ದಾಂಡೇಲಿ : ನಗರದ ಹಳೆ ದಾಂಡೇಲಿಯ ಕನ್ನಡ ಶಾಲೆಯ ಹಿಂಬದಿ ಪ್ರದೇಶದಲ್ಲಿ ಕೌಡಿ ಪೀರಾ ಕಾರ್ಯಕ್ರಮವನ್ನು ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ.
ಇಲ್ಲಿ ಸುಮಾರು 50 ವರ್ಷಗಳಿಂದ ಆಚರಿಸಲಾಗುತ್ತಿರುವ ಕೌಡಿ ಪೀರಾ ಮೊಹರಂ ಆಚರಣೆಯನ್ನು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸ್ಥಳೀಯ ಹಜರತ್ ಸೈಯದ್ ಮೌಲಾ ಕಮೀಟಿ ವತಿಯಿಂದ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತಿದೆ. ಇಂದು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಮುಸ್ಲಿಂ ಧರ್ಮ ಬಾಂಧವರು ಮಾತ್ರವಲ್ಲದೇ ಎಲ್ಲಾ ಧರ್ಮಿಯರು ಆಗಮಿಸಿದ್ದರು. ಇಲ್ಲಿ ಹಿಂದೂ ಧರ್ಮಿಯರು ಮತ್ತು ಮುಸ್ಲಿಂ ಧರ್ಮಿಯರು ಪರಸ್ಪರ ಒಂದಾಗಿ ಕೌಡಿ ಪೀರಾ ಕಾರ್ಯಕ್ರಮವನ್ನು ಆಯೋಜಿಸುವ ಮೂಲಕ ಸೌಹಾರ್ದತೆಯ ಸಂದೇಶವನ್ನು ಸಾರುತ್ತಿದ್ದಾರೆ.