ಸಿದ್ದಾಪುರ : ದಿ. ಶಿಕ್ಷಕ ಎಂ. ಎಸ್. ಡಿಸೋಜ ಸ್ಮರಣಾರ್ಥ ಗುರು ಸನ್ಮಾನ ಕಾರ್ಯಕ್ರಮ

ಸಿದ್ದಾಪುರ : ಸ್ಪಂದನ ಸೇವಾ ಸಂಸ್ಥೆ ಸಿದ್ದಾಪುರ ಹಾಗೂ ಶಿಕ್ಷಕಿ ರೀಟಾ ಡಿಸೋಜರವರ ಸಹಯೋಗದಲ್ಲಿ ಪಟ್ಟಣ ವ್ಯಾಪ್ತಿಯ ಸಾಯಿ ನಗರದಲ್ಲಿನ ನಾಗಶ್ರೀ ನಿಲಯದ ಸಭಾಂಗಣದಲ್ಲಿ ದಿ. ಶಿಕ್ಷಕ ಎಂ. ಎಸ್. ಡಿಸೋಜ ಸ್ಮರಣಾರ್ಥ ಗುರು ಸನ್ಮಾನ ಕಾರ್ಯಕ್ರಮ ನಡೆಯಿತು. ಕ್ಷೇತ್ರ ಶಿಕ್ಷಣಅಧಿಕಾರಿ ಜಿ.ಐ. ನಾಯ್ಕ್ ಕಾರ್ಯಕ್ರಮ ಉದ್ಘಾಟಿಸಿ ಓರ್ವ ವಿದ್ಯಾರ್ಥಿಯ ಜೀವನ, ನಿರ್ಮಲ ಮನಸು ಹಾಗೂ ಆತನಲ್ಲಿ ಸದ್ಗುಣ ಬೆಳೆಯುವಂತೆ ಮಾಡುವ ಸ್ಥಾನ ಗುರುವಿನದ್ದು ರೀಟಾರವರು ಓರ್ವ ಶಿಕ್ಷಕಿಯಾಗಿ ಸ್ಪಂದನ ಸೇವಾ ಸಂಸ್ಥೆಯೊಂದಿಗೆ ಈ ಕಾರ್ಯಕ್ರಮ ಆಯೋಜನೆ ಮಾಡಿರುವುದು ಹೆಮ್ಮೆಯ ಸಂಗತಿ ಗುರು ಈ ರೀತಿಯಲ್ಲಿ ಸೇವೆ ಮಾಡುತ್ತಿರುವುದು ಖುಷಿಯ ಸಂಗತಿಯಾಗಿದೆ, ಒಳ್ಳೆಯ ಶಿಕ್ಷಕರಿಗೆ ಬೆನ್ನು ತಟ್ಟಿದರೆ ಇತರೆ ಶಿಕ್ಷಕರ ಸಾಧನೆಗೆ ಸ್ಫೂರ್ತಿ ಆಗುತ್ತದೆ ಎಂದು ಅಭಿಪ್ರಾಯ ಪಟ್ಟರು ತಾಲೂಕಿನ ಶಿಕ್ಷಕರ ಶ್ರಮದಿಂದ ಫಲಿತಾಂಶ ಉತ್ತಮವಾಗಿ ಬರುತ್ತಿದೆ ಎಲ್ಲ ಶಿಕ್ಷಕರ ಉತ್ತಮ ಭೋದನೆ ಇದಕ್ಕೆ ಕಾರಣವಾಗಿದೆ ಎಂದು ಶಿಕ್ಷಕರ ಕಾರ್ಯದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ಕ.ಸಾ.ಪ ತಾಲೂಕ ಅಧ್ಯಕ್ಷ ಗೋಪಾಲ್ ಭಾಷಿ ಮಾತನಾಡಿ ಯುವ ಸಾಧಕ ಶಿಕ್ಷಕರನ್ನ ಗುರುತಿಸಿ ಸನ್ಮಾನಿಸುತ್ತಿರುವುದರಿಂದ ಇನ್ನೂ ಹೆಚ್ಚಿನ ವಿದ್ಯಾರ್ಥಿ ಪ್ರತಿಭೆಗಳು ಹೊರಬರಲು ಸಾಧ್ಯವಾಗುತ್ತಿದೆ ಇವರ ಕಾರ್ಯದಿಂದ ಉತ್ತಮ ವಾತಾವರಣ ನಿರ್ಮಾಣವಾಗಲಿದೆ ಎಂದರು. ಕಾರ್ಯಕ್ರಮದಲ್ಲಿ ಶಿಕ್ಷಕ ಆರ್ ಎಚ್ ಪಾಲೇಕರ್, ಎಂ ಕೆ ನಾಯ್ಕ್ ಕಡಕೇರಿ, ಪತ್ರಕರ್ತ ದಿವಾಕರ್ ಸಂಪಖಂಡ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು ನಿವೃತ್ತ ಶಿಕ್ಷಕ ಎಮ್. ಎಸ್. ಭಟ್ ಉಪನ್ಯಾಸ ನೀಡಿದರು, ಸ್ಪಂದನ ಸೇವಾ ಸಂಸ್ಥೆಯ ಅಧ್ಯಕ್ಷ ರಾಘವೇಂದ್ರ ನಾಯ್ಕ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕ್ರೀಡಾ ಕ್ಷೇತ್ರದ ಸಾಧಕ ಸೂರಗಾಲ್ ಪ್ರಾಥಮಿಕ ಶಾಲೆ ಶಿಕ್ಷಕ ಮಂಜುನಾಥ್ ನಾಯ್ಕ್, ಸಂಗೀತ ಕ್ಷೇತ್ರದ ಹಣಜಿ ಬೈಲ್ ಪ್ರಾಥಮಿಕ ಶಾಲೆ ಶಿಕ್ಷಕಿ ಸುಮಾ ಹೆಗಡೆ ರವರನ್ನು ಸನ್ಮಾನಿಸಲಾಯಿತು.
ತನ್ಮಯಿ ಸಿ ನಾಯ್ಕ್ ಪ್ರಾರ್ಥಿಸಿ , ಶಿಕ್ಷಕ ಉಮೇಶ್ ನಾಯ್ಕ್ ಸ್ವಾಗತಿಸಿ , ನಳಿನಿ ಹೆರ್ಟೆಕರ್ ಪ್ರಾಸ್ತಾವಿಕ ಮಾತನಾಡಿ, ಮಹೇಶ್ ವಂದಿಸಿ, ಸುಧಾರಣೆ ನಾಯ್ಕ್ ನಿರ್ವಹಿಸಿದರು.