ಮತ್ತೆ ತಲೆ ಎತ್ತಿದ ಅಕ್ರಮ ಮಟ್ಕಾ ಜೂಜು ಅಡ್ಡೆಗಳು.? ಆನ್ಲೈನ್ ಮೂಲಕವೂ ಒ.ಸಿ ನಂಬರ್ ಬುಕಿಂಗ್.? ಕ್ರಮ ಕೈಗೊಳ್ತಿವಿ ಎಂದ ಪೊಲೀಸ್ ಇಲಾಖೆ.!

ಮುಂಡಗೋಡ: ತಾಲೂಕಿನಲ್ಲಿ ಮತ್ತೆ ಇಸ್ಪೀಟ್ ಹಾಗೂ ಮಟ್ಕಾ ಆರಂಭಗೊಂಡಿದೇಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ಕಾಡತೊಡಗಿದೆ. ಜಿಲ್ಲಾ ಎಸ್.ಪಿ ಸುಮನ್ ಪೆನ್ನೇಕರ್ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಯ ವಿವಿಧ ಕಡೆಗಳಲ್ಲಿ ದಾಳಿ ನಡೆಸಿ ಮಟ್ಕಾ ಬುಕ್ಕಿ ಹಾಗೂ ಇಸ್ಪೀಟ್ ದಾಳಿ ನಡೆಸಿ ಪ್ರಕರಣ ದಾಖಲಿಸಿ ಎಚ್ಚರಿಕೆ ನೀಡಿದ್ದರು. ಆಟಗಾರರಿಗೆ ಹಾಗೂ ಬುಕ್ಕಿಗಳಿಗೆ ಪನ್ನೇಕರ್ ಅವರು ಸಿಂಹಸ್ವಪ್ನ ಆಗಿದ್ದಾರೆ.

ಆದರೆ ಇತ್ತೀಚಿನ ದಿನಗಳಲ್ಲಿ ಬಂದ್ ಆಗಿದ್ದ ಮಟ್ಕಾ ಮತ್ತೆ ತಾಲೂಕಿನ ಅಲ್ಲಲ್ಲಿ ಆರಂಭಗೊಂಡಿವೆ. ವಾಟ್ಸಾಪ್ ಗಳಲ್ಲಿ ನಂಬರ್ಗಳನ್ನು ಹಾಕಿ ಬುಕ್ಕಿಗಳಿಗೆ ಕಳುಹಿಸುವುದು ಕಂಡು ಬಂದಿದೆ. ಟಿಬೆಟಿಯನ್ ಕ್ಯಾಂಪ್, ಪಟ್ಟಣದಲ್ಲಿ ಸೇರಿದಂತೆ ಕಾತೂರ್, ಪಾಳಾ, ಮಳಗಿ ಸೇರಿದಂತೆ ಕೆಲವು ಕಡೆಗಳಲ್ಲಿ ಮಟ್ಕಾ ಆನಲೈನ್ ಮೂಲಕ ಕಳಿಸಲಾಗುತ್ತಿದೆ. ಕಲಕೇರಿ, ಅಂದಲಗಿ ಸೇರಿದಂತೆ ಇನ್ನೂ ಕೆಲವು ಕಡೆಗಳಲ್ಲಿ ಮಟ್ಕಾ ಬರೆದು ವಾಟ್ಸಾಪ್ ನಲ್ಲಿ ಬರೆದು ನೀಡಲಾಗುತ್ತಿದೆ.

ಗಡಿಭಾಗ ಸೇರಿದಂತೆ ಗ್ರಾಮೀಣ ಭಾಗದಲ್ಲಿನ ಜನರಿಂದ ಪಟ್ಟಣದ ಎರಡು ಮೂರು ಬುಕ್ಕಿಗಳು ಮಟ್ಕಾ ಮತ್ತು ಇಸ್ಪೀಟ್ ಆಡಿಸುತ್ತಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ.
ಟಿಬೆಟಿಯನ್ ಕ್ಯಾಂಪ್ ನಲ್ಲಿ ಮಾತ್ರ ವರ್ಷವಿಡಿ ಇಸ್ಪೇಟ ಆಟ ಶುರುವಾಗಿದೆ. ಪೊಲೀಸರು ಸ್ಥಳಕ್ಕೆ ಹೋಗುತ್ತಿದ್ದಂತೆ ಆಟಗಾರರು ನಾಪತ್ತೆಯಾಗಿ ಬಿಡುತ್ತಾರೆ. ಇದರ ಮರ್ಮವೇನು.? ಎಂದು ಜನ ಪ್ರಶ್ನಿಸುತ್ತಿದ್ದಾರೆ.

ಕಳೆದ ಹದಿನೈದು ದಿನಗಳ ಹಿಂದೆಯಷ್ಟೆ ಪಟ್ಟಣದಲ್ಲಿ ರಮ್ಮಿಕ್ಲಬ್‌ ಆರಂಭವಾಗಿದೆ. ರಾತ್ರಿ ವೇಳೆಯಲ್ಲಿ ಅಲ್ಲಿಯ ಅಕ್ಕ-ಪಕ್ಕದ ಜನರು ಇದರಿಂದ ತೊಂದರೆ ಅನುಭವಿಸುತ್ತಿದ್ದು ಈ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಸಿಪಿಐ ಸಿದ್ದಪ್ಪ ಸಿಮಾನಿ ಈ ಬಗ್ಗೆ ಪ್ರತಿಕ್ರಿಯಿಸಿ, ತಾಲೂಕಿನಲ್ಲಿ ಈಗಾಗಲೇ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಲಾಗಿದೆ. ಮಟ್ಕಾ ಇಸ್ಪೀಟ್ ಆಟಗಳು ಕಂಡು ಬಂದರೆ ಯಾರೇ ಆಗಿದ್ದರು ಅವರ ಮೇಲೆ ನಿರ್ಧಾಕ್ಷಣ್ಯವಾಗಿ ಕ್ರಮ ಜರುಗಿಸಲಾಗುವುದು ಎಂದರು.

ಎಸ್.ಪಿ ಸುಮನ್ ಪೆನ್ನೇಕರ್ ಕಾರವಾರದಲ್ಲಿ ಪ್ರತಿಕ್ರಿಯಿಸಿ ಈಗಾಗಲೇ ಜಿಲ್ಲೆಯಾದ್ಯಂತ ಅನಧಿಕೃತ ದಂಧೆಗಳು ಸೇರಿದಂತೆ ಇಸ್ಪೀಟ್-ಮಟ್ಕಾ ಗಳಿಗೂ ಕಡಿವಾಣ ಹಾಕಲಾಗಿದೆ. ಮುಂಡಗೋಡದಲ್ಲಿ ಆನ್ಲೈನ್ ಮೂಲಕ ಆಡುತ್ತಿರುವ ಬಗ್ಗೆ ಮಾಹಿತಿ ನೀಡಿದರೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು. ಒಂದು ವೇಳೆ ಮುಂಡಗೋಡ ವ್ಯಾಪ್ತಿಯಲ್ಲಿ ಅಂತಹ ಯಾವುದೇ ಇಸ್ಪೀಟ್ ಹಾಗೂ ಮಟ್ಕಾ ನಡೆದರೆ ಸ್ಥಳೀಯ ಪೊಲೀಸರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದರು.