ಯಲ್ಲಾಪುರ: ಐರ್ಲೆಂಡ್ ಪ್ರವಾಸಲ್ಲಿರುವ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಐರ್ಲೆಂಡ್ ನ ಭಾರತೀಯ ರಾಯಭಾರಿ ಕಚೇರಿಗೆ ಭೇಟಿ ನೀಡಿದರು. ಅಲ್ಲಿ ಆಯೋಜಿಸಿದ್ದ ‘ಭಾರತ- ಐರ್ಲೆಂಡ್ ಬಾಂಧವ್ಯ ಉಪನ್ಯಾಸ ಸರಣಿ’ ಯಲ್ಲಿ ಪಾಲ್ಗೊಂಡರು.
‘ವಿದೇಶದಲ್ಲಿರುವ ಭಾರತೀಯರಿಗೆ ಅವಕಾಶಗಳು; ಕರ್ನಾಟಕದ ದೃಷ್ಟಿಕೋನ’ ಎಂಬ ವಿಷಯದ ಕುರಿತು ಐರ್ಲೆಂಡ್ ನಲ್ಲಿರುವ ಅನಿವಾಸಿ ಭಾರತೀಯರಿಗೆ ಉಪನ್ಯಾಸವನ್ನು ನೀಡಿದ ಸಚಿವ ಹೆಬ್ಬಾರ್, ಅನಿವಾಸಿ ಭಾರತೀಯರೊಂದಿಗೆ ಸಂವಾದವನ್ನು ನಡೆಸಿದರು.