ಭಟ್ಕಳ: 5 ಜನರ ಯುವಕರ ತಂಡವೊಂದು ರಚಿಸಿರುವ “ಕೊಂದೇ ಬಿಡು ನನ್ನ ಒಂದೇ ಸಲ”ನೂತನ ಆಲ್ಬಂ ಬಿಡುಗಡೆ

ಭಟ್ಕಳ: ಯಲ್ವಡಿಕವೂರು ಗ್ರಾಮದ ಯುವಕನಾದ ಗಣೇಶ ನಾಯ್ಕ ತನ್ನ ಚಿಕ್ಕ ವಯಸ್ಸಿನಿಂದಲೂ ಬರವಣಿಗೆ ಹವ್ಯಾಸ ಹೊಂದಿದ್ದು. ಸಾಮಾಜಿಕ ಜಾಲತಾಣಗಳಲ್ಲಿ ಮೊದಲು ಬರವಣಿಗೆ ಆರಂಭಿಸಿದ ಈತ ಕಳೆದ ಒಂದು ವರ್ಷದ ಹಿಂದೆ ಕೊಂದೇ ಬಿಡು ನನ್ನ ಒಂದೇ ಸಲ”ಈಹಾಡನ್ನು ಬರೆಯಲು ಪ್ರಾರಂಭಿಸಿ ನಾಲ್ಕು ತಿಂಗಳ ಹಿಂದೆ ಈ ಹಾಡನ್ನು ಸಿದ್ದಪಡಿಸಿ ಈತ ತನ್ನ ನಾಲ್ಕು ಜನ ಸ್ನೇಹಿತರ ಸಹಾಯ ಪಡೆದು ಹಾಡಿಗೆ ಜೀವ ತುಂಬಲು ಪ್ರಾರಂಭಿಸಿದ ಈತ  ಯಾವುದೇ ಅತ್ಯಾಧುನಿಕ ಗಿಮ್ಬಲ್ ಗಳಂತ ಕ್ಯಾಮರ ಬಳಸದೆ ಕೇವಲ ಐಫೋನ್ ಮತ್ತು ಡಿ.ಎಸ್.ಎಲ್.ಆರ್ ಕ್ಯಾಮರದಿಂದ ಎರಡೂವರೆ ದಿನಗಳಲ್ಲಿ ವಿಡಿಯೋ ಚಿತ್ರೀಕರಣ ಮುಗಿಸಿದ್ದಾರೆ. ವಿಶೇಷವೆಂದರೆ ಇಲ್ಲಿ ಯಾರು ಯಾವುದೇ ವಿಭಾಗದಲ್ಲಿ ನುರಿತರಿಲ್ಲದೇ ಚಿತ್ರ ಸೆರೆಹಿಡಿಯುವದರಿಂದ ಹಿಡಿದು ಅದನ್ನು ಸಂಕಲನ ಮಾಡುವವರು ಸಹ ಹೊಸಬರಾಗಿದ್ದು ಉತ್ತಮ ತಂಡದಿಂದ “ಕೊಂದೇ ಬಿಡು ನನ್ನ ಒಂದೇ ಸಲ”ನೂತನ ಆಲ್ಬಂ ಸಾಂಗ್ತಯಾರಿಸಿ ಪ್ರೇಕ್ಷಕರ ಮುಂದಿಟ್ಟಿದ್ದಾರೆ. 

ಮೊದಲೇ ಹೇಳಿದಾಗೆ ಈ ಹಾಡನ್ನು ಗಣೇಶ ನಾಯ್ಕ ಬರೆದಿದ್ದು .ಸಂಗೀತ ಕಲಿಯದೆ ಇರುವ ಜಯಂತ ಶೆಟ್ಟಿ ಮೊದಲ ಬಾರಿಗೆ ಸಾಂಗ್ ಕಂಪೋಸ್ ಮಾಡಿದ್ದಾರೆ. ಹಾಗೆ ಮ್ಯೂಸಿಕ್ ಅನ್ನು ಚಿದಾನಂದ ಕಡಬ ಹಾಗೂ ಮೊದಲ ಬಾರಿಗೆ ಕ್ಯಾಮರ ವರ್ಕ್ ಮಾಡಿರುವ ಸುನೀಲ ಶೆಟ್ಟಿ ವಿಡಿಯೋಗ್ರಾಫಿ ಮತ್ತು ಎಡಿಟಿಂಗ್ ಕಾರ್ಯನಿರ್ವಹಿಸಿದ್ದರೆ ,ದೃಶ್ಯ ನಿರ್ದೇಶನವನ್ನು ರಾಘು ಅದ್ವೈತ ಹಾಗೂ ಸಹಾಯಕ ನಿರ್ದೇಶನಕನಾಗಿ ಅರುಣ ಆರ್ಚಾರ್ಯ ಕೆಲಸ ನಿರ್ವಹಿಸಿದ್ದು ಈ ಹಾಡಿಗೆ ಗಾಯಕ ಕೆ.ಪಿ ಮಿಲನ್ ಕುಮಾರ ಹಾಡಿದ್ದಾರೆ.

ಈ ತಂಡದ ಮೊದಲ ಪ್ರಯತ್ನದಲ್ಲೇ
ಹಾಡಿನ ಲಿರಿಕ್ಸ್ ಆಗಲಿ ಚಿತ್ರೀಕರಣವಾಗಲಿ ವಿಡಿಯೋ ಎಡಿಟಿಂಗ್ ಆಗಲಿ ಯಾವುದೇ ಸಿನಿಮಾದ ಹಾಡಿಗೆ ಕಡಿಮೆ ಇಲ್ಲ ಎಂಬಂತೇ ಮೂಡಿ ಬಂದಿದ್ದು.ತಾನು ಬರೆದ ಹಾಡಿಗೆ ತನ್ನ ಸ್ನೇಹಿತ ಸಹಾಯ ಪಡೆದುಕೊಂಡು ಇದೀಗ ಹಾಡಿಗೆ ಜೀವ ತುಂಬಿ ಪ್ರೇಕ್ಷಕರ ಮುಂದೆ ಇಟ್ಟಿರುವ ಭಟ್ಕಳದ ಈ ಗ್ರಾಮೀಣ ಯುವಕರಿಗೆ ನಿಮ್ಮೆಲರ ಪ್ರೋತ್ಸಾಹ ನೀಡಿ ಹರಸೋಣ