ಭಟ್ಕಳ ತಾಲೂಕಿನ ವಿವಿಧ ಗ್ರಾಮದ ಶತಾಯುಷ ಮತದಾರರ ಮನೆಗೆ ಭೇಟಿ ನೀಡಿದ ತಹಶಿಲ್ದಾರ ತಿಪ್ಪೇಸ್ವಾಮಿ.

ಭಟ್ಕಳ ತಾಲೂಕಿನ ವಿವಿಧ ಗ್ರಾಮಗಳ ಶತಾಯುಷ ಮತದಾರರ ಮನೆಗೆ ಸಹಾಯುಕ ಆಯುಕ್ತೆ ಹಾಗೂ ತಹಶಿಲ್ದಾರ ಭೇಟಿ ನೀಡಿ ಅಂತರಾಷ್ಟ್ರೀಯ ಹಿರಿಯರ ದಿನಾಚರಣೆ ಹಿನ್ನೆಲೆ ಅಭಿನಂದನಾ ಪತ್ರ ನೀಡಿ ಗೌರವಿಸಿದ್ರು..
ಭಟ್ಕಳ ತಾಲೂಕಿನ ವಿವಿಧ ಗ್ರಾಮಗಳ ಶತಾಯುಷ ಮತದಾರರ ಮನೆಗೆ ಸಹಾಯುಕ ಆಯುಕ್ತೆ ಹಾಗೂ ತಹಶಿಲ್ದಾರ ಭೇಟಿ ನೀಡಿ ಅಂತರಾಷ್ಟ್ರೀಯ ಹಿರಿಯರ ದಿನಾಚರಣೆ ಹಿನ್ನೆಲೆ ಅಭಿನಂದನಾ ಪತ್ರ ನೀಡಿ ಗೌರವಿಸಿದ್ರು..

ಪ್ರತಿ ವರ್ಷ ಅ.1 ರಂದು ಜಾಗತಿಕವಾಗಿ ಹಿರಿಯರ ಅಂತಾರಾಷ್ಟ್ರೀಯ ದಿನವನ್ನು ಆಚರಿಸಲಾಗುತ್ತದೆ. ವಯಸ್ಸಾದವರ ಮೇಲೆ ಪರಿಣಾಮ ಬೀರುವ ಸಮಸ್ಯೆಗಳಾದ ವೃದ್ಧಾಪ್ಯ ಮತ್ತು ಹಿರಿಯ ನಿಂದನೆಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ವಯಸ್ಸಾದವರು ಸಮಾಜಕ್ಕೆ ನೀಡುವ ಕೊಡುಗೆಗಳನ್ನು ಶ್ಲಾಘಿಸಲು ಈ ದಿನದ ಉದ್ದೇಶವಾಗಿದೆ.

ಈ ಹಿನ್ನೆಲೆಯಲ್ಲಿ ಭಟ್ಕಳ ಸಹಾಯಕ ಆಯುಕ್ತೆ ಡಾ. ನಯನಾ ಎನ್.ಹಾಗೂ ತಹಶಿಲ್ದಾರ ತಿಪ್ಪೇಸ್ವಾಮಿ, ಶತಾಯುಷಿ ಮತದಾರರಾದ ಮಾಸ್ತಿ ನಾಗಪ್ಪ‌ ನಾಯ್ಕ, ನಾಯ್ಕ ಸುಬ್ಬಿ, ಹೆದ್ದಾರಿಮನೆ ದಾಸಯ್ಯ, ನಾಯ್ಕ ಕರಿಯಮ್ಮ, ಮೊಗೇರ ಲಕ್ಷ್ಮೀ, ಇವರ ಮನೆಗಳಿಗೆ ಭೇಟಿ ನೀಡಿ ಅಭಿನಂದನ ಪತ್ರ ನೀಡಿ ಸನ್ಮಾನಿಸಿ ಗೌರವಿಸಿದ್ರು. ಈ ವೇಳೆ ಮಾವಳ್ಳಿ ಉಪ ತಹಶಿಲ್ದಾರ ರಜನಿ ದೇವಾಡಿಗ, ಮಾವಳ್ಳಿ ಕಂದಾಯ ನಿರೀಕ್ಷಕ ಶ್ರೀನಿವಾಸ ಮಾಸ್ತಿ, ಶಿರಾಲಿ ಗ್ರಾಮ ಆಡಳಿತಾಧಿಕಾರಿ ಹೇಮು ನಾಯ್ಕ, ಬೈಲೂರು ಗ್ರಾಮ ಆಡಳಿತಾಧಿಕಾರಿ ಲತಾ ನಾಯ್ಕ ಬೈಲೂರು,ಶಿರಾಲಿ ಗ್ರಾಮದ ಗ್ರಾಮ ಸಹಾಯಕರು ಹಾಗೂ ಇತರರು ಉಪಸ್ಥಿತರಿದ್ರು..