ಹೊನ್ನಾವರ ಬಂದರ್‌ನಲ್ಲಿ ಗಣೇಶ ವಿಸರ್ಜನೆಗೆ ಸರಿಯಾದ ವ್ಯವಸ್ಥೆ ಮಾಡದೇ ಇದ್ದಿದ್ದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಯ್ತು. ಶನಿವಾರ ರಾತ್ರಿ ಗಣೇಶ ವಿಸರ್ಜನೆಗೆ ಬಂದ ಸಾರ್ವಜನಿಕರು ಪಟ್ಟಣ ಪಂಚಾಯತ್ ಮತ್ತು ಶಾಸಕ ದಿನಕರ್ ಶೆಟ್ಟಿ ವಿರುದ್ಧ ಆಕ್ರೋಶ ವ್ಯಕ್ತ ಪಡಿಸಿದ್ರು….
ಸಾರ್ವಜನಿಕರ ಆಕ್ರೋಶ ಕಟ್ಟೆ ಒಡೆದಿದೆ.. ಅವ್ಯವಸ್ಥೆ ಕಂಡು ಕೆಂಡಾಮಂಡಲವಾಗಿದ್ದಾರೆ.. ಶಾಸಕ ದಿನಕರ್ ಶೆಟ್ಟಿ ವಿರುದ್ಧ ಕಿಡಿ ಕಾರುತ್ತಿದ್ದಾರೆ.. ಹೊನ್ನಾವರ ಪಟ್ಟಣ ಪಂಚಾಯತ್ ವಿರುದ್ಧ ಬೆಂಕಿಯುಂಡೆಗಳನ್ನೇ ಉಗುಳುತ್ತಿದ್ದಾರೆ ಅಷ್ಟಕ್ಕೂ ಈ ಆಕ್ರೋಶಭರಿತ ದೃಶ್ಯಗಳು ಸೆರೆಯಾಗಿದ್ದು ಶನಿವಾರ ರಾತ್ರಿ ಹೊನ್ನಾವರ ಬಂದರ್‌ನಲ್ಲಿ. ಗಣೇಶೋತ್ಸವದ 5ನೇ ದಿನವಾದ ಶನಿವಾರ ಹೊನ್ನಾವರದ ಸಾರ್ವಜನಿಕವಾಗಿ ಪ್ರತಿಷ್ಟಾಪಿಸಿದ್ದ ಗಣೇಶನ ಮೂರ್ತಿಗಳನ್ನು ವಿಸರ್ಜನೆಗಾಗಿ ವಿಜೃಂಭಣೆಯಿಂದ ಬಂದರ್‌ಗೆ ಕರೆತರಲಾಗಿತ್ತು…
ಗಣೇಶ ವಿಸರ್ಜನೆಗಾಗಿ ಸಾವಿರಾರು ಮಂದಿ ಬಂದರ್‌ನಲ್ಲಿ ಸೇರಿದ್ರು. ಆದ್ರೆ ಬಂದರ್ ತುಂಬೆಲ್ಲ ಕತ್ತಲು ಆವರಿಸಿತ್ತು. ಇದೇ ಅವ್ಯವಸ್ಥೆ ಗಣೇಶ ವಿಸರ್ಜನೆಗೆ ಬಂದಿದ್ದ ಸಾರ್ವಜನಿಕರನ್ನು ಕೆಂಡಾಮಂಡಲವಾಗುವಂತೆ ಮಾಡಿತ್ತು. ಕಗ್ಗತ್ತಲಲ್ಲಿ ಗಣೇಶ ವಿಸರ್ಜನೆ ಮಾಡೋದು ಹೇಗೆ ಅಂತ ಆಕ್ರೋಶ ವ್ಯಕ್ತಪಡಿಸಿದ್ರು…
ಇನ್ನು ಬಂದರ್ ತೀರದಲ್ಲಿ ಪಟ್ಟಣ ಪಂಚಾಯತ್ ಯಾವುದೇ ರೀತಿಯ ಬೆಳಕಿನ ವ್ಯವಸ್ಥೆ ಮಾಡಿರಲಿಲ್ಲ. ಎಲ್ಲೆಡೆ ಕಗ್ಗತ್ತಲು ಆವರಿಸಿತ್ತು. ಇನ್ನು ಶಾಸಕ ದಿನಕರ್ ಶೆಟ್ಟಿ ಅವರಿಗೆ ಕರೆ ಮಾಡಿದ್ರೆ, ಸ್ಪಂದಿಸುತ್ತಿಲ್ಲ ಎಂದು ಗಣೇಶ ವಿಸರ್ಜನೆಗೆ ಬಂದಿದ್ದ ಸಾರ್ವಜನಿಕರು ಶಾಸಕರ ವಿರುದ್ಧ ಕಿಡಿ ಕಾರಿದ್ರು…
ಪಟ್ಟಣ ಪಂಚಾಯತ್ ಅಧಿಕಾರಿಗಳಾಗಲಿ, ಶಾಸಕರಾಗಲಿ ಸರಿಯಾಗಿ ಸ್ಪಂದಿಸದ ಕಾರಣ ಸಿಟ್ಟಿಗೆದ್ದ ಸಾರ್ವಜನಿಕರು ಗಣೇಶನನ್ನು ವಿಸರ್ಜನೆ ಮಾಡದೇ ಪ್ರತಿಭಟನೆಗೆ ಕುಳಿತ್ರು. ಶಾಸಕರು ಬರಬೇಕು ಇಲ್ಲಾ.. ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ಪಟ್ಟು ಹಿಡಿದು ಕುಳಿತ್ರು. ಆಗಲೇ ಪ್ರತಿಭಟನೆಯ ಕಾವು ಜೋರಾಗತೊಡಗುತ್ತಿದ್ದಂತೆ, ಪ.ಪಂ ವತಿಯಿಂದ ವಿದ್ಯುತ್ ದೀಪ ಅಳವಡಿಸುವ ಕಾರ್ಯ ಶುರುವಾಗಿತ್ತು. ನಮಗೆ ಬೀದಿ ದೀಪ ಬೇಡ ಗಣೇಶ ವಿಸರ್ಜನೆ ಮಾಡಲು ಬಂದರ್ ತೀರದಲ್ಲಿ ಬೆಳಕಿನ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದ್ರು…
ಕೊನೆಗೆ ರಾತ್ರಿ ಹತ್ತೂವರೆ ತನಕ ಕಾದು ಕುಳಿತ ಸಾರ್ವಜನಿಕರು ಬಳಿಕ, ಗಣೇಶ ವಿಸರ್ಜನೆ ಮಾಡಿದ್ರು. ಒಟ್ನಲ್ಲಿ ಇದೆಲ್ಲ ಗೊತ್ತಿದ್ದೂ ಪಟ್ಟಣ ಪಂಚಾಯತ್ ಆಗಲಿ, ಶಾಸಕರಾಗಲಿ ಈ ಬಗ್ಗೆ ಯಾವುದೇ ಕ್ರಮ ವಹಿಸದೇ ಇರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ…