ಹೊನ್ನಾವರ: ಭಾರತ ಹಿಂದೂ ಸಂಸ್ಕೃತಿ, ಸಂಪ್ರದಾಯದ ತೊಟ್ಟಿಲು ಇದನ್ನು ಉಳಿಸಿ,ಬೆಳೆಸುವ ಜವಾಬ್ದಾರಿ ಯುವಜನಾಂಗದ ಮೇಲಿದೆ ಎಂದು ರಾಷ್ಟ್ರೀಯ ಸ್ವಯಂ ಸೇವಕ ಕೃಷ್ಣ ಜೋಶಿ ಸಂಕೊಳ್ಳಿ ಹೇಳಿದರು.
ತಾಲೂಕಿನ ಅಂಸಳ್ಳಿ ಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ವತಿಯಿಂದ ನಡೆದ ರಕ್ಷಾಬಂಧನ ಉತ್ಸವದಲ್ಲಿ ಮಾತನಾಡಿದರು. ರಕ್ಷೆಯು ರಕ್ಷಣೆಗೆ ಇರುವಂಥದ್ದು ಸಹೋದರತ್ವದ, ಸಾಮರಸ್ಯ ಪ್ರತೀಕ. ಅಷ್ಷೇ ಅಲ್ಲ ಶೌರ್ಯದ ಪ್ರತೀಕ. ನಮ್ಮಲ್ಲಿರುವ ಸಂಘದ ಅಂತಶ್ಯಕ್ತಿಯನ್ನು ಜಾಗ್ರತಗೊಳ್ಳಿಸುವ ಶಕ್ತಿಯೂ ಕೂಡ ಈ ರಕ್ಷೆಯಲ್ಲಿದೆ. ಅನೇಕರ ದಾಳಿಯ ನಡುವೆಯೂ ನಮ್ಮ ಸನಾತನ ಸಂಸ್ಕೃತಿ, ಪರಂಪರೆ ಜೀವಂತವಾಗಿದೆ. ನಮ್ಮ ಸಂಸ್ಕೃತಿ,ಪರಂಪರೆ ವಿದೇಶಿಗರು ಅಳವಡಿಸಿಕೊಳ್ಳುತ್ತಿದ್ದಾರೆ. ಯುವಜನರು ಬದುಕಿನಲ್ಲಿ ಅಳವಡಿಸಿಕೊಂಡು ಭವ್ಯ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು. . ಈ ಸಂದರ್ಭದಲ್ಲಿ ಸಂಘದ ಹೋಬಳಿ ಪ್ರಮುಖರಾದ ಈಶ್ವರ ಗೌಡ ಕರ್ಕಿ , ಗ್ರಾಮದ ಗಣ್ಯರಾದ ಗಜಾನನ ಭಟ್ , ಮಂಗಲಾ ಹೆಗಡೆ ಹಾಗೂ ಊರಿನ ನಾಗರಿಕರು ಉಪಸ್ಥಿತರಿದ್ದರು.