ಸಿದ್ದಾಪುರ : ಪ್ರತಿಭೆಗಳು ಎಲ್ಲರಲ್ಲಿಯೂ ಇರುತ್ತವೆ, ಆದರೆ ಅದನ್ನ ಗುರುತಿಸಲು ವೇದಿಕೆ ಸಿಕ್ಕಾಗ ಮಾತ್ರ ಹೊರಬರಲು ಸಾಧ್ಯ-ಜಿ ಐ ನಾಯ್ಕ್

ಸಿದ್ದಾಪುರ : ಪ್ರತಿಭೆಗಳು ಎಲ್ಲರಲ್ಲಿಯೂ ಇರುತ್ತವೆ, ಆದರೆ ಅದನ್ನ ಗುರುತಿಸಲು ವೇದಿಕೆ ಸಿಕ್ಕಾಗ ಮಾತ್ರ ಹೊರಬರಲು ಸಾಧ್ಯ ಮಕ್ಕಳ ಪ್ರತಿಭೆ ಗುರುತಿಸಲು ಈ ರೀತಿಯ ಕಾರ್ಯಕ್ರಮಗಳ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ ಐ ನಾಯ್ಕ್ ಹೇಳಿದರು ಅವರು ಗೋಳಗೋಡ ಸಭಾಭವನದಲ್ಲಿ ನಡೆದ
ಕವಚೂರ್ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು ಇಂದು ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣವನ್ನು ಕೊಡಿಸಲು ಎಲ್ಲಾ ತಂದೆ ತಾಯಂದಿರು ಪ್ರಯತ್ನವನ್ನು ಪಡುತ್ತಿದ್ದಾರೆ ಶಿಕ್ಷಣದ ಜೊತೆಯಲಿ ಮಾನವಿಯತೆ ಗುಣಗಳನ್ನ ಬೆಳೆಸಬೇಕು ಎಂದರು.
ಕವಚೂರ್ ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಜಿ. ಟಿ. ನಾಯ್ಕ್ ಗೋಳಗೋಡ್ ಕಾರ್ಯಕ್ರಮವನ್ನು ಉದ್ಘಾಟಿಸಿ ಪಠ್ಯಪುಸ್ತಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಿಗೆ ಸಂಸ್ಕೃತಿಕ ಚಟುವಟಿಕೆಗಳಲ್ಲಿ ಗುರುತಿಸಿಕೊಳ್ಳಲು ಈ ಕಾರ್ಯಕ್ರಮಗಳು ಮುಖ್ಯ ವೇದಿಕೆ ಆಗಿವೆ ಸಣ್ಣಪುಟ್ಟ ತಪ್ಪುಗಳು ಎಲ್ಲರೂ ಮಾಡುತ್ತಾರೆ ಹಾಗೆ ಈ ಮುದ್ದು ವಿದ್ಯಾರ್ಥಿಗಳು ಕೂಡ ಮಾಡಬಹುದು ಇಲ್ಲಿ ಆಯ್ಕೆಯಾಗುವುದು ಮುಖ್ಯವಲ್ಲ ಭಾಗವಹಿಸುವುದು ಮುಖ್ಯವಾಗಿದೆ ಎಲ್ಲರೂ ತಮ್ಮ ಅಮೂಲ್ಯವಾದ ಸಮಯವನ್ನು ಈ ಕಾರ್ಯಕ್ರಮಕ್ಕೆ ನೀಡಿ ಸಂತಸದಿಂದ ಪಾಲ್ಗೊಳ್ಳಿ ಎಂದರು.
ಧನ್ಯ ಮತ್ತು ಸಂಘಡಿಗರು ಪ್ರಾರ್ಥಿಸಿದರು , ವಾಣಿ ಸಂಗಡಿಗರು ಸ್ವಾಗತ ಗೀತೆ ಹಾಡಿದರು ಮುಖ್ಯ ಶಿಕ್ಷಕಿ ಭಾರತಿ ಹೆಗಡೆ ಸ್ವಾಗತಿಸಿದರು ಎಸ್ ಡಿ ಎಂ ಸಿ ಅಧ್ಯಕ್ಷ ಗಜಾನನ ನಾಯ್ಕ್ ಅಧ್ಯಕ್ಷ ಅಧ್ಯಕ್ಷತೆವಹಿಸಿದ್ದರು ಕಾರ್ಯಕ್ರಮದಲ್ಲಿ ಗ್ರಾಮ ಕಮಿಟಿ ಅಧ್ಯಕ್ಷ ಐ ಕೆ ನಾಯ್ಕ್ ಎಸ್ ಡಿ ಎಂ ಸಿ ಉಪಾಧ್ಯಕ್ಷೆ ನಿರ್ಮಲ ನಾಯ್ಕ್, ಹೇಮಾ, ಲಕ್ಷಣ ಗೊಂಡ, ಗಣಪತಿ, ಸಿ ಆರ್ ಪಿ ವಿಶ್ವನಾಥ್ ಪಿ. ಟಿ. ನಾಯ್ಕ್ ಉಪಸ್ಥಿತರಿದ್ದರು ಮೇಘಶ್ರೀ ಕೆ ನಿರೂಪಿಸಿದರು ಶಿಕ್ಷಕರ ಸಂಘದ ಸದಸ್ಯ ಜನಾರ್ಧನ್ ಗೌಡ ವಂದಿಸಿದರು.
ಈಶ್ವರ ದೇವಾಲಯದಲ್ಲಿ ಅತಿಥಿಗಳು ಪೂಜೆ ಸಲ್ಲಿಸಿ ಡೊಳ್ಳಿನ ಕುಣಿತದ ಮೂಲಕ ಮೆರವಣಿಗೆ ನಡೆಸಿ ಸಭಾ ಕಾರ್ಯಕ್ರಮ ಆರಂಭಿಸಿದರು ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ವಿವಿಧ ಸ್ಪರ್ಧೆ ನಡೆಯಿತು.