ದಾಂಡೇಲಿ : ಪಾಟೀಲ್ ಆಸ್ಪತ್ರೆಯಲ್ಲಿ ಸಂಪನ್ನಗೊಂಡ ಉಚಿತ ಬಂಜೆತನ ತಪಾಸಣಾ ಶಿಬಿರ

ದಾಂಡೇಲಿ : ನಗರದ ಪಾಟೀಲ್ ಆಸ್ಪತ್ರೆಯಲ್ಲಿ ಹುಬ್ಬಳ್ಳಿಯ ನೋವಾ ಐವಿಎಫ್ ಫಟರ್ಿಲಿಟಿ ಆಸ್ಪತ್ರೆಯ ಆಶ್ರಯದಡಿ ಹಮ್ಮಿಕೊಂಡಿದ್ದ ಉಚಿತ ಬಂಜೆತನ ತಪಾಸಣಾ ಶಿಬಿರವು ಯಶಸ್ವಿಯಾಗಿ ಶನಿವಾರ ಸಂಪನ್ನಗೊಂಡಿತು.

ಶಿಬಿರಕ್ಕೆ ಚಾಲನೆಯನ್ನು ನೀಡಿ ಮಾತನಾಡಿದ ನಗರದ ಖ್ಯಾತ ವೈದ್ಯರು ಹಾಗೂ ಪಾಟೀಲ್ ಆಸ್ಪತ್ರೆಯ ಪ್ರವರ್ತಕರಾದ ಡಾ.ಮೋಹನ ಪಾಟೀಲ್ ಅವರು ಇಂತಹ ಶಿಬಿರದ ಅವಶ್ಯಕತೆಯಿದ್ದು, ಸಾರ್ವಜನಿಕರು ಈ ಶಿಬಿರದ ಲಾಭವನ್ನು ಪಡೆದುಕೊಂಡು ನೆಮ್ಮದಿಯ ಜೀವನವನ್ನು ನಡೆಸಬೇಕೆಂದು ಕರೆ ನೀಡಿದರು.

ಶಿಬಿರದ ವೈದ್ಯಾಧಿಕಾರಿ ಹುಬ್ಬಳ್ಳಿಯ ಐವಿಎಫ್ ಫರ್ಟಿಲಿಟಿ ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ವಿನುತಾ ಕುಲಕರ್ಣಿಯವರು ಮಾತನಾಡಿ ಬಂಜೆತನ ಒಂದು ಶಾಪವಲ್ಲ. ಕೆಲವೊಂದು ಕಾರಣಗಳಿಂದಾಗಿ, ಸಣ್ಣಪುಟ್ಟ ಆರೋಗ್ಯ ಸಮಸ್ಯೆಯಿಂದಾಗಿ ಬಂಜೆತನ ಸಮಸ್ಯೆ ಉಂಟಾಗುತ್ತಿದೆ. ಬಂಜೆತನವನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳು ಹಾಗೂ ವೈದ್ಯಕೀಯ ಔಷದೋಪಚಾರಗಳಿವೆ ಎಂದರು.

ಐವಿಎಫ್ ಫರ್ಟಿಲಿಟಿ ಆಸ್ಪತ್ರೆಯ ಬಸವರಾಜ್ ಸ್ವಾಗತಿಸಿದರು ಮತ್ತು ಸುಲೇಮಾನ್ ವಂದಿಸಿದರು. ಶಿಬಿರದಲ್ಲಿ ಒಟ್ಟು 42 ಜನರು ಭಾಗವಹಿಸಿ ಶಿಬಿರದ ಪ್ರಯೋಜನವನ್ನು ಪಡೆದುಕೊಂಡರು. ಶಿಬಿರದ ವೈದ್ಯಾಧಿಕಾರಿ ಡಾ.ವಿನುತಾ ಕುಲಕರ್ಣಿಯವರು ಆರೋಗ್ಯ ತಪಾಸಣೆಯನ್ನು ನಡೆಸಿ ಅಗತ್ಯ ಸಲಹೆಯನ್ನು ನೀಡಿದರು.