ಮದುವೆ ಸಭಾ ಭವನದಲ್ಲಿ ಹೆಜ್ಜೇನು ದಾಳಿ

ಹೊನ್ನಾವರ : ಕೆಳಗಿನೂರು ಒಕ್ಕಲಿಗ ಸಭಾ ಭವನದಲ್ಲಿ ಮದುವೆ ಮನೆಗೆ ನುಗ್ಗಿದ ಹೆಜ್ಜೇನು ಹಲವರ ಮೇಲೆ ದಾಳಿ ಮಾಡಿದ್ದು, ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆದರೆ ಮತ್ತೆ ಕೆಲವರು ಮನೆಯ ಚಿಕಿತ್ಸೆ ಪಡೆದು ಅಪಾಯದಿಂದ ಪಾರಾಗಿದ್ದಾರೆ. ಸಭಾ ಭವನದ ಪೂರ್ವ ದಿಕ್ಕಿನ ಮೆಲ್ ಚಾವಣಿಯ ಎದುರುಗಿ ಹೆಜ್ಜೇನು ಗೂಡು ಕಟ್ಟಿದ್ದು ಕಂಡು ಬಂದಿದೆ.ಯಾವ ಕಾರಣಕ್ಕೋ ಏನೋ 2:30ರ ಊಟದ ಹೊತ್ತಿಗೆ ದಾಳಿ ಮಾಡಿದೆ, ಅದಾದ ನಂತರ ಸಮಾಧಾನ ಗೊಳ್ಳದ ಹೆಜ್ಜೇನು ಸುಮಾರು ನಾಲ್ಕರ ಹೊತ್ತಿಗೆ ಮತ್ತೆ ದಾಳಿ ಮಾಡಿದೆ.ಗೊಂದಲದ ವಾತಾವರಣ ಸ್ರಷ್ಟಿಯಾಗಿ ಸುಮಾರು 2/30 ಘಂಟೆಗಳ ಕಾಲ ಸಭಾ ಭಾವನದಿಂದ ಯಾರೂ ಹೊರಗೆ ಬರದಂತೆ ಮಾಡಿದೆ. ಕಿಟಕಿಯ ಕ್ಲಾಸ್ ಕ್ಲೋಸ್ ಮಾಡಿ ಒಳಗೆ ಇದ್ದು ಜೇನು ದಾಳಿಯನ್ನು ತಡೆಯಲು ಇದ್ದವರು ಸೇಣೆಸಿದ್ದಾರೆ.
4 ರ ಹೊತ್ತಿಗೆ ಮತ್ತೆ ದಾಳಿ ಮಾಡಿದ ಜೇನು ಅಲ್ಲಿದ್ದವರೆಲ್ಲ ಚಲ್ಲಾಪಿಲ್ಲಿಯಾಗುವಂತೆ ಮಾಡಿದೆ.ಸಾವಿರಾರು ಸಂಖ್ಯೆಯಲ್ಲಿ ಬರುವ ಸಭಾ ಭವನದ ಎಲ್ಲಿಯೂ ಹೆಜ್ಜೇನು ಕಟ್ಟದಂತೆ ನೋಡಿ ಕೊಳ್ಳದೆ ಇರುವುದು ಸಂಬಂಧ ಪಟ್ಟವರ ನಿಷ್ಕಾಳಜಿ ಎಂದಿದ್ದಾರೆ.ಹದ್ದು, ಪಾರಿವಾಳ ಹೆಜ್ಜೇನು ಗುಡಿಗೆ ಹೊಡೆಯುವ ಸಂದರ್ಭ ಇರುತ್ತದೆ. ಮದುವೆ ಎಂದ ತಕ್ಷಣ ಹೋಮ ಹಾಕುವ ಪದ್ಧತಿ ಇದ್ದೆ ಇರುತ್ತದೆ. ಅದರಿಂದ ಹೊರಡುವ ಹೋಗೆ ಸಹಜವಾಗಿಯೇ ಮೇಲ್ಚಾವಣಿ, ಕಿಟಕಿ ಇಂದ ಹೊರಗೆ ಹೋಗುವ ಕಾರಣ ಅಲ್ಲಿರುವ ಜೇನು ಹುಳಕ್ಕೆ, ತೊಂದರೆ ಆಗುತ್ತದೆ.ಕೆಲವೊಮ್ಮೆ ಹೆಜ್ಜೇನು ಗೂಡು ಬಿಡುವ ಸಂದರ್ಭದಲ್ಲಿಯೂ ಲಕ್ಷಾಂತರ ಸಂಖ್ಯೆಯಲ್ಲಿ ಇರುವ ಹುಳುಗಳು ಅಪಾಯ ಆದರೆ ಪ್ರತಿದಾಳಿ ಮಾಡುವ ಸಂದರ್ಭ ಇರುವುದರಿಂದ ಇಂತ ಸ್ಥಳಗಳಲ್ಲಿ ಜೇನು ಗೂಡು ಕಟ್ಟದಂತೆ ನೋಡಿ ಕೊಳ್ಳಬೇಕಾಗಿತ್ತು ಎನ್ನುವ ಮಾತು ಸಹ ಕೇಳಿ ಬಂದಿದೆ.