ಅಣಶಿ ವಲಯಾರಣ್ಯಾಧಿಕಾರಿ ಮತ್ತು ಉಪ ವಲಯಾರಣ್ಯಾಧಿಕಾರಿಯವರ ವರ್ಗಾವಣೆಗೆ ಆಗ್ರಹಿಸಿ ಕುಂಬಾರವಾಡದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಮನವಿ ಸಲ್ಲಿಕೆ

ಜೊಯಿಡಾ; ತಾಲೂಕಿನ ವನ್ಯಜೀವಿ ವಿಭಾಗದ ಅಣಶಿ ವಲಯಾರಣ್ಯಾಧಿಕಾರಿ ಮತ್ತು ಉಪ ವಲಯಾರಣ್ಯಾಧಿಕಾರಿಯವರು ಮಳೆಗಾಲದ ಕಾಲು ಸಂಕ ಹಾಕಲು ಅವಕಾಶ ನೀಡದೇ ಜನರು ನಡುಗಡ್ಡೆಯಲ್ಲಿ ಇರುವಂತಾಯಿತು. ಬೆಳೆ ರಕ್ಷಣೆಗೆ ಹಾಕಿದ ಐಬೆಕ್ಸ್ ತಂತಿಯನ್ನು ತೆಕೊಂಡು ಹೋಗಿ ಜನರಿಗೆ ಕಿರುಕುಳ ನೀಡಿ ಕಾಡಿನಿಂದ ಹೊರ ಹಾಕಲು ಕುತಂತ್ರ ಹೆಣೆಯುತ್ತಿದ್ದು, ಈ ಇಬ್ಬರು ಅಧಿಕಾರಿಗಳನ್ನು ಒಂದು ವಾರದೊಳಗೆ ವರ್ಗಾವಣೆ ಮಾಡಬೇಕು, ಇಲ್ಲವಾದಲ್ಲಿ ಉಗ್ರ ಹೋರಾಟದ ಎಚ್ಚರಿಕೆಯೊಂದಿಗೆ ಅಣಶಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ ಸ್ಥಳೀಯ ಗ್ರಾಮಸ್ಥರು ಕುಂಬಾರವಾಡದಲ್ಲಿ ಇಂದು ಭಾನುವಾರ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರಾದ ಅನಿಲ್ ಗಾವಡಾ, ಚಂದ್ರಕಾಂತ ಗಾವಡಾ, ಗುರುದಾಸ್ ಗಾವಡಾ, ಶ್ಯಾಮು ಗಾವಡಾ, ಸುಭಾಷ್ ಗಾವಡಾ ಮೊದಲಾದವರು ಉಪಸ್ಥಿತರಿದ್ದರು.