ಕಾರವಾರ: ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನು ಬಂಧಿಸಿ ಬಂಧಿತನಿಂದ ಅರ್ಧ ಕೆಜಿ ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದ ಘಟನೆ ತಾಲೂಕಿನ ಶಿರವಾಡದ ಜಾಂಬಾ ಫಾಲ್ಸ್ ಬಳಿ ನಡೆದಿದೆ. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಶಿರವಾಡ ಗ್ರಾಪಂ ವ್ಯಾಪ್ತಿಯ ಮಖೇರಿಯ ಮಣಿಕಂಠ ಬಾಬು ರಾಠೋಡ (19) ಬಂಧಿತ ಆರೋಪಿ.
ಈತ ಭಾನುವಾರ ಇಲ್ಲಿನ ಜಾಂಬಾ ಫಾಲ್ಸ್ ಗೆ ಹೋಗುವ ರಸ್ತೆಯ ಬದಿಯಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ. ಪೊಲೀಸರ ಕಾರ‍್ಯಾಚರಣೆ ವೇಳೆ ಈತನ ಬಳಿ 508 ಗ್ರಾಂ ಗಾಂಜಾ ಪತ್ತೆಯಾಗಿದೆ. ತಕ್ಷಣ ಆರೋಪಿಯನ್ನು ಬಂಧಿಸಿದ ಪೊಲೀಸರು ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಬಳಿಕ ಆರೋಪಿಯನ್ನು ನ್ಯಾಯಾಧೀಶರ ಎದುರು ಹಾಜರುಪಡಿಸಲಾಗಿದ್ದು ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಎಸ್.ಪಿ ಡಾ. ಸುಮನ್ ಪೆನ್ನೇಕರ್ ತಿಳಿಸಿದ್ದಾರೆ.
ಎಸ್.ಪಿ. ಸುಮನ್ ಪೆನ್ನೆಕರ, ಅಡಿಶನಲ್ ಎಸ್.ಪಿ ಎಸ್. ಬದರಿನಾಥ ಹಾಗೂ ಕಾರವಾರ ಉಪವಿಭಾಗದ ಡಿ.ವೈ.ಎಸ್.ಪಿ ವೆಲಂಟೈನ್ ಡಿಸೋಜಾ ಅವರ ಮರ‍್ಗರ‍್ಶನದಲ್ಲಿ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್‌ಐಗಳಾದ ಸೀತಾರಾಮ ಪಿ. ಹಾಗೂ ಸೋಮನಾಥ ಆರ್. ನಾಯ್ಕ ಹೆಡ್‌ಕಾನ್ಸಟೇಬಲ್‌ಗಳಾದ ಸಚೀನ್. ಡಿ. ಮೇಸ್ತಾ, ರವಿ ಬಿ. ಗೌಡ, ವಿವೇಕ ಪಟಗಾರ್, ಕುಮಾರ ನಾಯ್ಕ, ಕಾನ್ಸಟೇಬಲ್‌ಗಳಾದ ಪಿ. ದೇವರಾಜ, ಹನುಮಂತ ಸರೀಕರ್ ಹಾಗೂ ಜೀಪ್ ಚಾಲಕ ಮಾಧವ ನಾಯಕ ಕಾರ‍್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.