ಸಿದ್ದಾಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಸಿದ್ದಾಪುರದಲ್ಲಿ ವಿವಿಧ ರೈತ ಸಂಘಟನೆ ವತಿಯಿಂದ ತಹಶೀಲ್ದಾರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯ್ತು. ಸಿದ್ದಾಪುರ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸುವಂತೆ ಸಿದ್ದಾಪುರದಲ್ಲಿ ವಿವಿಧ ರೈತ ಸಂಘಟನೆ ವತಿಯಿಂದ ತಹಶೀಲ್ದಾರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯ್ತು. ತಾಲೂಕು ಅತಿ ಹೆಚ್ಚು ರೈತರಿಂದ ಕೂಡಿದೆ. ಇಲ್ಲಿ ಅಡಿಕೆ ಮತ್ತು ಭತ್ತ ಬೆಳೆಯುವ ಬೆಳೆಗಾರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ . ಇವರೆಲ್ಲರೂ ಕೃಷಿಯನ್ನೇ ನಂಬಿ ಜೀವನ ನಡೆಸುತ್ತಿದ್ದಾರೆ. ಈ ವರ್ಷ ಸರಿಯಾದ ಪ್ರಮಾಣದಲ್ಲಿ ಮಳೆ ಆಗದೆ ನಾಟಿ ಮಾಡಿದ ಸಸಿಗಳೆಲ್ಲಾ ನೀರಿಲ್ಲದೇ ಒಣಗಿ ಹೋಗಿ ರೈತರು ತೀವ್ರ ಸಂಕಷ್ಟ ಎದುರಿಸುವಂತಾಗಿದೆ. ಆದ್ರಿಂದ ಸರ್ಕಾರವು ರೈತರ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಸಿದ್ದಾಪುರವನ್ನ ಬರಪೀಡಿತ ತಾಲೂಕು ಎಂದು ಘೋಷಿಸಬೇಕು ಎಂದು ರೈತ ಮುಖಂಡ ವೀರಭದ್ರ ನಾಯ್ಕ್ ಹೇಳಿದ್ರು.. ಈ ವೇಳೆ ಸಿ ಎಸ್ ಗೌಡರ್, ಎಂ ಡಿ ನಾಯ್ಕ್ ಹಾಗೂ ವಿವಿಧ ರೈತ ಸಂಘಟನೆಯ ಸದಸ್ಯರು ಉಪಸ್ಥಿತರಿದ್ರು..