ಸಿದ್ದಾಪುರ :ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಯಕ್ಷಗಾನದ ಬಗ್ಗೆ ಆಸಕ್ತಿ ಕಡಿಮೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ.
ಯುವ ಜನತೆಯಲ್ಲಿ ಯಕ್ಷಗಾನ ಕಲೆ ಬಗ್ಗೆ ಆಸಕ್ತಿ ಇಲ್ಲದೆ ಇರುವುದು ಕಲೆ ಅಳಿವಿನ ಅಂಚಿಗೆ ಹೋಗಲು ಕಾರಣವಾಗಿದೆ.
ಕರಾವಳಿ ಹಾಗೂ ಮಲೆನಾಡಿನ ಭಾಗದ ಅಭಿಮಾನಿಗಳು ಇಂದಿಗೂ ಸಹ ಕಲೆಯ ಬಗ್ಗೆ ಅಭಿರುಚಿ ಹೊಂದಿದ್ದು ಪ್ರದರ್ಶನಗಳನ್ನ ವೀಕ್ಷಿಸುತ್ತ ಕಲಾವಿದರಿಗೆ ಪ್ರೇರಣೆ ನೀಡುತ್ತ ಇಂದಿಗೂ ಪ್ರದರ್ಶನ ನಡೆಯಲು ಕಾರಣರಾಗಿದ್ದಾರೆ.
ನಶಿಸುತ್ತಿರುವ ಮತ್ತು ಯುವಕರಿಂದ ಆಸಕ್ತಿ ಕಡಿಮೆಯಾಗುತ್ತಿರುವ ಕಲೆಯನ್ನ ಉಳಿಸುವ ಪ್ರಯತ್ನ ಯಕ್ಷ ತರಂಗಿಣಿ ಸಂಸ್ಥೆಯ ನಂದನ್ ನಾಯ್ಕ್ ಮಾಡುತ್ತಿದ್ದಾರೆ.
ಇತೀಚಿನ ದಿನಮಾನದಲ್ಲಿ ಪಾಲಕರು ಮಕ್ಕಳಿಗೆ ಡಾನ್ಸ್, ಚಲನಚಿತ್ರ ಸಂಗೀತ ಅಭ್ಯಾಸ, ಮುಂತಾದ ಕಲೆಗಳ ತರಬೇತಿಗಳಿಗೆ ಹಣ ನೀಡಿ ಕಳಿಸುತ್ತಾರೆ, ಆದರೆ ನಂದನರವರು ಈ ಕಲೆಯನ್ನು ಮುಂದಿನ ದಿನಗಳಿಗೆ ಉಳಿಸುವ ಉದ್ದೇಶದಿಂದಾಗಿ ಕಳೆದ ಹಲವು ವರ್ಷಗಳಿಂದ ಆಸಕ್ತಿಯುಳ್ಳ ಮಕ್ಕಳಿಗೆ ಉಚಿತ ತರಬೇತಿಯನ್ನು ನೀಡುತ್ತಿದ್ದಾರೆ .
ಯಕ್ಷಗಾನ ತರಭೇತಿ ಕೇಂದ್ರ ಹೊಸೂರು, ಹಾರ್ಸಿಕಟ್ಟಾಮುಂತಾದ ಹಲವು ಕಡೆಗಳಲ್ಲಿ ತಮ್ಮ ಸ್ನೇಹಿತ ಕಲಾವಿದರ ಸಹಾಯ ಪಡೆದು ಎಲ್ಲರ ಮಾರ್ಗದರ್ಶನದೊಂದಿಗೆ ತರಬೇತಿ ನೀಡುತ್ತಿದ್ದಾರೆ. ಇವರ ಪ್ರಯತ್ನಕ್ಕೆ ಯಕ್ಷಗಾನ ಅಭಿಮಾನಿಗಳಿಂದ, ಹಿರಿಯ ಕಲಾವಿದರಿಂದ ಮೆಚ್ಚುಗೆ ಮಾತುಗಳು ಕೇಳಿ ಬಂದಿವೆ.