ಸಿದ್ದಾಪುರ : ಹೆಗ್ಗರಣಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಅಕ್ರಮ ಸಾರಾಯಿ ಮಾರುತ್ತಿದ್ದ ವೇಳೆ ದಾಳಿ ನಡೆಸಿದಾಗ ಸಾರಾಯಿ ಬಿಟ್ಟು ಪರಾರಿಯಾದ ಘಟನೆ ನಡೆದಿದೆ.ಸಿದ್ದಾಪುರ ತಾಲೂಕಿನ ಹೆಗ್ಗರಣಿಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ವೇಳೆ ಸಾರ್ವಜನಿಕ ಸ್ಥಳದಲ್ಲಿ ವ್ಯಕ್ತಿಯೊಬ್ಬ ಅಕ್ರಮ ಸಾರಾಯಿ ಮಾರುತ್ತಿದ್ದ ವೇಳೆ ಗಣೇಶೋತ್ಸವ ಮಂಡಳಿ ಹಾಗೂ ಪಂಚಾಯತ ಸದಸ್ಯರು ದಾಳಿ ನಡೆಸಿದಾಗ, ವ್ಯಕ್ತಿ ಸಾರಾಯಿ ಬಿಟ್ಟು ಪರಾರಿಯಾದ ಘಟನೆ ರವಿವಾರ ಸಂಜೆ ನಡೆದಿದೆ.
ದಾಳಿ ವೇಳೆ ವಿವಿಧ ಬ್ರಾಂಡ್ ನ ಸುಮಾರು 100 ಕ್ಕೂ ಹೆಚ್ಚು ಸಾರಾಯಿಯ ಪ್ಯಾಕೆಟ್ ಜಪ್ತಿ ಮಾಡಿ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಅಕ್ರಮ ಸಾರಾಯಿ ಮಾರಾಟಕ್ಕೆ ಕಡಿವಾಣ ಹಾಕುವ ಬಗ್ಗೆ ಒತ್ತಾಯಿಸಿ ಜಪ್ತಿ ಮಾಡಿದ ಟೆಟ್ರಾ ಪ್ಯಾಕೆಟುಗಳನ್ನ ಅಬಕಾರಿ ಅಧಿಕಾರಿಗಳಿಗೆ ಒಪ್ಪಿಸಿಲಾಯ್ತು..