ಸಿದ್ದಾಪುರ : ರಾಷ್ಟ್ರೀಯ ಈಡಿಗ ನಾಮಧಾರಿ ಮಹಾಮಂಡಳಿ ಉತ್ತರ ಕನ್ನಡ ಜಿಲ್ಲಾ ಸಂಘದಿಂದ ಸಚಿವ ಮಧು ಬಂಗಾರಪ್ಪನವರಿಗೆ ತಾಳಗುಪ್ಪದಲ್ಲಿ ಸನ್ಮಾನಿಸಿದರು.
ಜಿಲ್ಲಾಧ್ಯಕ್ಷ ವೀರಭದ್ರ ನಾಯ್ಕ್ ಸಚಿವರೊಂದಿಗೆ ಮಾತನಾಡಿ ಆಗಸ್ಟ್ 13ರಂದು ಶಿರಸಿಯಲ್ಲಿ ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ನಡೆಯಲಿರುವ ಚಿಂತನ ಮಂಥನ ಸಭೆಗೆ ಉದ್ಘಾಟಕರಾಗಿ ಆಗಮಿಸುವಂತೆ ಆಹ್ವಾನಿಸಿದರು.
ಈ ಸಂದರ್ಭದಲ್ಲಿ ಪ್ರಮುಖರಾದ ಬಾಬು ನಾಯ್ಕ್, ಅನಿಲ್ ಕೊಠಾರಿ, ರಾಜೇಶ್ ನಾಯ್ಕ್, ಪಾಂಡುರಂಗ ಚೆನ್ಮಾವ್ ಮತ್ತಿತರರು ಉಪಸ್ಥಿತರಿದ್ದರು