ಹೊನ್ನಾವರ: ಸನಾತನ ಹಿಂದೂ ಧರ್ಮದ ಬಗ್ಗೆ ವಿವಾದಾತ್ಮಕವಾಗಿ ಹೇಳಿಕೆ ನೀಡಿರುವ ಉದಯ ನಿಧಿ ಸ್ಟಾಲಿನ್ ಮತ್ತು ಎ. ರಾಜಾ ಇವರನ್ನು ಬಂಧಿಸುವ ಕುರಿತು ಹೊನ್ನಾವರ ಬಿಜೆಪಿ ಮಂಡಲದ ವತಿಯಿಂದ ತಹಶೀಲ್ದಾರರ ಮೂಲಕ ರಾಜ್ಯಪಾಲರಿಗೆ ಸೋಮವಾರ ಮನವಿ ಸಲ್ಲಿಸಿದರು.
ಪಟ್ಟಣದ ಶರಾವತಿ ವೃತ್ತದಲ್ಲಿ ಉದಯ ನಿಧಿ ಸ್ಟಾಲಿನ್ ಅವರ ಪ್ರತಿಕೃತಿ ದಹಿಸಿ ಧಿಕ್ಕಾರ ಕೂಗಿ ಪ್ರತಿಭಟನಾಕಾರರು ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಇತ್ತೀಚೆಗೆ ತಮಿಳುನಾಡಿನ ಸಚಿವರಾದ ಉದಯ ನಿಧಿ ಸ್ಟಾಲಿನ್ ಮತ್ತು ಸಂಸದರಾದ ಎ. ರಾಜಾರವರು ಸನಾತನ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತಾಡಿದ್ದಾರೆ.ಪದೇ ಪದೇ ಸನಾತನ ಧರ್ಮದ ಬಗ್ಗೆ ಅವಹೇಳನಕಾರಿ ಹೇಳಿಕೆಯಿಂದ ಹಿಂದೂ ಸಮಾಜದ ಸ್ವಾಸ್ಥ್ಯ ಹಾಳಾಗುವ ಕಾರ್ಯ ಆಗಿದೆ. ಆದ್ದರಿಂದ ಇಂತವರನ್ನು ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ವಿನಂತಿಸಿದ್ದಾರೆ.ಇವರ ಈ ಹೇಳಿಕೆಯನ್ನು ಸಮಸ್ತ ಹಿಂದೂ ಸಮಾಜ ವಿರೋಧಿಸುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ನಂತರ ತಹಶೀಲ್ದಾರ ಕಾರ್ಯಾಲಯಕ್ಕೆ ತೆರಳಿ ಮನವಿ ಸಲ್ಲಿಸಿದರು.ತಹಶೀಲ್ದಾರ ರವಿರಾಜ ದೀಕ್ಷಿತ್ ಮನವಿ ಸ್ವೀಕರಿಸಿದರು.
ಈ ಸಂಧರ್ಭದಲ್ಲಿ ಮಾಧ್ಯಮದವರೊಂದಿಗೆ ಬಿಜೆಪಿ ಮಂಡಲಾಧ್ಯಕ್ಷ ರಾಜೇಶ್ ಭಂಡಾರಿ ಮಾತನಾಡಿ,ಈ ಹಿಂದಿನಿಂದಲು ಸನಾತನ ಧರ್ಮವನ್ನ ಅತ್ಯಂತ ಕೆಟ್ಟದಾಗಿ ಮಾತಾಡುವಂತದ್ದು ಮತ್ತು ಹೀಯಾಳಿಸುವಂತದ್ದು ಕೆಲವರು ತಮ್ಮ ವೃತ್ತಿ ಧರ್ಮ ತರಹ ಮಾಡಿಕೊಂಡಿದ್ದಾರೆ. ಆ ಸಾಲಿಗೆ ಇತ್ತೀಚಿನ ಸೇರ್ಪಡೆ ತಮಿಳನಾಡು ಮುಖ್ಯಮಂತ್ರಿ ಎಂ. ಕೆ. ಸ್ಟಾಲಿನ್ ಅವರ ಮಗ ಉದಯ ನಿಧಿ ಮತ್ತು ಡಿಎಂಕೆ ಪಕ್ಷದ ಸಂಸದ ಎ ರಾಜರವರು. ಸನಾತನ ಧರ್ಮದ ಬಗ್ಗೆ ಅತ್ಯಂತ ಕೆಟ್ಟದಾಗಿ ಮಾತನಾಡಿದ್ದಾರೆ. ಸುಪ್ರೀಂಕೋರ್ಟ್ ಇವರ ವಿರುದ್ದ ಸ್ವಯಂ ಪ್ರೇರಿತವಾಗಿ ಸುಮೊಟೋ ಮೊಕದ್ದಮೆಯನ್ನ ಹೂಡಬೇಕು.ಹಿಂದೂ ಧರ್ಮದ ವಿರುದ್ಧ ಸನಾತನ ಧರ್ಮದ ವಿರುದ್ಧ ಯಾರು ಮಾತನಾಡುತ್ತಾರೋ ಅಂತವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಪ್ರತಿಭಟನೆಯನ್ನ ಮಾಡಿದ್ದೇವೆ ಎಂದರು. ಈ ಸಂದರ್ಭದಲ್ಲಿ ಪಟ್ಟಣ ಪಂಚಾಯತ ಅಧ್ಯಕ್ಷೆ ಭಾಗ್ಯ ಮೇಸ್ತ,ಸದಸ್ಯರಾದ ಶಿವರಾಜ ಮೇಸ್ತ,ವಿಜು ಕಾಮತ್, ಸುಜಾತಾ ಮೇಸ್ತ,ಬಿಜೆಪಿ ಮುಖಂಡರಾದ ಮಂಜುನಾಥ ನಾಯ್ಕ, ಎಮ್ ಎಸ್ ಹೆಗಡೆ ಕಣ್ಣಿ,ಉಲ್ಲಾಸ ನಾಯ್ಕ,ನಾರಾಯಣ ಹೆಗಡೆ,ಬಿ.ಟಿ ಗಣಪತಿ,ಹರಿಶ್ಚಂದ್ರ ನಾಯ್ಕ, ವಿಘ್ನೇಶ್ವರ ಹೆಗಡೆ,ಉಮೇಶ್ ಸಾರಂಗ,ರಾಜೇಶ್ ಸಾಳೆಹಿತ್ತಲ್,ರವಿ ನಾಯ್ಕ, ಮತ್ತಿತರಿದ್ದರು