ಭಟ್ಕಳ: ರಾಷ್ಟ್ರಪಕ್ಷಿಯಾದ ನವಿಲನ್ನು ಗುಂಡು ಹಾರಿಸಿ ಕೊಂದ ಘಟನೆ ಭಟ್ಕಳದ ಮುಟ್ಟಳ್ಳಿ ಗ್ರಾ. ಪಂ ವ್ಯಾಪ್ತಿಯ ಬೇಹಳ್ಳಿಯಲ್ಲಿ ನಡೆದಿದ್ದು ಓರ್ವ ಆರೋಪಿಯನ್ನು ಬಂಧಿಸಿದ ಘಟನೆ ನಡೆದಿದೆ.
ಬಂಧಿತ ಆರೋಪಿಯನ್ನು ಇನಾಯಿತುಲ್ಲಾ ಮೈಲಪ್ಪಿ ಮುಗಳಿ ಹೊಂಡ ಪುರವರ್ಗ ನಿವಾಸಿ ಎಂದು ತಿಳಿದು ಬಂದಿದೆ. ಈತ ಮುಟ್ಟಳ್ಳಿ ಗ್ರಾ. ಪಂ ವ್ಯಾಪ್ತಿಯ ಬೇಹಳ್ಳಿಯ ಅರಣ್ಯ ಪ್ರದೇಶದಲ್ಲಿ ತನ್ನ ಏರ್‌ಗನ್ ನಿಂದ ಹೆಣ್ಣು ನವಿಲಿಗೆ ಗುಂಡು ಹಾರಿಸಿ ಸಾಯಿಸಿ ನಂತರ ನವಿಲನ್ನು ದ್ವಿಚಕ್ರ ವಾಹನ ಸಂಖ್ಯೆ: KA-47 W -5566 ರಲ್ಲಿ ಬೈಕ್ ಢಿಕ್ಕಿಯಲ್ಲಿ ಹಾಕಿಕೊಂಡು ಬೇಹಳ್ಳಿಯಿಂದ ಸಬತ್ತಿಕಡೆಗೆ ಹೋಗುವ ರಸ್ತೆಯಲ್ಲಿ ಸಾಗುತ್ತಿರುವಾಗ ಅರಣ್ಯ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಆರೋಪಿತನ್ನು ಬಂಧಿಸಿದ್ದಾರೆ.
ಈ ಕುರಿತು ವನ್ಯಜೀವಿ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಉಪ ಅರಣ್ಯ ಸಂರಕ್ಷಣಾಧಿಕಾರಿ, ಹೊನ್ನಾವರ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಭಟ್ಕಳ ಉಪ ವಿಭಾಗ ರವರ ಸಮ್ಮುಖದಲ್ಲಿ ಭಟ್ಕಳ ವಲಯ ಅರಣ್ಯಾಧಿಕಾರಿ ಶರತ್ ಶೆಟ್ಟಿ, ಹಾಗೂ ಉಪ ವಲಯ ಅರಣ್ಯಾಧಿಕಾರಿಗಳಾದ ಸಂದೀಪ ಭಂಡಾರಿ ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದರು