ಡಾ.ಪುನೀತ ರಾಜಕುಮಾರ ಅಭಿಮಾನಿಯಾಗಿರುವ ಅನಂತಮೂರ್ತಿ ಅವರ ಅದರ್ಶದಂತೆ ಅವರ ಹಾದಿಯಲ್ಲೇ ನಡೆದು ದಾನ ಧರ್ಮಕ್ಕೆ ಮುಂದಾಗಿದ್ದಾರೆ

ಭಟ್ಕಳ: ಸಿರ್ಸಿ, ಕುಮಟಾ, ಯಲ್ಲಾಪುರ  ಸೇರಿದಂತೆ ಉತ್ತರಕನ್ನಡ ಜಿಲ್ಲೆಯಲ್ಲಿ ಅನಂತಮೂರ್ತಿ ಹೆಗಡೆ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ, ಬಡವರು, ನಿರ್ಗತಿಕರು, ಆಟೋ ಚಾಲಕರಿಗೆ ನಿರಂತರವಾಗಿ ನೆರವು ನೀಡುತ್ತ ಜಿಲ್ಲೆಯ ಆಟೋ ಚಾಲಕರಿಂದ ಬಡವರ ಬಂದು, ಆಟೊ ರಕ್ಷಕ ಬಿರುದು ಪಡೆದಿರುವ ಶಿರಸಿ ಬ್ಯಾಗದ್ದೆಯ ಅನಂತಮೂರ್ತಿ ತಗಡೆ ಇದೀಗ ಭಟ್ಕಳದಲ್ಲಿಯೂ ಆಟೋ ಚಾಲಕರಿಗೆ ಔತಣಕೂಟ, ಉಚಿತ ಸಮವಸ್ತ್ರ ವಿತರಣೆ ಮತ್ತು ಆಟೋ ರಿಕ್ಷಾ ಪಾಸಿಂಗ್ ಯೋಜನೆ, ಆಟೋ ರಿಕ್ಷಾ ಪ್ರಿಂಟಿಂಗ್ ಹುಡ್ ವಿತರಣೆ ಕಾರ್ಯಕ್ರಮ ನಡೆಸಿದ್ದು, ಸೇವೆಗೆ ಪ್ರತಿಫಲ ಎಂಬಂತೆ ಇವರೇ ಮುಂದಿನ ಉತ್ತರಕನ್ನಡ ಲೋಕಸಭಾ ಸದಸ್ಯರಾಗಲಿ ಎಂಬ ಆಶಯ ಅವರ ಅಭಿಮಾನಿಗಳಿಂದ ಹೊರ ಬಂದಿದೆ.

ಅನಂತಮೂರ್ತಿ ಹೆಗಡೆಯವರು ಸರಳ, ಸಜ್ಜನಿಕೆ, ಉದಾರತೆ, ಪ್ರಾಮಾಣಿಕತೆ, ವಿನಯಶೀಲತೆ, ಸತತ ಪರಿಶ್ರಮಕ್ಕೆ ಹೆಸರಾದ ವ್ಯಕ್ತಿತ್ವದವರಾಗಿದ್ದು, ಜಾತಿ ಮತ ಪಂಥಗಳ ಬೇದ ಇವರ ಬಳಿ ಸುಳಿಯುವುದಿಲ್ಲ. ಇಂತವರು ಲೋಕಸಭಾ ಸದಸ್ಯರಾದರೆ ಜನರಿಗೆ ಒಳ್ಳೆಯದನ್ನೇ ಮಾಡುತ್ತಾರೆ ಎಂದು ಅವರ ಅಭಿಮಾನಿಗಳು ಹೆಮ್ಮೆಯಿಂದ ನುಡಿಯುತ್ತಾರೆ.

ಭಟ್ಕಳದ ಜಾಲಿಯ ವೆಂಕಟೇಶ್ವರ, ನಾಮಧಾರಿ ವಿದ್ಯಾವರ್ಧಕ ಸಭಾಭವನದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಟ್ರಸ್ಟಿ ಅಧ್ಯಕ್ಷ ಅನಂತಮೂರ್ತಿ ಹೆಗಡೆ, ನಾರಾಯಣ ಗುರು ತತ್ವದಡಿಯಲ್ಲಿ ಎಲ್ಲರೂ ಒಂದಾಗಿ ಬೆರೆತು ಬಾಳಬೇಕು. ಅನ್ನ, ಅಕ್ಷರ, ಆರೋಗ್ಯವೇ ಪ್ರಧಾನವಾಗಿದ್ದು, ಆಟೋ ಚಾಲಕರ ಕುಟುಂಬದ ಕಷ್ಟವನ್ನು ನಿವಾರಿಸುವ ನಿಟ್ಟಿನಲ್ಲಿ ಉಚಿತ ವಿಮೆ, ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ಮತ್ತು ತರಬೇತಿ, ವೈದ್ಯಕೀಯ ನೆರವಿಗೆ ವಿವಿಧ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂಕಲ್ಪವನ್ನು ಟ್ರಸ್ಟ್ ನ ಮುಂದಿನ ಗುರಿ ಆಗಿದೆ. ಆಟೋ ಚಾಲಕರ ಮಕ್ಕಳು ಉದ್ಯಮಿಗಳಾಗಿ ಬೆಳೆಯಬೇಕು ಎಂಬ ಮಹಾದಾಸೆಯನ್ನು ಹೊಂದಿದ್ದೇವೆ. ಟ್ರಸ್ಟನ ಸಮಾಜ ಸೇವೆಗೆ ದಿವಂಗತ ಚಲನಚಿತ್ರ ನಟ  ಪುನೀತ್ ರಾಜಕುಕುಮಾರ ಸಿದ್ಧಗಂಗಾ ಮಠದ ಶ್ರೀ ಡಾ. ಶಿವಕುಮಾರ ಸ್ವಾಮೀಜಿ ಪ್ರೇರಣೆ- ಯಾಗಿದ್ದು, ಮುಂದಿ ದಿನಗಳಲ್ಲಿ ಇನ್ನಷ್ಟ ಯೋಜನೆಗಳನ್ನು ಟ್ರಸ್ಟ್ ಹಮ್ಮಿಕೊಳ್ಳಲಿದೆ. ಈ ಎಲ್ಲ ಯೋಜನೆ, ಕಾರ್ಯಕ್ರಮಗಳಿಗೆ ಆಟೋ ಚಾಲಕರ ಸ್ಪಂದನೆ, ಸಹಕಾರ ಅತ್ಯಗತ್ಯವಾಗಿದೆ. ನಾನು ಆಟೋ ಚಾಲಕ, ಮಾಲಕರಿಂದ ಹೆಚ್ಚಿನದ್ದೇನನ್ನೂ ಮರವಿಸುವುದಿಲ್ಲ. ಚಾಲಕರ ಪ್ರಾರ್ಥನೆ, ಆಶೀರ್ವಾದವಷ್ಟೇ ಸಾಕು ಎಂದರು.
ಬಳಿಕ  ಅನಂತ ಮೂರ್ತಿ ಹೆಗಡೆ ಸಹೋದರ   ಜಗದೀಶ ಹೆಗಡೆ ಬ್ಯಾಗದ್ದೆ ಪ್ರಾಸ್ತಾವಿಕ ಮಾತನಾಡಿ
ರಿಕ್ಷಾ ಚಾಲಕರೆಂದರೆ ಸಮಾಜದ ದಾರಿದೀಪ. ಗುಲಾಮಗಿರಿಗೆ ಒಳಪಡದಂತಹ ಸ್ವಾಭಿಮಾನಿ ಹಾಗೂ ಕಷ್ಟ ಪಟ್ಟು ದುಡಿಯುವ ಜೀವಿ ಅವರು ರಿಕ್ಷಾ ಚಾಲಕರು. ಇಂದು ಅವರು ಕಷ್ಟದಲ್ಲಿದ್ದಾರೆ. ಅವರಿಗೆ ಸಮವಸ್ತ್ರ ನೀಡಿರುವ ಹಿಂದಿನ ಉದ್ದೇಶ ಸಮವಸ್ತ್ರ ಎನ್ನುವುದು ಎಲ್ಲರು ಸಮಾನರು ಎಂಬುದು ಆಟೋ ಚಾಲಕರಲ್ಲಿ ಮೂಡಲಿ ಎಂಬೂದಾಗಲಿ.

