ದಾಂಡೇಲಿಯಲ್ಲಿ ಓಣಂ ಸಂಭ್ರಮ

ದಾಂಡೇಲಿ : ಸುಖ, ಶಾಂತಿ, ನೆಮ್ಮದಿಯ ಮತ್ತು ಭಾವೈಕ್ಯತೆಯ ಹಾಗೂ ಸಾಮರಸ್ಯದ ಸಂದೇಶವನ್ನು ಸಾರುವ ಓಣಂ ಹಬ್ಬ ತನ್ನದೇ ಆದ ವೈಶಿಷ್ಟ್ಯವನ್ನು ಪಡೆದುಕೊಂಡಿದ್ದು, ಕೇರಳೀಯರ ನಾಡಹಬ್ಬವಾಗಿಯೂ, ರಾಷ್ಟ್ರೀಯ ಹಬ್ಬ ವಾಗಿಯೂ ಆಚರಿಸಲ್ಪಡುವ ಓಣಂ ಹಬ್ಬವನ್ನು ನಗರದ ಕೇರಳ ಸಮಾಜ ಬಾಂಧವರು ನಗರದ ಟೌನಶಿಪ್ ನಲ್ಲಿರುವ ಕೇರಳ ಸಮಾಜಂ ಸಭಾಭವನದಲ್ಲಿ ಸಂಭ್ರಮ ಸಡಗರದಿಂದ ಇಂದು ಗುರುವಾರ ಆಚರಿಸಿಕೊಂಡರು.

ಓಣಂ ಹಬ್ಬದ ಅಂಗವಾಗಿ ವಿಶೇಷವಾಗಿ ರೂಪು ಪಡೆಯುವ ಹೂವಿನ ರಂಗೋಲಿ “ಪೂಕಳಂ’ ರಚಿಸಿ “ಮಾವೇಲಿ’ಯನ್ನು ಬರಮಾಡಿಕೊಳ್ಳುವ ಮೂಲಕ ಓಣಂ‌ ಹಬ್ಬವನ್ನಾಚರಿಸಿದರು.

ಓಣಂ ಹಬ್ಬದ ನಿಮಿತ್ತ ಬಿಡಿಸಲಾದ ಹೂವಿನ ರಂಗೋಲಿ ಪೂಕಳಂ ಹೇಗೆ ವೈಶಿಷ್ಟ್ಯವನ್ನು ಪಡೆದಿದೆಯೋ, ಅದೇ ರೀತಿ ನಗರದಲ್ಲಿರುವ ಕೇರಳ ಸಮಾಜ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ಸಿದ್ಧಪಡಿಸಿ ತಂದಿದ್ದ ವಿವಿಧ ಬಗೆಯ ತಿಂಡಿ ತಿನಿಸುಗಳು ಹಾಗೂ ಸಿದ್ಧಪಡಿಸಿದ ಆಹಾರ ಪದಾರ್ಥಗಳಾದ ಪರಂಪರಾಗತ ಶೈಲಿಯ ಉಪ್ಪೇರಿ, ಕಿಚ್ಚಡಿ, ರಸಂ, ಅವಿಲ್‌, ಓಲನ್‌, ಕಾಳನ್‌, ತೋರನ್‌, ಪಚ್ಚಿಡಿ, ಕೂಟುಕ್ಕರಿ, ಸಾಂಬಾರು, ಕುರುಮ, ಪಾಯಸ ಹೀಗೆ ವಿವಿಧ ಖಾದ್ಯಗಳೊಂದಿಗೆ ಸಾರ್ವಜನಿಕ ಅನ್ನಸಂತರ್ಪಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ನಗರದ ಕೇರಳ ಸಮಾಜ ಸಂಘದ ಪದಾಧಿಕಾರಿಗಳಾದ ಎಸ್.ಸೋಮಕುಮಾರ್, ಎನ್ ಶಶಿಧರನ್, ರಾಜನ್, ಮೋಹನ್, ಮೋಹನ್ ಕುಮಾರ್, ರೋಶನಜಿತ್, ಸತ್ಯಣ್ಣ, ದೇವಾನಂದ ಆರ್.ಸಿ, ಪ್ರಭಾಕರ್ ನಾಯರ್, ಜನಾರ್ಧನ್, ಸುದರ್ಶನ್.ಆರ್.ಸಿ, ರಮೇಶಕುಮಾರ್, ವಿ.ವಿ.ಅರ್ಜುನ್, ಆರೀಶ್ ಖಾದರ್, ಶಮಲ್ ಅಬ್ದುಲ್ಲಾ, ಟಿ.ಆನಂದ ಮಾಧವ್, ರಾಜಗೋಪಾಲ್, ಸಜ್ಜನ್ ಸತ್ಯಶೀಲನ್, ಲೂನಾ ಶಶಿಧರನ್, ಲತಾ ರಾಜನ್, ಅಂಬ್ಲಿ‌ ಮೋಹನ್, ಪ್ರೀತಿ‌ ನಾಯರ್, ಲಲಿತಾ ಶಿವ, ಜ್ಯೋತಿ ನಿಜನ್, ಪ್ರೇಮಾ, ಅ‌ನಿತಾ ಸೋಮಕುಮಾರ್ ಸೇರಿದಂತೆ ಸಂಘದ ಪದಾಧಿಕಾರಿಗಳು ಸಂಘದ ಸದಸ್ಯರು ಹಾಗೂ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.