಲಿಸರು ತನಿಖೆ ಕೈಗೊಂಡಿದ್ದಾರೆ