ಇವೆಲ್ಲದರ ಜೊತೆಗೆ ಶಾಲೆಗಳಿಗೆ ಶುದ್ದ ಕುಡಿಯುವ ನೀರಿನ ಘಟಕ ಜೊತೆಗೆ ಉಳಿದ ಸಮಾಜಮುಖಿ ಸೇವೆಯನ್ನು ಮಾಡಿದ್ದೇವೆ. ವೇದಾಧ್ಯಯನ ಮಾಡಿ ಬೆಂಗಳೂರು ದೇವಸ್ಥಾನದಲ್ಲಿ ಅರ್ಚಕರಾಗಿ ಕೆಲಸ ಮಾಡುತ್ತಾ ಬಂದಿದ್ದವರು. ಇಂದು ಸಹ ಉದ್ಯಮದ ಜೊತೆಗೆ ವಿವಿಧ ದಾನವನ್ನು ಮಾಡಲು ಯತ್ನಿಸಿದರು. ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಿ ಅಲ್ಲಿಂದ ಶಿರಸಿಯಲ್ಲಿ ಪ್ಲಾಟಗಳನ್ನು ರಚಿಸಿ ಅಲ್ಲಿಂದ ಬಂದ ಹಣವನ್ನು ಸಮಾಜಕ್ಕಾಗಿ ನೀಡುತ್ತಾ ಬಂದಿದ್ದೇವೆ. ತದನಂತರ ಸಿದ್ದಗಂಗಾ ಶ್ರೀಗಳು ಹಾಗೂ ಪುನೀತ್ ರಾಜ್‍ಕುಮಾರ್ ಅವರ ಮರಣಾನಂತರ ಸಂಪೂರ್ಣವಾಗಿ ಸಮಾಜದ ಕೆಲಸಕ್ಕಾಗಿ ಮೀಸಲಿಟ್ಟಿದ್ದೇವೆ .ಟ್ರಸ್ಟ ಸ್ಥಾಪನೆ ಹಾಗೂ ಆ ಮೂಲಕ ಆಟೋ ಚಾಲಕರಿಗೆ ನೆರವಾಗಲು ಸಹಕಾರಿಯಾಗಿವೆ.

ಮುಂದಿನ ದಿನಗಳಲ್ಲಿ ಆಟೋ ಚಾಲಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಆರೋಗ್ಯ ಮಕ್ಕಳಿಗೆ ವಿದ್ಯಾರ್ಥಿ ವೇತನ, ಆರೋಗ್ಯ ಸೇವೆಯನ್ನು ಟ್ರಸ್ಟ ಒದಗಿಸಲಿದೆ ಎಂದರು ಇದೇ ಸಂಧರ್ಭದಲ್ಲಿ ಹಿರಿಯ ಆಟೋ ಚಾಲಕರಿಗೆ ಸನ್ಮಾನ ಮಾಡಲಾಯಿತು. ಭಟ್ಕಳ ಆಟೋ ರಿಕ್ಷಾ ಚಾಲಕರ ಸಂಘದಿಂದ ಅನಂತ ಮೂರ್ತಿ ಹೆಗಡೆ ಅವರಿಗೆ ಸನ್ಮಾನಿಸಲಾಯಿತು. ಜಿಲ್ಲಾ ಆಟೋ ಚಾಲಕ, ಮಾಲಕರ ಸಂಘದ ಅಧ್ಯಕ್ಷ ಶಿವರಾಜ್ ಮೇಸ್ತ  ಮಾತನಾಡಿದರು ಭಟ್ಕಳ ಆಟೋ ಚಾಲಕ ಮಾಲಕರ ಸಂಘದ ಅಧ್ಯಕ್ಷ ಕೃಷ್ಣ ನಾಯ್ಕ ಎಲ್ಲರನ್ನೂ ಸ್ವಾಗತಿಸಿ ವಂದಿಸಿದರು.

ಈ ಸಂದರ್ಭದಲ್ಲಿ  ಜಿಲ್ಲಾ ಸಂಘದ ಉದಯ ನಾಯ್ಕ, ವಿಶ್ವನಾಥ , ಗೌಡ, ಭಟ್ಕಳ ಆಟೋ ಚಾಲಕ ಮಾಲಕರ ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಮಂಜುನಾಥ ನಾಯ್ಕ, ಆಟೋ ಚಾಲಕರ ಸಂಘದ ಉಪಾಧ್ಯಕ್ಷ ಅಚ್ಚಯ್ಯ ನಾಯ್ಕ, ಚೌಥನ, ಸಂತೋಷ ನಾಯ್ಕ ಬ್ಯಾಗದ್ದೆ, ಪ್ರವೀಣ ನಾಯ್ಕ ಮುಠಳ್ಳಿ. ಪಯ್ಯಾಜ್‌ ಮೊದಲಾದವರು ಉಪಸ್ಥಿತರಿದ್ದರು.