ಸಿದ್ದಾಪುರ : ಸರಿಯಾದ ದಾಖಲೆಯಿಲ್ಲದೆ ಅರಣ್ಯ ಭೂಮಿಯನ್ನ ಅತಿಕ್ರಮಣ ಮಾಡಿಕೊಂಡಿರುವುದನ್ನು ಅರಣ್ಯ ಇಲಾಖೆ ಅಧಿಕಾರಿಗಳು ತೆರವು ಮಾಡಿಸುತ್ತಿರುವ ದೃಶ್ಯವೂ ತ್ಯಾರ್ಸಿ ಬಳಿ ಕಂಡುಬಂದಿತು . ತ್ಯಾರ್ಸಿ ಗ್ರಾಮದ ಹಲವು ರೈತರು ಅರಣ್ಯ ಇಲಾಖೆಯ ಜಾಗವನ್ನು ಅತಿಕ್ರಮಣ ಮಾಡಿಕೊಂಡಿದ್ದು ಸರಿಯಾದಂತಹ ದಾಖಲೆ ಇಲ್ಲದೆ ಈಗಾಗಲೇ ಮೂರು ಬಾರಿ ತೆರವು ಪ್ರಯತ್ನ ಮಾಡುತ್ತ ಬಂದಿದ್ದೇವೆ, ಪುನಹ ರೈತರು ಬಳಸುತ್ತಾ ಬರುತ್ತಿದ್ದಾರೆ ಈ ಜಾಗದಲ್ಲಿ ಯಾವುದೇ ಜಿ.ಪಿ.ಎಸ್ ಆಗಿರುವುದಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ 20 ವರ್ಷಗಳಿಂದ ನಾವು ಇಲ್ಲೇ ಅತಿಕ್ರಮಣ ಮಾಡಿಕೊಂಡು ಬಳಸುತ್ತಾ ಬರುತ್ತಿದ್ದೇವೆ ಆದರೆ ಇದರಲ್ಲಿ ಈ ರೀತಿ ಹೋಂಡಗಳನ್ನ ತೆಗೆದು ನಮಗೆ ಅನ್ಯಾಯ ಮಾಡುತ್ತಿದ್ದಾರೆ ಅತಿಕ್ರಮಣ ಮಾಡಿಕೊಂಡ ಸ್ಥಳೀಯರು ಆರೋಪಿಸಿದ್ದಾರೆ. ನಾಲ್ಕೈದು ಜೆಸಿಬಿ ಗಳೊಂದಿಗೆ ಪೋಲಿಸ್ ಬಿಗಿ ಬಂದೋಬಸ್ತ್ ನೊಂದಿಗೆ ತೆರವು ಮಾಡಿ ಇಂಗು ಗುಂಡಿಗಳನ್ನ ತೆಗೆಯುತ್ತಿರುವ ದೃಶ್ಯ ಕಂಡು ಬಂದಿತು