ರಾಜಕೀಯ ವಲಯದಲ್ಲಿ ಮಹಿಳಾ ಮೀಸಲಾತಿ ಕಾರವಾರ ನಗರ ಬಿಜೆಪಿ ಹಾಗೂ ಮಹಿಳಾ ಮೋರ್ಚಾದಿಂದ ಸಂಭ್ರಮಾಚರಣೆ

ಕಾರವಾರ : ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಲೋಕಸಭಾ ಮತ್ತು ವಿಧಾನಸಭೆಯಲ್ಲಿ ಮಹಿಳೆಯರಿಗೆ 33% ಮೀಸಲಾತಿಯನ್ನು ಒದಗಿಸುವ ಅಧಿನಿಯಮವನ್ನು ಮಂಡಿಸಿ ಅಂಗೀಕರಿಸುವ ಮೂಲಕ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿದ ಹಿನ್ನೆಲೆಯಲ್ಲಿ ಇಂದು ಭಾರತೀಯ ಜನತಾ ಪಕ್ಷ ಕಾರವಾರ ನಗರಮಂಡಲ ಹಾಗೂ ಮಹಿಳಾ ಮೋರ್ಚಾ ವತಿಯಿಂದ ನಗರ ಮಂಡಲ ಅಧ್ಯಕ್ಷರು ಶ್ರೀ ನಾಗೇಶ್ ಕುರುಡೇಕರ್ ರವರ ಅಧ್ಯಕ್ಷತೆಯಲ್ಲಿ ಹಾಗೂ ನಗರ ಮಹಿಳಾಮೂರ್ಚಾ ಅಧ್ಯಕ್ಷ ಶ್ರೀಮತಿ ವೃಂದಾ ದಾಂಸಡೆಕರ್ , ರವರ ನೇತೃತ್ವದಲ್ಲಿ ನಗರದ ಸವಿತಾ ಹೋಟೆಲ್ ಸರ್ಕಲ್ ನಲ್ಲಿ ಜೈಕಾರದೊಂದಿಗೆ ಪಟಾಕಿ ಸಿಡಿದು ಸಿಹಿ ಹಂಚುವ ಮೂಲಕ ಮಹಿಳೆಯರು ತಮ್ಮ ಹರ್ಷವನ್ನು ವ್ಯಕ್ತಪಡಿಸಿದರು ಈ ಸಂದರ್ಭದಲ್ಲಿ ನಗರ ಮಹಿಳಾ ಮೋರ್ಚಾ ಅಧ್ಯಕ್ಷರು ಶ್ರೀಮತಿ ವೃಂದಾ ದಾಂಸಡೆಕರ್, ಪ್ರಧಾನ ಕಾರ್ಯದರ್ಶಿ ಶ್ರೀಮತಿ ವೈಶಾಲಿ ತಾಂಡಲ್, ಹಾಗೂ ರೋಶನಿ ಮಹಾಲ್ಸೇಕರ್ ಮಾತನಾಡಿ ಮೋದಿಜೀಯವರು ಈ ಯುಗದ ದೇವಮಾನವರು ಅವರು ಈ ಮಸೂದೆಯನ್ನು ವಿಶೇಷ ಅಧಿವೇಶನದಲ್ಲಿ ಮಂಡಿಸಿದ್ದು ಸ್ವಾಗತಿಸಿದರು ಈ ಮೀಸಲಾತಿಯಿಂದ ನಾಡಿನ ಸಮಸ್ತ ಮಹಿಳೆಯರಿಗೆ ಖುಷಿ ತಂದಿದೆ ಮೋದಿ ವಿತೃತ್ವದ ಸರ್ಕಾರ ಅಧಿಕಾರದಲ್ಲಿ ಮಹಿಳೆಯರ ಪರವಾಗಿ ಹಲವರು ಐತಿಹಾಸಿಕ ಕಾರ್ಯಗಳನ್ನು ಮಾಡಿದ್ದಾರೆ ಎಂದು ನುಡಿದು ಎಲ್ಲಾ ಮಹಿಳೆಯರ ಪರವಾಗಿ ಸರ್ಕಾರಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು, ಪದಾಧಿಕಾರಿಗಳು, ನಗರಸಭೆ ಸದಸ್ಯರು, ಮಹಿಳಾ ಮೂರ್ಚ ಪದಾಧಿಕಾರಿಗಳು ಸದ್ಯಸರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು..