ಭಟ್ಕಳ: ಕಳೆದ ಆಗಸ್ಟ 13ರಂದು ನಡೆದಿರುವ ಭಟ್ಕಳ ಕೃಷಿ ಹಾಗೂ ಗ್ರಾಮೀಣ ಅಭಿವೃದ್ಧಿ ಸಹಕಾರಿ ಬ್ಯಾಂಕ್ ನಿಯಮಿತ (ಪಿಎಚ್‌ಡಿ) ಭಟ್ಕಳ ಇದರ ನಿರ್ದೇಶಕ ಮಂಡಳಿ ಸದಸ್ಯರ ಆಯ್ಕೆ ಚುನಾವಣೆಯ ಮತ ಎಣಿಕೆ ಕಾರ್ಯ ನ್ಯೂ ಇಂಗ್ಲೀಷ್ ಸ್ಕೂಲ್ ರಾಮನಾಥ ಸಭಾಗೃಹದಲ್ಲಿ ಚುನಾವಣಾಧಿಕಾರಿ ಭಾಸ್ಕರ ನಾಯ್ಕ ನೇತೃತ್ವದಲ್ಲಿ ಮತ ಎಣಿಕೆ ನಡೆದಿದ್ದು, ಮಾಜಿ ಶಾಸಕ ಸುನೀಲ ನಾಯ್ಕ ನೇತೃತ್ವದ ತಂಡ ಎಲ್ಲಾ 15 ಸ್ಥಾನಗಳನ್ನು ಗೆಲ್ಲುವುದರ ಮೂಲಕ ಜಯಭೇರಿ ಸಾಧಿಸುವುದರ ಜೊತೆಗೆ ಎದುರಾಳಿ ತಂಡಕ್ಕೆ ಹೀನಾಯ ಸೋಲು ನೀಡಿದೆ.
ಫಲಿತಾಂಶದ ಮತಗಳ ಎಣಿಕೆ ಕಾರ್ಯ ಆರಂಭಗೊಂಡ ಮೊದಲ ಹಂತದಲ್ಲಿ ಸಾಲಗಾರರಲ್ಲದ ಕ್ಷೇತ್ರದಲ್ಲಿ ಈಶ್ವರ ಮಂಜುನಾಥ ನಾಯ್ಕ (350 ಮತ) ಗೆಲುವು ಮಾಜಿ ಶಾಸಕ ಸುನೀಲ ನಾಯ್ಕ ತಂಡ ಜಯದ ಓಟ ಆರಂಭಗೊಂಡಿತು. ಆ ಬಳಿಕ ಸಾಲಗಾರ ಸಾಮಾನ್ಯ ಕ್ಷೇತ್ರದಿಂದ ಮಂಜುನಾಥ ಶನಿಯಾರ ನಾಯ್ಕ (2349), ಹನುಮಂತ ನಾರಾಯಣ ನಾಯ್ಕ ಸರ್ಪನಕಟ್ಟೆ (2381), ಸುರೇಶ ಜಟ್ಟಯ್ಯ ನಾಯ್ಕ ಪುರವರ್ಗ (2356). ಸಂತೋಷ ಮಾದೇವ ನಾಯ್ಕ ಮಾವಳ್ಳಿ (2249), ಮಂಜಪ್ಪ ಮಾದೇವ ನಾಯ್ಕ, ಮಾವಳ್ಳಿ1795), ದೇವಿದಾಸ ಮಾಸ್ತಪ್ಪ ಹಾಡುವಳ್ಳಿ (2469), ದೇವಿದಾಸ ಮಾಸ್ತಪ್ಪ ನಾಯ್ಕ (2080), ನವನೀತ ಗಣೇಶ ನಾಯ ಗಾಯತ್ರಿ ಮುಂಡಳ್ಳಿ ( 2335), ಈರಾ ತಿಮ್ಮಯ್ಯ ನಾಯ್ಕ ಮುಂಡಳ್ಳಿ (2502)ಮತಗಳನ್ನು ಪಡೆದುಕೊಂಡರೆಸಾಲಗಾರ ಹಿಂದುಳಿದ ಕ್ಷೇತ್ರದಿಂದ ಮಾಜಿ ಶಾಸಕ ಸುನೀಲ ಬಿ. ನಾಯ (2927), ಸಾಲಗಾರ ಹಿಂದುಳಿದ ಆ ವರ್ಗ ಮೀಸಲು ಕ್ಷೇತ್ರದಿಂದ ಹಾಗೂ ಮಹಿಳಾ ಮೀಸಲು ಕ್ಷೇತ್ರದಿಂದ ಗಾಯತ್ರಿ ವಿಜಯಕುಮಾರ ನಾಯ್ಕ ಬೈಲೂರು (2231), ಪೂರ್ಣಿಮಾ ಕೃಷ್ಣ ನಾಯ್ಕ ಆಸರಕೇರಿ (2000) ಮತಗಳನ್ನು ಪಡೆದುಕೊಂಡರು.
ಸಾಲಗಾರ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಮಂಜು ಮಂಜು ಮೊಗೇರ ಬೆಳಕ (2313). ಸಾಲಗಾರ ಪರಿಶಿಷ್ಟ ಪಂಗಡ ಎವರ್.ಪಿ.ಶೈಲೆಂದ್ರಕುಮಾರ ಮೀಸಲು ಕ್ಷೇತ್ರದಿಂದ ನಾಗಪ್ಪ ಕುಪ್ಪಯ್ಯ ಗೊಂಡ, ಆಶೀಕಾನ್ (2168) ಅತ್ಯಧಿಕ ಮತಗಳೊಂದಿಗೆ ಆಯ್ಕೆಯಾಗಿ ಗೆಲುವು ಸಾಧಿಸಿದರು.
ಮತ ಎಣಿಕೆಗೆ ಪೊಲೀಸ್ ಬಂದೋಬಸ್ತ
ನ್ಯೂ ಇಂಗ್ಲೀಷ್ ಸ್ಕೂಲ್ ರಾಮನಾಥ ಸಭಾಗೃಹದಲ್ಲಿ ಚುನಾವಣಾಧಿಕಾರಿ ಭಾಸ್ಕರ ನಾಯ್ಕ ನೇತೃತ್ವದಲ್ಲಿ ಮತ ಎಣಿಕೆಗೆ ಕಾರ್ಯಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಭಟ್ಕಳ ಪಿಎಲ್ ಡಿ ಬ್ಯಾಂಕ್ ಪ್ರಧಾನ ವ್ಯವಸ್ಥಾಪಕ ರಾಮ ಬಿಲ್ಲವ ಇದ್ದರು.
ಜಿಲ್ಲೆಯ ವಿವಿಧ ಸಹಕಾರಿಗಳ 50ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ಮತ ಎಣಿಕೆಗೆ ನಿಯೋಜಿಸಲಾಗಿತ್ತು. ರವಿವಾರ ಬೆಳಿಗ್ಗೆ 9 ಗಂಟೆಗೆ ಆರಂಭವಾದ ಮತ ಎಣಿಕೆ ಕಾರ್ಯ 7 ಗಂಟೆ ಸುಮಾರಿಗೆ ಮುಕ್ತಾಯವಾಯಿತು.
ಡಿವೈಎಸ್ಪಿ ಶ್ರೀಕಾಂತ, ಸಿಪಿಐ ಗೋಪಾಲಕೃಷ್ಣ, ಸಿಪಿಐ ಚಂದನ್ ಸಿಬ್ಬಂದಿಗಳೊಡನೆ ಎಣಿಕೆ ಮುಗಿಯುವವರೆಗೂ ಎಣಿಕೆ ಕೇಂದ್ರದಲ್ಲಿದ್ದು ಯಾವುದೇ ಗೊಂದಲ ನಿರ್ಮಾಣವಾಗದಂತೆ ಮುತುವರ್ಜಿ ವಹಿಸಿದ್ದರು.
ಎದುರಾಳಿಯ ತಂಡಕ್ಕೆ ಹೀನಾಯ ಸೋಲು
ಜಿದ್ದಾಜಿದ್ದಿನಿಂದ ಕೂಡಿದ್ದ ಭಟ್ಕಳ ಪಿಎಲ್‌ಡಿ ಬ್ಯಾಂಕ್ ಚುನಾವಣೆಯಲ್ಲಿ ಮಾಜಿ ಶಾಸಕ ಸುನೀಲ ನಾಯ್ಕ ಹಾಗೂ ಅವರ ಬೆಂಬಲಿಗರು ಜಯಿಸಿ ಮತ್ತೊಮ್ಮೆ ಬ್ಯಾಂಕಿನ ಆಡಳಿತ ಅಧಿಕಾರ ಹಿಡಿಯುವುದನ್ನು ತಡೆಯುವ ನಿಟ್ಟಿನಲ್ಲಿ ಎದುರಾಳಿ ತಂಡದ ಮಂಜುನಾಥ ಹನುಮಂತ ನಾಯ್ಕ ಸರ್ಪನಕಟ್ಟೆ ಸೇರಿದಂತೆ ಸಚಿವ ಮಂಕಾಳ ವೈದ್ಯ ಬೆಂಬಲಿಗರು ಸಾಕಷ್ಟು ಪ್ರಯತ್ನ ನಡೆಸಿದರಾದರೂ ಪ್ರಯತ್ನ ಫಲಕಾರಿಯಾಗಿಲ್ಲ. ಹಾಗೆಯೇ ಈ ಹಿಂದೆ ಆಡಳಿತ ಮಂಡಳಿಯ ನಿರ್ದೇಶಕರಾಗಿದ್ದು, ನಂತರದಲ್ಲಿ ಸುನೀಲ ನಾಯ್ಕ ವಿರುದ್ಧವೇ ತಿರುಗಿ ಬಿದ್ದು ವಿರೋಧಿ ಬಣ ಸೇರಿಕೊಂಡವರಿಗೆ ಅದೃಷ್ಟ ಖುಲಾಯಿಸಲಿಲ್ಲ. ಸಚಿವರ ಬೆಂಬಲಿಗರ ನಡುವಿನ ಮುಸುಕಿನ ಗುದ್ದಾಟ, ಮಾಜಿ ಶಾಸಕ ಸುನೀಲ ಪರ ಶೇರುದಾರರ ಅನುಕಂಪ ಎಲ್ಲವೂ ಸೇರಿ ಸುನೀಲ ಹಾಗೂ ಅವರ ತಂಡದ ಗೆಲುವಿಗೆ ಕಾರಣವಾಯಿತು.