ಕಾರವಾರ: ಉತ್ತರ ಕನ್ನಡವೂ ಸೇರಿದಂತೆ ಪಶ್ಚಿಮ ವಲಯದ 27 ಪೊಲೀಸ್ ಅಧಿಕಾರಿಗಳಿಗೆ ಮಂಗಳೂರಿನಲ್ಲಿ ವಿಶೇಷ ಡ್ರೋನ್ ಆಪರೇಟಿಂಗ್ ತರಬೇತಿಯನ್ನು ನೀಡಲಾಗುತ್ತಿದೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಿಂದ ಈ ಬಗ್ಗೆ ಇಂದು ಪತ್ರಿಕಾ ಹೇಳಿಕೆ ನೀಡಲಾಗಿದ್ದು ಪಶ್ಚಿಮ ವಲಯದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಹಾಗೂ ಚಿಕ್ಕಮಗಳೂರು ಜಿಲ್ಲೆಗಳು ಜೊತೆಗೆ ಮಂಗಳೂರು ಪೊಲೀಸ್ ಕಮೀಷನರೇಟ್ ಘಟಕ ಸೇರಿ ಒಟ್ಟು 27 ಅಧಿಕಾರಿ ಮತ್ತು ಸಿಬ್ಬಂದಿಗಳಗೆ ಪಶ್ಚಿಮ ವಲಯ ಮಂಗಳೂರು ಮತ್ತು ಆಂತರಿಕ ಭದ್ರತಾ ವಿಭಾಗ ಬೆಂಗಳೂರು ರವರ ಸಹಯೋಗದೊಂದಿಗೆ 2 ವಾರಗಳ Unmanned Aerial Vehicle ( UAV / Drone ) ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.
ಈ ತರಬೇತಿಗೆ ಆ.29 ರಂದು ಮಂಗಳೂರಿನಲ್ಲಿ ಪಶ್ಚಿಮ ವಲಯ ಐ.ಜಿ.ಪಿ. ದೇವಜ್ಯೋತಿ ರೇ ಅವರು ಚಾಲನೆ ನೀಡಿದರು. ಪೊಲೀಸ್ ಅಧಿಕಾರಿಗಳಿಗೆ ಈ ತರಬೇತಿಯನ್ನು ದೇಶದಲ್ಲಿಯೇ ಕರ್ನಾಟಕ ರಾಜ್ಯವು ಮೊದಲನೆಯದಾಗಿ ಹಮ್ಮಿಕೊಂಡಿದ್ದು ಅದರಲ್ಲೂ ರಾಜ್ಯದಲ್ಲಿ ಪ್ರಥಮವಾಗಿ ಪಶ್ಚಿಮ ವಲಯದ ಜಿಲ್ಲೆಯ ಅಧಿಕಾರಿ ಸಿಬ್ಬಂದಿಗಳಿಗೆ ಆಂತರಿಕ ಭದ್ರತಾ ವಿಭಾಗ ಬೆಂಗಳೂರಿನ ತಜ್ಞರ ತಂಡವು ತರಬೇತಿಯನ್ನು ನೀಡುತ್ತಿದೆ. ಡ್ರೋನ್ ಕುರಿತಾದ ವಿವರಗಳು ಮತ್ತು ಕಾನೂನುಗಳು ಅಲ್ಲದೇ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ನಿಟ್ಟಿನಲ್ಲಿ UAV / Drone ನ ಮತ್ತು ಅದರ ಪರಿಕರಗಳ ಉಪಯೋಗ ಮತ್ತು ಡ್ರೋನ್ ಆಪರೇಟ್ ಮಾಡುವ ಬಗ್ಗೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯವರಿಗೆ ಈ ತರಬೇತಿಯನ್ನು ನೀಡಲಾಗುತ್ತಿದೆ.
ರಾತ್ರಿ ಸಮಯದಲ್ಲಿ ಸೂಕ್ಷ್ಮ ಪ್ರದೇಶ, ಕಾಡು, ಬೆಟ್ಟ, ಗುಡ್ಡ ಪ್ರದೇಶಗಳಲ್ಲಿ ಕೂಡಾ LAV/Drone ಅನ್ನು ಹಾರಿಸಿ ಮಾಹಿತಿ ಸಂಗ್ರಹಣೆಯ ಬಗ್ಗೆಯೂ ಸಹ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಎಸ್. ಪಿ. ಡಾ. ಸುಮನ್ ಪೆನ್ನೇಕರ್ ಮಾಹಿತಿ ನೀಡಿದ್ದಾರೆ.