ಪ್ರಸಾದ ವಿತರಿಸಿ ವಿಘ್ನ ನಿವಾರಕ ಒಳಿತು ಮಾಡಲಿ ಎಂದು ಹಾರೈಸಿದ ರೂಪಾಲಿ ನಾಯ್ಕ

ಕಾರವಾರ: ನಗರದ ಸುಭಾಷ್ ವೃತ್ತದಲ್ಲಿ ಕಾರವಾರ ಆಟೋ ರಿಕ್ಷಾ ಚಾಲಕ- ಮಾಲಕರ ಸಂಘದ ಗಣೇಶೋತ್ಸವ ಸಮಿತಿಯ ವತಿಯಿಂದ ಪ್ರತಿಷ್ಠಾಪಿಸಿದ 14ನೇ ವರ್ಷದ ಗಣೇಶೋತ್ಸವದ ಅಂಗವಾಗಿ ಸೋಮವಾರ ಅನ್ನಪ್ರಸಾದ ವಿತರಣೆ ಮಾಡಲಾಯಿತು.
ಮಾಜಿ ಶಾಸಕಿ ರೂಪಾಲಿ ನಾಯ್ಕ ಈ ಅನ್ನಸಂತರ್ಪಣೆ ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ಧನ ಸಹಾಯ ಮಾಡಿದ್ದರು. ಸೋಮವಾರ ಗಣೇಶೋತ್ಸವದ ಅನ್ನ ಸಂತರ್ಪಣೆ ಅಂಗವಾಗಿ ನಡೆದ ವಿಶೇಷ ಪೂಜೆಯಲ್ಲಿ ಪಾಲ್ಗೊಂಡ ಅವರು ಧಾರ್ಮಿಕ ವಿಧಿ ವಿಧಾನಗಳನ್ನು ಶ್ರದ್ದೆಯಿಂದ ನೆರವೇರಿಸಿದರು. ನಾಡಿನ ಜನತೆಗೆ ಮತ್ತು ಎಲ್ಲಾ ಆಟೋ ರಿಕ್ಷಾ ಚಾಲಕ ಮಾಲಕರ ಕುಟುಂಬಕ್ಕೆ ವಿಘ್ನ ನಿವಾರಕ ಆಶೀರ್ವದಿಸಿ ಹರಸಲಿ ಎಂದು ಪ್ರಾರ್ಥಿಸಿದರು. ಅನ್ನಪ್ರಸಾದವನ್ನು ನೈವೇದ್ಯವಾಗಿ ದೇವರಿಗೆ ಅರ್ಪಿಸಿದರು. ನಂತರ ಪ್ರಸಾದ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನೂಕು ನುಗ್ಗಲಿನ ಮಧ್ಯದಲ್ಲಿ ಸರತಿಯಲ್ಲಿ ಬಂದ ಜನರಿಗೆ ನಿಂತು ಊಟ ಬಡಿಸಿದ ಮಾಜಿ ಶಾಸಕಿ ರೂಪಾಲಿ ನಾಯ್ಕ ಸರಳತೆ ಮೆರೆದರು.
ವಿವಿಧ ಇಲಾಖೆಯ ನೌಕರರು ಮತ್ತು ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 5000ಕ್ಕೂ ಅಧಿಕ ಭಕ್ತಾದಿಗಳು ಅನ್ನಪ್ರಸಾದ ಸ್ವೀಕರಿಸಿದರು. ಭಕ್ತಾದಿಗಳೆಲ್ಲಾ ಅನ್ನ ಪ್ರಸಾದ ಸ್ವೀಕರಿಸಿದ ನಂತರ ಮಾಜಿ ಶಾಸಕಿ ರೂಪಾಲಿ ನಾಯ್ಕ ಊಟ ಸ್ವೀಕರಿಸಿ ತಾವು ಜನಮೆಚ್ಚಿದ ನಾಯಕಿ ಎನ್ನುವುದನ್ನು ಸಾಬೀತು ಮಾಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೂಪಾಲಿ ನಾಯ್ಕ ಅವರೊಂದಿಗೆ ಸಾರ್ವಜನಿಕರನೇಕರು ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದರು. ಚುನಾವಣೆಯ ಬಳಿಕವೂ ಮನೆ ಮಗಳಂತೆ ಜನರು ಅವರೊಂದಿಗೆ ಮಾತನಾಡುತ್ತಿದ್ದದ್ದು ಕಂಡುಬಂತು. ಸತತವಾಗಿ ಸುಭಾಷ್ ವೃತ್ತದಲ್ಲಿ ಕಾರವಾರ ಆಟೋ ರಿಕ್ಷಾ ಚಾಲಕ- ಮಾಲಕರ ಸಂಘದ ಗಣೇಶೋತ್ಸವ ಸಮಿತಿಯ ವತಿಯಿಂದ ನಡೆಯುವ ಅನ್ನ ಸಂತರ್ಪಣೆ ಕಾರ್ಯಕ್ರಮಕ್ಕೆ ತನು ಮನ ಧನ ಸಹಾಯ ಮಾಡಿದ ಮಾಜಿ ಶಾಸಕಿ ರೂಪಾಲಿ ನಾಯ್ಕ ಅವರನ್ನು ಕಾರವಾರ ಆಟೋರಿಕ್ಷಾ ಚಾಲಕ ಮಾಲಕರ ಗಣೇಶೋತ್ಸವ ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ಕಾರವಾರ ಆಟೋರಿಕ್ಷಾ ಚಾಲಕ ಮಾಲಕರ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ದಿಲೀಪ್ ಅರ್ಗೇಕರ್, ಉಪಾಧ್ಯಕ್ಷ ರೋಷನ್ ಹರಿಕಂತ್ರ, ಕಾರ್ಯದರ್ಶಿ ಸುಭಾಷ್ ಗುನಗಿ, ಸಹ ಕಾರ್ಯದರ್ಶಿ ಗೋಪಾಲ ಗೌಡ, ಖಜಾಂಚಿ ರಾಜೇಶ್ ಹರಿಕಂತ್ರ, ಸದಸ್ಯರಾದ ಸಂತೋಷ್ ಪೆಡ್ನೇಕರ್, ಸುನೀಲ್ ತಾಂಡೇಲ್, ಜ್ಞಾನೇಶ್ವರ ಪೆಡ್ನೇಕರ್, ನಂದೇಶ್ ಮಾಜಾಳಿಕರ್, ಸಂತೋಷ್ ಗುನಗಿ, ಮತ್ತು ಬಿಜೆಪಿ ಪಕ್ಷದ ಪ್ರಮುಖರು ಇದ್ದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡ ರೂಪಾಲಿ ನಾಯ್ಕ ಅವರೊಂದಿಗೆ ಸಾರ್ವಜನಿಕರನೇಕರು ಫೋಟೋ ಕ್ಲಿಕ್ಕಿಸಿಕೊಂಡು ಸಂತಸ ವ್ಯಕ್ತಪಡಿಸಿದರು. ಚುನಾವಣೆಯ ಬಳಿಕವೂ ಮನೆ ಮಗಳಂತೆ ಜನರು ಅವರೊಂದಿಗೆ ಮಾತನಾಡುತ್ತಿದ್ದದ್ದು ಕಂಡುಬಂತು