ಹೊನ್ನಾವರ : ತಾಲೂಕಿನ ಮಂಕಿ ಅಲ್-ಹಿಲಾಲ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ಮೈದಾನದಲ್ಲಿ ನಡೆದ ಮಂಕಿ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರಕಾರಿ ಪ್ರೌಢಶಾಲೆ ಬಣಸಾಲೆ ವಿದ್ಯಾರ್ಥಿಗಳು ವಿವಿಧ ಆಟೋಟ ಸ್ಪರ್ಧೆಯಲ್ಲಿ ಗಮನಾರ್ಹ ಸಾಧನೆ ಮಾಡುವ ಮೂಲಕ ತಾಲೂಕಿಗೆ ಊರಿಗೆ ಕೀರ್ತಿ ತಂದಿದ್ದಾರೆ.
ಕು. ಚೈತನ್ಯ ಗಣೇಶ ನಾಯ್ಕ ದೇವರಗದ್ದೆ,ಉದ್ದಜಿಗಿತ ಪ್ರಥಮ, 100 ಮೀ ಹರ್ಡಲ್ಸ್ ಪ್ರಥಮ, 200 ಮೀ ಓಟ ಪ್ರಥಮ, ಮೂರರಲ್ಲಿ ಪ್ರಥಮ ಸ್ಥಾನದೊಂದಿಗೆ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾಳೆ. ಸಂಚೀತಾ ನಾರಾಯಣ ಖಾರ್ವಿ ಚೆಸ್ ಪ್ರಥಮ, ಹರ್ಷಿತಾ ಎಮ್, ಹರಿಕಂತ್ರ, 3 ಕಿ.ಮೀ ನಡಿಗೆ ಪ್ರಥಮ, ರೂಪಾ ರಾಮು ನಾಯ್ಕ 800 ಮೀ ಓಟ ಪ್ರಥಮ, 200 ಮೀ ಓಟ ತೃತೀಯ, ಅರ್ಚನಾ ಎ.ನಾಯ್ಕ 3000 ಮೀ ಓಟ ದ್ವಿತೀಯ, ಚರಿತ್ರಾ ಚಂದ್ರಕಾಂತ ನಾಯ್ಕ 4000 ಮೀ ಓಟ ಪ್ರಥಮ.
ರಮ್ಯ ವೆಂಕಟ್ರಮಣ ನಾಯ್ಕ ಜಾವಲಿನ್ ಎಸೆತ ದ್ವಿತೀಯ ಸಿಂಚನಾ ಆರ್, ನಾಯ್ಕ 1500 ಮೀ ಓಟ ತೃತೀಯ ಶ್ರೇಯಸ್ ನಾಗೇಶ ನಾಯ್ಕ 110 ಮೀ ಹರ್ಡಲ್ಸ್ ಪ್ರಥಮ, 200 ಮೀ ಓಟ ದ್ವಿತೀಯ ಆದಿತ್ಯ ರತ್ನಾಕರ ನಾಯ್ಕ 1500 ಮೀ ಪ್ರಥಮ ಸುಜಲ್ ರಾಮ ಖಾರ್ವಿ 400 ಮೀ ಓಟ ಪ್ರಥಮ ಸುಬ್ರಹ್ಮಣ್ಯ ಎಮ್, ನಾಯ್ಕ 5 ಕಿ.ಮೀ ನಡಿಗೆ ದ್ವಿತೀಯ ನವೀನ ಗೋಪಾಲ ನಾಯ್ಕ 110 ಮೀ ಹರ್ಡಲ್ಸ್ ದ್ವಿತೀಯ, 200 ಮೀ ಓಟ ತೃತೀಯ
14ರ ವಯೋಮಾನದ ವಿದ್ಯಾರ್ಥಿಗಳಲ್ಲಿ ವರ್ಷಿಣಿ ನಾಗರಾಜ ನಾಯ್ಕ 100 ಮೀ ಓಟ ಪ್ರಥಮ, ಉದ್ದಜಿಗಿತದಲ್ಲಿ ಪ್ರಥಮ ಸ್ಥಾನ ಪಡೆದಿದ್ದಾಳೆ. ಶರತ್ ರಮೇಶ ನಾಯ್ಕ 600 ಮೀ ಓಟ ಪ್ರಥಮ ಸ್ಥಾನ, ಚಕ್ರ ಎಸೆತ ಪ್ರಥಮ ಸಂಜನಾ ಸಂತೋಷ ನಾಯ್ಕ 80 ಮೀ ಹರ್ಡಲ್ಸ್ ಪ್ರಥಮ ಸ್ಥಾನ ಮೌಲಿಕ ಕಿರನ್ ರಾಠೋಡ್ ಚೆಸ್ ಪ್ರಥಮ, ಎತ್ತರ ಜಿಗಿತ ತೃತೀಯ ರಕ್ಷಿತಾ ಶಂಕರ ನಾಯ್ಕ ಗುಂಡು ಎಸೆತ ತೃತೀಯ ರಾಹುಲ್ ವಿ ನಾಯ್ಕ 80 ಮೀ ಹರ್ಡಲ್ಸ್ ದ್ವಿತೀಯ, 100 ಮೀ ತೃತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ಗುಂಪಿನಾಟದಲ್ಲಿ ಥ್ರೋ -ಬಾಲ್ ಪ್ರಥಮ ಮತ್ತು 4 X 100 ಮೀ ರೀಲೆ ಪ್ರಥಮ
ಬಾಲಕಿಯರ ಗುಂಪಿನಾಟದಲ್ಲಿ 4 X 100 ಮೀ ರೀಲೆ ಪ್ರಥಮ ಸ್ಥಾನಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾರೆ. ಮತ್ತು ವಲಯದ ವೀರಾಗ್ರಣಿ ಪ್ರಶಸ್ತಿ ಪಡೆದಿದ್ದಾರೆ. ಸಾಧಕ ವಿದ್ಯಾರ್ಥಿಗಳನ್ನು ತರಭೇತಿ ನೀಡಿದ ಶಿಕ್ಷಕರಾದ ಗಣಪತಿ ಎನ್. ಮುಕ್ರಿ ಹಾಗೂ ಮುಖ್ಯಾಧ್ಯಾಪಕರು, ಶಿಕ್ಷಕವೃಂದ ಪೂರ್ವ ವಿದ್ಯಾರ್ಥಿಗಳ ವೃಂದ ಎಸ್.ಡಿ.ಎಮ್.ಸಿ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಪಾಲಕ
ಪೋಷಕ ವೃಂದ ಅಭಿನಂದನೆ ಸಲ್ಲಿಸಿದೆ.