ಅಂಕೋಲಾ : ಅಗಸೂರು ಗ್ರಾಮೀಣ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ವ ಸಾಧಾರಣ ಸಭೆ ರವಿವಾರ ಕೆಪಿಎಸ್ ಸಭಾಮಂಟಪದಲ್ಲಿ ನಡೆಯಿತು.ಸಂಘದ ಆಡಳಿತ ಮಂಡಳಿಯ ನಿರ್ದೇಶಕ ಗೋಪಾಲಕೃಷ್ಣ ನಾಯಕ ಮಾತನಾಡಿ ಸಾಲವನ್ನು ಪಡೆಯುವಾಗ ಸದುದ್ದೇಶವಿರಲಿ, ಅವಶ್ಯಕತೆ ಇದ್ದರೆ ಮಾತ್ರ ಸಾಲ ಪಡೆಯಿರಿ ಮತ್ತು ಸಾಲ ಮನ್ನಾ ಆಗಬಹುದು ಎನ್ನುವ ಯೋಚನೆಯೂ ಬೇಡ ಸರಕಾರ ಈಗಾಗಲೇ ಹಲವು ಜನಪರ ಯೋಜನೆಗಳ ಲಾಭವನ್ನು ಜನರ ಮನೆ ಬಾಗಿಲಿಗೇ ತಲುಪಿಸುತ್ತಿದೆ ಹೀಗಾಗಿ ಇಂತಹ ಯೋಚನೆಗಳು ಸಮಂಜಸವಲ್ಲ ಎಂದು ಅಭಿಪ್ರಾಯಪಟ್ಟರು ಅಲ್ಲದೆ ಸಂಘದ ಅಧ್ಯಕ್ಷರಾದ ಬಾಲಚಂದ್ರ ನಾಯ್ಕ ಅವರು ಸಂಘದ ಉನ್ನತಿಗಾಗಿ ಕೈಗೊಂಡ ಯಾವ ನಿರ್ಣಯಗಳ ಬಗ್ಗೆಯೂ ಯಾರೂ ಪ್ರಶ್ನೆ ಮಾಡಿಲ್ಲ. ಸಂಘ ಲಾಭದಲ್ಲಿ ಮುನ್ನಡೆದಿರುವದೇ ಅವರ ನಿರ್ಧಾರಗಳು ಸರಿಯಾಗಿದೆ ಎನ್ನುವದಕ್ಕೆ ಸಾಕ್ಷಿ. ಇಂತಹ ಸಮರ್ಥ ಅಧ್ಯಕ್ಷರ ಸಾರಥ್ಯದಿಂದ ಸಂಘ ಇನ್ನೂ ಅಭಿವೃದ್ಧಿ ಹೊಂದಲಿದೆ ಎಂದರು. ಅಧ್ಯಕ್ಷ ಬಾಲಚಂದ್ರ ನಾಯಕ ಮಾತನಾಡಿ ಸಂಘದ ಸದಸ್ಯರಿಗೆ ಕೃಷಿ ಚಟುವಟಿಕೆಗಳಿಗಾಗಿ ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ. ಬೆಳೆ ಸಾಲದ ಪ್ರಮಾಣ 10 ಕೋ. ರೂ. ಮೀರುವ ಗುರಿಯನ್ನು ಹೊಂದಿದ್ದೆವು ಆದರೆ ಪ್ರಸ್ತುತ ಈ ಗುರಿಯನ್ನು ಮುಟ್ಟಲು ಸಾಧ್ಯವಾಗಿಲ್ಲ. ಸಂಘದ ಮೂಲಕ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನಿಸಿ ಪುರಸ್ಕರಿಸುವದರ ಜೊತೆಗೆ ಪ್ರತೀ ವಿದ್ಯಾರ್ಥಿಯ ಹೆಸರಲ್ಲಿ ಒಂದು ಸಾವಿರ ರೂಪಾಯಿ ಹೂಡಿಕೆ ಮಾಡಿ ಉಳಿತಾಯ ಖಾತೆಯನ್ನು ತೆರೆಯಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿದೆ. ಅಲ್ಲದೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಗೌರವಿಸಲಾಗುತ್ತಿದೆ. ಸಂಘವು 2023ನೇ ಸಾಲಿನಲ್ಲಿ 4.02 ಲಕ್ಷ ರೂ. ನಿವ್ವಳ ಲಾಭ ಗಳಿಸಿದ್ದು ಎಲ್ಲರ ಸಹಕಾರದೊಂದಿಗೆ ಸಂಘವನ್ನು ಇನ್ನಷ್ಟು ಅಭಿವೃದ್ಧಿಗೊಳಿಸುವ ಜವಾಬ್ದಾರಿ ಇದೆ ಎಂದರು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ತಿಮ್ಮಪ್ಪ ನಾರಾಯಣ ಗೌಡ, ನಿರ್ದೇಶಕರಾದ ಬಾಲಕೃಷ್ಣ ಗೋವಿಂದ್ರಾಯ ಪ್ರದೀಪ ನಾರಾಯಣ ನಾಯಕ, ಗೋಪಾಲ ರಾಮಚಂದ್ರ ನಾಯಕ, ಹರಿಶ್ಚಂದ್ರ ಬೊಮ್ಮಯ್ಯ ನಾಯಕ, ಹಮ್ಮಣ್ಣ ಬೀರಣ್ಣ ನಾಯಕ, ಮಂಜುನಾಥ ಹಮ್ಮಣ್ಣ ನಾಯಕ, ಧಾಕು ಹುಲಿಯಪ್ಪ ಹುಲಸ್ವಾರ, ನೀಲಮ್ಮ ಬುದ್ದು ಹುಲಸ್ವಾರ, ಪುಟ್ಟಿ ರಾಮಾ ಗೌಡ, ಮಾಜಿ ಅಧ್ಯಕ್ಷ ಗಣಪತಿ ಗೋವಿಂದ ನಾಯಕ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಾದ ಅಗಸೂರು ಗ್ರಾ.ಪಂ. ಉಪಾಧ್ಯಕ್ಷ ಯಶವಂತ ತಿಮ್ಮಾ ಗೌಡ, ಸುಂಕಸಾಳ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷ ಸದಾನಂದ ನಾಯಕ, ಅಧ್ಯಕ್ಷೆ ರಮೀಜಾ ರಾಜಾಸಾಬ್ ಸೈಯದ್, ವಾಸರಕುದ್ರಿಗೆ ಗ್ರಾ.ಪಂ. ಅಧ್ಯಕ್ಷ ಪ್ರದೀಪ ನಾರಾಯಣ ನಾಯಕ, ನಾಗಮ್ಮ ಮಂಕಾಳು ಗೌಡ, ಕೆಪಿಎಸ್ ಶಾಲೆಯ ಶಿಕ್ಷಕ ರಾಜೇಂದ್ರ ಕೇಣಿ, ಸಂಜೀವ ರಾಮಚಂದ್ರ ನಾಯಕ, ಶಿಕ್ಷಕ ವೆಂಕಟರಮಣ ಪಿ ಆಚಾರ್ಯ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಂಘದ ವ್ಯಾಪ್ತಿಯಲ್ಲಿನ ಶೇ.90 ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಾದ ಭಾವನಾ ಗೋಪಾಲಕೃಷ್ಣ ನಾಯಕ, ನಮೃತಾ ಡಿ ಗೌಡ, ದಿವ್ಯಾ ಧರ್ಮರಾಜ ಗೌಡ, ರಂಜಿತಾ ಮಾರುತಿ ಗೌಡ, ಅಕ್ಷತಾ ಗಂಗಾಧರ ಗೌಡ, ಸಾತ್ವಿಕ ಎಸ್, ದೀಪ್ತಿ ವಿನಾಯಕ ನಾಯಕ, ನಲಿನ ನವೀನ ನಾಯಕ, ನಮನ್ ನವೀನ ನಾಯಕ, ತಿಲಕ ದೇವಣ್ಣ ನಾಯಕ, ಹಾಗೂ ಸಂಘಟನೆಗೆ ಸಹಕರಿಸಿದ ವೇಣುಗೋಪಾಲ ಗಣಪತಿ ನಾಯಕ ಅವರನ್ನು ಸನ್ಮಾನಿಸಿ ಪುರಸ್ಕರಿಸಲಾಯಿತು.
ಕಾರ್ಯದರ್ಶಿ ಸುರೇಶ ಜಿ ಶೆಟ್ಟಿ ಸಂಘದ ಆರ್ಥಿ ವರ್ಷದ ವರದಿ ಓದಿದರು. ಆನಂದು ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಉಪನ್ಯಾಸಕ ಗಣಪತಿ ನಾಯಕ ಸನ್ಮಾನ ಕಾರ್ಯಕ್ರಮ ನಿರ್ವಹಿಸಿದರು. ಬಾಲಕೃಷ್ಣ ನಾಯಕ ವಂದಿಸಿದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಬೊಮ್ಮಯ್ಯ ನಾಯಕ, ಉದಯ ನಾಯಕ, ಬಿಂದೇಶ ಗುನಗಾ, ಸಂಘದ ಸದಸ್ಯರು, ಊರ ನಾಗರಿಕರು ಇದ್ದರು.