ಕಾರವಾರ :-ದೇಶದಲ್ಲಿಯೇ ಅತಿ ಉದ್ದವಾಗಿದೆ ಎಂದು ಹೇಳಲಾಗಿರುವ ಬಂಗಡೆ ಮೀನು ಕಾರವಾರ ಅರಬ್ಬಿ ಸಮುದ್ರದಲ್ಲಿ ಪತ್ತೆಯಾಗಿದೆ.
ಈ ಮೀನು ಬೀಡು ಬಲೆ ಮೀನುಗಾರಿಕೆಗೆ ತೆರಳಿದ್ದ ಕಾರವಾರದ ಆನಂದ ಹರಿಕಂತ್ರ ಅವರ ಬಲೆಗೆ ಸಿಕ್ಕಿದೆ. ನವೀನ ಹರಿಕಂತ್ರ ಮೀನು ಖರೀದಿಸಿದ್ದು,ವಿಶೇಷವಾಗಿ ಕಂಡಿರುವ ಬಂಗಡೆಯನ್ನು ಮೀನುಗಾರರ ಸಂಘರ್ಷ ಸಮಿತಿಯ ಜಿಲ್ಲಾಧ್ಯಕ್ಷ ವಿನಾಯಕ ಹರಿಕಂತ್ರ ಅವರಿಗೆ ನೀಡಿದ್ದಾರೆ.
ಈ ಮೀನು ಸುಮಾರು 19 ಇಂಚು ಉದ್ದ ಮತ್ತು 4.5 ಅಗಲ ಇದೆ. ಇಷ್ಟು ದೊಡ್ಡ ಬಂಗಡೆ ಮೀನು ದೇಶದ ಯಾವುದೇ ಕರಾವಳಿಯಲ್ಲಿ ಪತ್ತೆಯಾಗಿರುವ ಮಾಹಿತಿ ಇಲ್ಲ ಎಂದು ಕರ್ನಾಟಕ ವಿಶ್ವ ವಿದ್ಯಾಲಯದ ಕಡಲ ವಿಜ್ಞಾನ ವಿಭಾಗ ತಿಳಿಸಿದೆ.
ದೊಡ್ಡ ಗಾತ್ರದ ಬಂಗಡೆಯನ್ನು ಸಾರ್ವಜನಿಕರ ವಿಕ್ಷಣೆಗಾಗಿ ಕಾರವಾರ ಕಡಲವಿಜ್ಞಾನ ಕೇಂದ್ರದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು ಎಂದು ವಿನಾಯಕ ಅವರು ತಿಳಿಸಿದ್ದಾರೆ.