ಗಣಪತಿ ವಿಸರ್ಜನೆ ವೇಳೆ ಪಟ್ಟಣದಲ್ಲಿ ಹೆಸ್ಕಾಂ ಅಧಿಕಾರಿಗಳು ಸಿಬ್ಬಂದಿಗಳು ಸಮವಸ್ತ್ರ, ಪೇಟ ಧರಿಸಿ ಗಮನ ಸೆಳೆದರು

ಸಿದ್ದಾಪುರ : ಗಣಪತಿ ವಿಸರ್ಜನೆ ವೇಳೆ ಪಟ್ಟಣದಲ್ಲಿ ಹೆಸ್ಕಾಂ ಅಧಿಕಾರಿಗಳು ಸಿಬ್ಬಂದಿಗಳು ಸಮವಸ್ತ್ರ, ಪೇಟ ಧರಿಸಿ ಗಮನ ಸೆಳೆದರು. ಪಟ್ಟಣ ವ್ಯಾಪ್ತಿಯ ಪುಟ್ಟಪ್ಪನ ಕೆರೆ ಬಳಿ ಗಣಪತಿ ಮೂರ್ತಿ ವಿಸರ್ಜನೆಗೆ ಸ್ಥಳ ನಿಗದಿ ಮಾಡಿದ್ದು ಸಾರ್ವಜನಿಕ ಮತ್ತು ಮನೆಯಲ್ಲಿ ಪ್ರತಿಷ್ಠಾಪಿಸಿದ ಗಣಪತಿಗಳನ್ನು ವಿಸರ್ಜನೆ ಮಾಡಿದ ದೃಶ್ಯ ಕಂಡು ಬಂದಿತು . ಜೊತೆಗೆ ಮಹಾ ಗಣಪತಿ ಬ್ರದರ್ಸ್ ಕಾನ್ಮನೆ – ಮೆಣಸಿ ಇವರ ಪ್ರಥಮ ವರ್ಷದ ಗಣೇಶೋತ್ಸವ ಆಚರಣೆಯು ವಿಜೃಂಭಣೆಯಿಂದ ನಡೆದು ಸಂಪನ್ನಗೊಂಡಿತು. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕಾನ್ಮನೆಯಲ್ಲಿ ಗಣಪತಿಯನ್ನ ಪ್ರತಿಷ್ಠಾಪಿಸಿ ಸಾಮೂಹಿಕ ಶ್ರೀ ಸತ್ಯನಾರಾಯಣ ವ್ರತ, ಗಣ ಹೋಮ, ಅನ್ನಸಂತರ್ಪಣೆ ಮುಂತಾದ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಎಲ್ಲ ಕಾರ್ಯಕ್ರಮಗಳಲ್ಲೂ ಭಕ್ತರು ಅತಿಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದೇವರಿಗೆ ವಿಶೇಷವಾದ ಪೂಜೆಯನ್ನು ಸಲ್ಲಿಸಿ, ತೀರ್ಥ ಪ್ರಸಾದ ಸ್ವೀಕರಿಸಿ ದೇವರ ಕೃಪೆಗೆ ಪಾತ್ರರಾದರು. ಇನ್ನೂ ವಿಸರ್ಜನಾ ಮೆರವಣಿಗೆಯಲ್ಲಿ ಸಂಘದ ಸದಸ್ಯರುಗಳು ಯುವಕರು ಊರಿನ ನಾಗರಿಕರು ಅತಿ ಉತ್ಸಾಹದಿಂದ ಪಾಲ್ಗೊಂಡು ಕಾಂತಾರ ಸಿನೆಮಾ ಹಾಗೂ ಇನ್ನೂ ಹಲವು ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮದಿಂದ ಕುಣಿದು ಕುಪ್ಪಳಿಸಿ ಪ್ರಥಮ ವರ್ಷದ ಆಚರಣೆಯನ್ನು ವಿಜೃಂಭಣೆಯಿಂದ ಆಚರಿಸಿದರು.